Wednesday, May 1, 2024
spot_imgspot_img
spot_imgspot_img

ಮಂಗಳೂರು: ಕೈಕಂಬ ಪರಿಸರದಲ್ಲೊಂದು ಹೈಟೆಕ್ ಗ್ಯಾಂಗ್! ಕಾಲೇಜು ಕನ್ಯೆಯರು, ಯುವತಿಯರೇ ಇವರ ಟಾರ್ಗೇಟ್

- Advertisement -G L Acharya panikkar
- Advertisement -

ಮಂಗಳೂರು: ಇತ್ತೀಚಿನ ದಿನಗಳಲ್ಲಿ ಹನಿಟ್ರ್ಯಾಪ್ ಜಾಲ ಮಂಗಳೂರಿನಲ್ಲಿ ಸಕ್ರೀಯವಾಗಿ ತೊಡಗಿಕೊಂಡಿರುವುದು ಪೊಲೀಸರಿಗೆ ತಿಳಿಯದ ವಿಷಯವೇನಲ್ಲ. ಈ ಜಾಲಕ್ಕೆ ಸಿಲುಕಿ ಅನೇಕ ಅಮಾಯಕರು ಆತ್ಮಹತ್ಯೆಗೈದಿದ್ದು ಇದೆ. ಆದರೆ ಪೊಲೀಸ್ ಇಲಾಖೆಗೆ ಇಂತಹ ಸಣ್ಣ ಮಾಹಿತಿಯಿದ್ದರೂ ಕೆಲವೊಮ್ಮೆ ನಿರ್ಲಕ್ಷ್ಯ ವಹಿಸಿದ ಪರಿಣಾಮವಾಗಿ ಅದು ಬೃಹದಾಕಾರವಾಗಿ ಬೆಳೆದು ದೊಡ್ಡ ಮಟ್ಟದ ಅನಾಹುತಕ್ಕೆ ಕಾರಣವಾಗಿದೆ.

driving

ಆದರೆ ನಾವಿಂದು ಇಲ್ಲಿ ಹೇಳ ಹೊರಟಿರುವುದು ಗುರುಪುರ ಕೈಕಂಬ ಪರಿಸರದಲ್ಲಿ ಸಕ್ರೀಯವಾಗಿ ಕಾರ್ಯಾಚರಣೆಯಲ್ಲಿರುವ ಒಂದು ಜಾಲದ ಬಗ್ಗೆ. ಪೊಲೀಸ್ ಇಲಾಖೆ ಇನ್ನಾದರೂ ಈ ಬಗ್ಗೆ ಹೆಚ್ಚಿನ ಮುತುವರ್ಜಿ ವಹಿಸಿ ಇಲ್ಲಿನ ನಾಗರಿಕರಿಗೆ ನೆಮ್ಮದಿ ನೀಡಲಿ ಅನ್ನುವುದೇ ಈ ವರದಿಯ ಉದ್ದೇಶ.

ಬಜಪೆ ಪೊಲೀಸ್ ಠಾಣೆ ವ್ಯಾಪ್ತಿಯ ಕೈಕಂಬ ಪರಿಸರದಲ್ಲಿ ಯುವತಿಯರನ್ನು ಸಪ್ಲೈ ಮಾಡುವ ಕುಖ್ಯಾತ ಹೈಟೆಕ್ ತಂಡವೊಂದು ಸಕ್ರೀಯವಾಗಿದೆ. ಪ್ರೀತಿ ಪ್ರೇಮದ ಹೆಸರಿನಲ್ಲಿ ಅಮಾಯಕ ಯುವತಿಯರನ್ನು ಪುಸಲಾಯಿಸಿ ಅವರನ್ನು ತಮ್ಮ ಬುಟ್ಟಿಗೆ ಹಾಕಿಕೊಂಡು ಅನೈತಿಕತೆಗೆ ತಳ್ಳುವ ಜಾಲವೊಂದು ಸದ್ದಿಲ್ಲದೆ ಕಾರ್ಯಾಚರಿಸುತ್ತಿದೆ.

ಕಾಂಜಿ ಪಿಂಜಿ ಯುವಕರ ತಂಡವೊಂದು ಬೃಹತ್ ಮೊತ್ತದ ಐಷಾರಾಮಿ ಕಾರುಗಳಲ್ಲಿ ಸುತ್ತಾಡುತ್ತಾ ಅಮಾಯಕ ಕಾಲೇಜು ಕನ್ಯೆಯರು, ಯುವತಿಯರನ್ನು ಮೋಸದ ಬಲೆಗೆ ಬೀಳಿಸುತ್ತಿದ್ದಾರೆ. ಸೂಟು ಬೂಟು ಹಾಕಿಕೊಂಡು, ಯಾರದ್ದೋ ಬಾಡಿಗೆ ಐಷಾರಾಮಿ ಕಾರುಗಳಲ್ಲಿ ಸುತ್ತಾಡುವ ಯುವಕರ ಕಾರುಬಾರು ನೋಡಿ ಯುವತಿಯರು ತಮಗೆ ಅರಿವಿಲ್ಲದಂತೆ ಇವರ ಮೋಸದ ವ್ಯೂಹಕ್ಕೆ ಬೀಳುತ್ತಿದ್ದಾರೆ. ಕಾಲೇಜು ಕನ್ಯೆಯರು, ಯುವತಿಯರ, ಗಂಡ ವಿದೇಶದಲ್ಲಿರುವ ಮಹಿಳೆಯರ ಮೊಬೈಲ್ ನಂಬರ್ ಪಡೆದು ಪ್ರೀತಿ ಪ್ರೇಮದ ಹೆಸರಿನಲ್ಲಿ ಅವರೊಂದಿಗೆ ಚಾಟಿಂಗ್ ಮಾಡುತ್ತಾ ಐಷಾರಾಮಿ ಕಾರುಗಳಲ್ಲಿ ಅವರನ್ನು ಸುತ್ತಾಡಿಸುತ್ತಾ ಕೊನೆಗೆ ಅನೈತಿಕತೆಗೆ ಬಳಸಿ ಅದನ್ನು ವಿಡಿಯೋ ಮಾಡಿ ಬ್ಲ್ಯಾಕ್ ಮೇಲ್ ಮಾಡುವ ಪುಂಡು ಪೋಕರಿಗಳ ಗುಂಪೊಂದು ಕೈಕಂಬದ ಪರಿಸರದಲ್ಲಿ ಸಕ್ರೀಯವಾಗಿದೆ.

ಹೆಚ್ಚಿನ ಕಾಲೇಜು ಕನ್ಯೆಯರು ಹಾಗೂ ಪತಿ ಗಲ್ಫ್ ನಲ್ಲಿದ್ದು ಊರಿನಲ್ಲಿರುವ ಅವರ ಪತ್ನಿಯರು ಇವರ ಮೋಸದ ಜಾಲಕ್ಕೆ ಸಿಲುಕಿದವರಾಗಿದ್ದಾರೆ. ಇವರ ಮೋಸದ ಮೋಹಕ್ಕೆ ಬಿದ್ದು ಶೀಲ, ಮಾನ,ಹಣ, ಒಡವೆ ಕಳೆದುಕೊಂಡ ಅನೇಕ ಉದಾಹರಣೆಗಳಿವೆ.

ಇತ್ತೀಚೆಗೆ ಬಡಕಬೈಲಿನ ಚಾಲಿಪೋಲಿಯೊಬ್ಬ ಒಂದೇ ಮನೆಯ ಅಕ್ಕ ತಂಗಿಯರನ್ನು ತನ್ನ ಮೋಸದ ಬಲೆಗೆ ಬೀಳಿಸಿ ಅನೈತಿಕ ಚಟುವಟಿಕೆಗೆ ಬಳಸಿದ ಕಾರಣಕ್ಕಾಗಿ ನಾಗರೀಕರೆ ಹಿಡಿದು ಗೂಸಾ ಕೊಟ್ಟಿದ್ದರು.

ಕತ್ತಲು ಆವರಿಸುತ್ತಿದ್ದಂತೆ ತಮ್ಮ ಆಟಾಟೋಪ ತೋರುವ ಪುಂಡು ಪೋಕರಿಗಳ ಗುಂಪು ಸಂಜೆ 7 ರಿಂದ ರಾತ್ರಿ 1 ಗಂಟೆ ತನಕ ತಮ್ಮ ಕಾರುಬಾರನ್ನು ಗಲ್ಲಿ ಮೂಲೆಗಳಲ್ಲಿ ಆರಂಭಿಸುತ್ತಾರೆ. ಐಷಾರಾಮಿ ಕಾರೇ ಇವರಿಗೆ ಮಂಚ. ಅದರೊಳಗಡೆಯೇ ನಡೆಯುತ್ತೆ ಇವರ ಡಿಂಗ್ ಡಾಂಗ್ ವ್ಯವಹಾರ.ಯಾರಿಗೂ ಗೊತ್ತಾಗಬಾರದೆಂದು ಕಾರಿಗೆ ಟಿಂಟ್ ಹಾಕಿರುತ್ತಾರೆ. ಕಾರನ್ನೇ ಲಾಡ್ಜ್ ಮಾಡಿಕೊಂಡು ಯುವತಿಯರನ್ನು ಅನ್ಯರಿಗೆ ಸಪ್ಲೈ ಮಾಡುತ್ತಾರೆ. ಇವರ ಜಾಲಕ್ಕೆ ಒಮ್ಮೆ ಬಿದ್ದು ಬಿಟ್ಟರೆ ಸಾಕು. ಅವರನ್ನೇ ಬ್ಲ್ಯಾಕ್ ಮೇಲ್ ಮಾಡುತ್ತಾರೆ. ಮಾನ, ಮರ್ಯಾದೆಗೆ ಹೆದರಿ ಕೆಲವರು ಚಿನ್ನ, ಒಡವೆ ಕೊಟ್ಟು ಕೈ ತೊಳೆದುಕೊಂಡರೆ, ಅವರ ಬೇಡಿಕೆಗೆ ಒಪ್ಪದೆ ಇದ್ದರೆ ತಮ್ಮ ಸರಸದ ವಿಡಿಯೋ ವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಾಕುವುದಾಗಿ ಬೆದರಿಸಿ ದುಡ್ಡು ಪೀಕಿಸುತ್ತಾರೆ.ಈ ಜಾಲದ ಒಬ್ಬೊಬ್ಬ ಸದಸ್ಯನಲ್ಲಿ ಸರಿ ಸುಮಾರು 35-40 ಕ್ಕೂ ಮಿಕ್ಕ ಮಹಿಳೆಯರ, ಯುವತಿಯರ ಮೊಬೈಲ್ ಸಂಖೈ ಇದೆ. ಈ ವ್ಯವಹಾರದಲ್ಲಿ ಮಾತ್ರ ಜಾತಿ ಮತ ಭೇದವಿಲ್ಲದೆ ಸಕ್ರಿಯರಾಗಿದ್ದಾರೆ.ಈ ಜಾಲದ ಕಭಂದ ಬಾಹು ಬಹಳ ಆಳವಾಗಿದ್ದು ಪ್ರತಿಷ್ಠಿತರು ಶಾಮಿಲಾಗಿರುತ್ತಾರೆ. ಮಾತ್ರವಲ್ಲದೆ ಪ್ರತಿಷ್ಠಿತರ ಅಭಯವು ಈ ಜಾಲಕ್ಕಿದೆ.

ಪ್ರತಿಷ್ಠಿತ ಕುಟುಂಬದ ಯುವಕರು ಈ ಜಾಲದಲ್ಲಿದ್ದು ಗಾಂಜಾ, ಡ್ರಗ್ಸ್ ದಂಧೆಯಲ್ಲೂ ತೊಡಗಿಕೊಂಡಿದ್ದಾರೆ. ಕೈಕಂಬದ ಹೊರಗಿನಿಂದ ಬಂದು ಇಲ್ಲಿ ವಾಸ ಮಾಡುವ ಕೆಲವು ಪೋಕರಿ ಯುವಕರು ಈ ಜಾಲದಲ್ಲಿ ಪ್ರಮುಖರಾಗಿದ್ದು ಇದರಿಂದ ಇಲ್ಲಿನ ಸ್ಥಳೀಯರು ತುಂಬಾ ತೊಂದರೆಗೆ ಒಳಗಾಗುತ್ತಿದ್ದಾರೆ. ಪೊಲೀಸರಿಗೆ ಈ ಬಗ್ಗೆ ಮಾಹಿತಿ ಇದ್ದರೂ ಮೌನವಾಗಿರುವುದು ಆಶ್ಚರ್ಯ ತಂದಿದೆ. ಮಂಗಳೂರು ಕಮೀಷನರ್ ಸಾಹೇಬ್ರು ಖುದ್ದು ಗಮನಹರಿಸಿ ಪುಂಡು ಪೋಕರಿಗಳ ಜಾಲವನ್ನು ಮಟ್ಟ ಹಾಕಬೇಕೆಂಬುದು ಇಲ್ಲಿನ ನಾಗರಿಕರ ಅಹವಾಲಾಗಿದೆ. ರಾತ್ರಿ ಹೊತ್ತಲ್ಲಿ ಈ ಗ್ಯಾಂಗ್ ಸಕ್ರೀಯವಾಗಿರುದರಿಂದ ಪೊಲೀಸ್ ಇಲಾಖೆ ನೈಟ್ ರೌಂಡ್ಸ್ ಹಾಕುವ ಮೂಲಕ ಇವರನ್ನು ಮಟ್ಟಹಾಕಿ ಅಮಾಯಕ ಯುವತಿಯರು ಇವರ ಬುಟ್ಟಿಗೆ ಬೀಳದಂತೆ ಕ್ರಮ ವಹಿಸಬೇಕೆಂದು ನಾಗರಿಕರು ಆಗ್ರಹಿಸುತ್ತಿದ್ದಾರೆ.

- Advertisement -

Related news

error: Content is protected !!