Saturday, April 27, 2024
spot_imgspot_img
spot_imgspot_img

ಪಣಂಬೂರು: ಕುವೈಟ್ ಮತ್ತು ಯುಎಇ ರಾಷ್ಟ್ರಗಳಿಂದ ಬಂದ ಆಕ್ಸಿಜನ್ ಹೊತ್ತ ಹಡಗು!

- Advertisement -G L Acharya panikkar
- Advertisement -

ಪಣಂಬೂರು: ಕುವೈಟ್ ಮತ್ತು ಯುಎಇ ರಾಷ್ಟ್ರಗಳಿಂದ 272.820 ಮೆಟ್ರಿಕ್ ಟನ್ ಆಮ್ಲಜನಕವನ್ನು ಹೊತ್ತ ಹಡಗು ನವಮಂಗಳೂರು ಬಂದರಿಗೆ ಮಂಗಳವಾರ ಬಂದಿದೆ.

ನೌಕಾಪಡೆಯ ಹಡಗು ಐಎನ್‌ಎಸ್ ‘ಶಾರ್ದೂಲ್’ ನವಮಂಗಳೂರು ಬಂದರಿಗೆ 11 ಕಂಟೈನರ್ ಗಳಲ್ಲಿ (ಇದರಲ್ಲಿ 3 ಟ್ರೈಲರ್ ಮೌಂಟೆಡ್ ಕಂಟೈನೆರ್) ದ್ರವೀಕೃತ ಆಮ್ಲಜನಕ ಮತ್ತು 60 ಪ್ಯಾಲೇಟ್ ಗಳಲ್ಲಿ ಆಮ್ಲಜನಕ ಸಿಲಿಂಡರ್ ಗಳನ್ನು (ಒಟ್ಟು 272.820 ಮೆಟ್ರಿಕ್ ಟನ್) ಹೊತ್ತು ಬಂದಿದೆ.

ಹಡಗಿನಿಂದ ಈ ಸರಕನ್ನು ಇಳಿಸಲು ಮಂಗಳೂರಿನ ಗಣೇಶ್ ಶಿಪ್ಪಿಂಗ್ ಏಜೆನ್ಸಿ ಮುತುವರ್ಜಿ ವಹಿಸಿದ್ದು ಉಚಿತವಾಗಿ ಕಾರ್ಯ ನಿರ್ವಸುತ್ತಿದೆ.

ಈ ಸರಕು ನಿರ್ವಹಣೆಯ ಯಶಸ್ಸಿನಲ್ಲಿ ಬಂದರು ಅಧಿಕಾರಿಗಳು, ಸೀಮಾ ಶುಲ್ಕ ಅಧಿಕಾರಿಗಳು,ಇಂಡಿಯನ್ ಆಯಿಲ್ ಸಂಸ್ಥೆ ಮತ್ತು ರೆಡ್ ಕ್ರಾಸ್ ಸಂಸ್ಥೆಯೂ ಭಾಗಿಯಾಗಿದೆ.

- Advertisement -

Related news

error: Content is protected !!