Tuesday, June 9, 2026
spot_imgspot_img
spot_imgspot_img

ಮಂಗಳೂರು: ಸ್ವಂತ ತಂದೆಯಿಂದಲೇ ಇಬ್ಬರು ಪುತ್ರಿಯರ ಮೇಲೆ ನಿರಂತರ ಅತ್ಯಾಚಾರ!

- Advertisement -
- Advertisement -

ಸುರತ್ಕಲ್: ಸ್ವಂತ ತಂದೆಯೇ ಪುತ್ರಿಯರ ಮೇಲೆ ನಿರಂತರ ಅತ್ಯಾಚಾರ ಎಸಗುತ್ತಿದ್ದ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. ಆರೋಪಿಯನ್ನು ಪೊಲೀಸರು ಬಂಧಿಸಿದ್ದು, ಮಂಗಳೂರಿನ ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

18 ಮತ್ತು 17ವರ್ಷದ ಇಬ್ಬರ ಪುತ್ರಿಯರ ಮೇಲೆ ಒಂದು ವರ್ಷಗಳಿಂದ ಲೈಂಗಿಕ ಕಿರುಕುಳ ನೀಡುತ್ತಿದ್ದು, ಇತ್ತೀಚಿಗಷ್ಟೆ ಪುತ್ರಿಯರು ತಾಯಿಯ ಜೊತೆ ಮಾವನ ಮನೆಗೆ ತೆರಳಿದಾಗ ದುಷ್ಕೃತ್ಯದ ಬಗ್ಗೆ ಬಾಯ್ಬಿಟ್ಟಿದ್ದು ಇದರಂತೆ ಮಾವನ ಕಡೆಯವರು ಠಾಣೆಗೆ ದೂರು ದಾಖಲಿಸಿದ್ದಾರೆ.

ಆರೋಪಿಯನ್ನು ಸುರತ್ಕಲ್ ಬಳಿಯ ಕಾಟಿಪಳ್ಳ ಪರಿಸರದಲ್ಲಿ ಪೊಲೀಸರು ಬಂಧಿಸಿದ್ದು, ಆರೋಪಿ ವಿರುದ್ಧ ಪೋಕ್ಸೋ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ಮನೆಯಲ್ಲಿ ಹೆಂಡತಿ ಮಕ್ಕಳ ಜೊತೆ ಹಲ್ಲೆಯನ್ನು ನಡೆಸುತ್ತಿದ್ದ ಎಂದು ದೂರಲಾಗಿದೆ. ಮನೆಯಲ್ಲಿ ಹೆಂಡತಿ ಮಕ್ಕಳನ್ನು ಲೈಂಗಿಕವಾಗಿ ಬಳಸಿಕೊಳ್ಳುವ ಆರೋಪ ಕೇಳಿಬಂದಿದೆ.

- Advertisement -

Related news

error: Content is protected !!