Tuesday, June 9, 2026
spot_imgspot_img
spot_imgspot_img

ಮಂಗಳೂರು: ಶಸ್ತ್ರಚಿಕಿತ್ಸೆ ಬಳಿಕ ಹಠಾತ್ ಹೃದಯಾಘಾತ; ಯುವಕ ದುರ್ಮರಣ

- Advertisement -
- Advertisement -

ಮಂಗಳೂರು: ಶಸ್ತ್ರಚಿಕಿತ್ಸೆ ಬಳಿಕ ಕುಸಿದು ಬಿದ್ದು ಯುವಕ ಮೃತಪಟ್ಟ ಘಟನೆ ಮಂಗಳೂರಿನಲ್ಲಿ ನಡೆದಿದೆ. ಉದುಮಾ ಪಲ್ಲಂ ಟೇಕೇಕರದ ನಿವಾಸಿ ಮಹಮ್ಮದ್ ಯಾಸೀನ್ (29) ಮೃತ ದುರ್ದೈವಿ.

ಅನಾರೋಗ್ಯದ ಕಾರಣ ಸೋಮವಾರ ಮಧ್ಯಾಹ್ನ ಮಂಗಳೂರಿ ಆಸ್ಪತ್ರೆಯಲ್ಲಿ ಶಸ್ತ್ರ ಚಿಕಿತ್ಸೆ ನಡೆಸಲಾಗಿದೆ. ಸಂಜೆ ಅವರನ್ನು ವಾರ್ಡ್‌‌ಗೆ ಸ್ಥಳಾಂತರಿಸಲಾಗಿದೆ. ಶಸ್ತ್ರ ಚಿಕಿತ್ಸೆ ಬಳಿಕ ಕುಟುಂಬ ಸದಸ್ಯರೊಂದಿಗೆ ಮಾತನಾಡುತ್ತಿದ್ದರು ಎಂದು ಸಂಬಂಧಿಕರು ತಿಳಿಸಿದ್ದಾರೆ ಎನ್ನಲಾಗಿದೆ.

ವಿಶ್ರಾಂತಿ ಪಡೆಯುತ್ತಿದ್ದಾಗ ಕುಸಿದು ಬಿದ್ದಿದ್ದಾರೆ. ವೈದ್ಯರು ತಕ್ಷಣ ಬಂದು ಪರೀಕ್ಷೆ ಮಾಡಿದ್ದಾರೆ. ಅದಗಾಲೇ ಮೃತಪಟ್ಟಿದ್ದು ವೈದ್ಯರು ಹೃದಯಾಘಾತದಿಂದ ಅಸುನೀಗಿದ್ದಾಗಿ ದೃಢಪಡಿಸಿದ್ದಾರೆ.

ಮೊಹಮ್ಮದ್ ಯಾಸೀನ್ ಒಂದು ತಿಂಗಳ ಹಿಂದಷ್ಟೇ ವಿದೇಶದಿಂದ ತಾಯ್ನಾಡಿಗೆ ಬಂದಿದ್ದರು. ಬಳಿಕ ಆರೋಗ್ಯದಲ್ಲಿ ವ್ಯತ್ಯಾಸ ಕಂಡುಬಂದಿದೆ ಎನ್ನಲಾಗಿದೆ. ಮೃತರು ಅಬ್ದುಲ್ ಖಾದರ್ ಮತ್ತು ಸಫಿಯಾ ದಂಪತಿಯ ಪುತ್ರ.

- Advertisement -

Related news

error: Content is protected !!