Friday, March 29, 2024
spot_imgspot_img
spot_imgspot_img

ಮಂಗಳೂರು: ತಲೆಕೆಳಗಾಗಿ ಹಾರಿದ ರಾಷ್ಟ್ರಧ್ವಜ ; ಸಚಿವರು, ಜಿಲ್ಲಾಧಿಕಾರಿ, ಶಾಸಕರು, ನೆರೆದವರೂ ಸೆಲ್ಯೂಟ್ ಹೊಡೆದರು..!

- Advertisement -G L Acharya panikkar
- Advertisement -

ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಎಡವಟ್ಟುವೊಂದು ನಡೆದಿದೆ. ಕಾರ್ಯಕ್ರಮದಲ್ಲಿ ಧ್ವಜಾರೋಹಣದ ವೇಳೆ ರಾಷ್ಟ್ರಧ್ವಜ ತಲೆಕೆಳಗಾಗಿ ಹಾರಿದ್ದು ನೆರೆದ ಅಧಿಕಾರಿಗಳನ್ನು ಮುಜುಗರಕ್ಕೆ ಈಡುಮಾಡಿದೆ.

ಧ್ವಜ ಸ್ತಂಭದಲ್ಲಿ ಮೊದಲೇ ರೆಡಿ ಮಾಡಿದ್ದ ಧ್ವಜವನ್ನು ದ.ಕ ಜಿಲ್ಲಾ ಉಸ್ತುವಾರಿ ಸಚಿವ ಎಸ್ ಅಂಗಾರ ಧ್ವಜದ ಹಗ್ಗ ಎಳೆದು ಹಾರಿಸಿದ್ದಾರೆ. ಸಚಿವ ಅಂಗಾರ ಧ್ವಜಕ್ಕೆ ಸೆಲ್ಯೂಟ್ ಹೊಡೆಯುತ್ತಿದ್ದಂತೆ ಜೊತೆಗಿದ್ದ ಜಿಲ್ಲಾಧಿಕಾರಿ ರಾಜೇಂದ್ರ ಕೆ.ವಿ. ಮತ್ತು ಪೊಲೀಸ್ ಕಮಿಷನರ್ ಶಶಿಕುಮಾರ್ ಸಹ ಧ್ವಜವಂದನೆ ಸಲ್ಲಿಸಿದ್ದಾರೆ. ಅಂತೆಯೇ ನೆರೆದ ಮಂದಿಯೂ ಅಚಾತುರ್ಯವನ್ನು ಗಮನಿಸದೆ ಧ್ವಜವಂದನೆ ಸಲ್ಲಿಸಿದ್ದಾರೆ.

ತ್ರಿವರ್ಣ ಧ್ವಜ ತಲೆಕೆಳಗಾಗಿ ಹಾರಿದ್ದು ಅಲ್ಲಿದ್ದವರಿಗೆ ಅಲ್ಲಿವರೆಗೂ ಗೊತ್ತಿರಲಿಲ್ಲ. ಆನಂತರ ಅಧಿಕಾರಿಗಳು ಧ್ವಜ ತಲೆಕೆಳಗಾಗಿದ್ದನ್ನು ಗಮನಿಸಿ ಮತ್ತೆ ಕೆಳಗಿಳಿಸಿ ಸರಿ ಪಡಿಸಿದ್ದಾರೆ ಎನ್ನಲಾಗಿದೆ. ಈ ಕಾರ್ಯಕ್ರಮದಲ್ಲಿ ಸಂಸದ ನಳಿನ್ ಕುಮಾರ್, ಶಾಸಕರಾದ ವೇದವ್ಯಾಸ ಕಾಮತ್, ಯು .ಟಿ. ಖಾದರ್ ಸೇರಿದಂತೆ ಅಧಿಕಾರಿ ವರ್ಗ ತೀವ್ರ ಮುಜುಗರಕ್ಕೆ ಒಳಗಾಗಿದ್ದಾರೆ.

- Advertisement -

Related news

error: Content is protected !!