- Advertisement -
- Advertisement -



ಬೆಂಗಳೂರು: ಪತ್ನಿಯು ಚಾಲಕನೊಂದಿಗೆ ಮಾತನಾಡಿದ್ದನ್ನು ಕಂಡು ಸಂಶಯಗೊಂಡ ಪತಿ ಆಕೆಯನ್ನು ಕೊಲೆ ಮಾಡಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ದೇವಿಕಾ(50) ಮೃತ ಪತ್ನಿ, ಕುಮಾರ್ ಆರೋಪಿ ಪತಿ.
ದಂಪತಿ ತಮ್ಮ ಕುಟುಂಬ ಸಮೇತ ಕೇರಳ ಪ್ರವಾಸಕ್ಕೆ ತೆರಳಿದ್ದ ವೇಳೆ ದೇವಿಕಾ ಚಾಲಕನ ಜತೆ ಮಾತನಾಡಿದ್ದರು. ಇದರಿಂದ ಅನುಮಾನಗೊಂಡ ಪತಿ ಕುಮಾರ್ ರಾತ್ರಿ ಮಲಗಿದ್ದ ವೇಳೆ ಮಚ್ಚಿನಿಂದ ಕೊಚ್ಚಿ ದೇವಿಕಾಳನ್ನು ಕೊಲೆಗೈದಿದ್ದಾನೆ. ಆಕೆಯನ್ನು ಹತ್ಯೆ ಮಾಡಿದ ಬಳಿಕ ತಾನೂ ಆತ್ಮಹತ್ಯೆಗೆ ಯತ್ನಿಸಿದ್ದು, ಕೂಡಲೇ ಮಕ್ಕಳು ಆತನನ್ನು ತಡೆದಿದ್ದಾರೆ ಎನ್ನಲಾಗಿದೆ.
ವಿಚಾರ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಧಾವಿಸಿದ ಗೋವಿಂದರಾಜನಗರ ಪೊಲೀಸರು ಆರೋಪಿಯನ್ನು ಬಂಧಿಸಿ, ವಿಚಾರಣೆ ನಡೆಸುತ್ತಿದ್ದು, ತನಿಖೆ ಮುಂದುವರೆಸಿದ್ದಾರೆ ಎಂದು ವರದಿ ಮೂಲಕ ತಿಳಿದುಬಂದಿದೆ.
- Advertisement -








