Thursday, April 25, 2024
spot_imgspot_img
spot_imgspot_img

ಮಂಗಳೂರು: ಲೈಟ್ ಹೌಸ್ ರೋಡ್ ಗೆ ‘ಮುಲ್ಕಿ ಸುಂದರರಾಮ ಶೆಟ್ಟಿ’ ಹೆಸರಿಡಲು ಸರ್ಕಾರ ಆದೇಶ

- Advertisement -G L Acharya panikkar
- Advertisement -

ಮಂಗಳೂರು :  ಕರಾವಳಿಯ ಹೆಮ್ಮೆಯ ಸಾಧಕ, ವಿಜಯ ಬ್ಯಾಂಕಿನ ಔನ್ನತ್ಯಕ್ಕೆ ಕಾರಣರಾಗಿದ್ದ ಮುಲ್ಕಿ ಸುಂದರರಾಮ ಶೆಟ್ಟಿ ಅವರಿಗೆ ರಾಜ್ಯ ಸರಕಾರ ಗೌರವ ನೀಡಿದೆ. ಮೂರು ವರ್ಷಗಳ ಹಿಂದೆ ಜಟಾಪಟಿಗೆ ಕಾರಣವಾಗಿದ್ದ ಸುಂದರ ರಾಮ ಶೆಟ್ಟರ ಹೆಸರಿನಲ್ಲಿ ಮಂಗಳೂರಿನಲ್ಲಿ ರಸ್ತೆ ನಾಮಕರಣ ಮಾಡುವುದಕ್ಕೆ ನಗರಾಭಿವೃದ್ಧಿ ಸಚಿವಾಲಯ ಒಪ್ಪಿಕೊಂಡಿದ್ದು ಹಿಂದಿನ ಆದೇಶವನ್ನು ಮರು ಜಾರಿಗೆ ಸೂಚನೆ ನೀಡಿದೆ.

 2020ರ ಸೆಪ್ಟಂಬರ್ 5 ರಂದು ಹಳೆಯ ಆದೇಶವನ್ನು ಊರ್ಜಿತಗೊಳಿಸಿ ನಗರಾಭಿವೃದ್ಧಿ ಸಚಿವಾಲಯದ ಮೂಲದ ಆದೇಶ ಮಾಡಿಸಿದೆ. ಅಲ್ಲಿಗೆ ಎರಡು ಸಮುದಾಯಗಳ ನಡುವಿನ ಪ್ರತಿಷ್ಠೆಗೆ ಕಾರಣವಾಗಿದ್ದ ರಸ್ತೆ ನಾಮಕರಣ ವಿವಾದಕ್ಕೆ ಇತಿಶ್ರೀ ಹಾಕಲಾಗಿದೆ.

ಮಂಗಳೂರಿನ ಅಂಬೇಡ್ಕರ್ ವೃತ್ತದಿಂದ, ಲೈಟ್ ಹೌಸ್ ಹಿಲ್ ಬಳಿಯ ಕೆಥೋಲಿಕ್ ಕ್ಲಬ್ ವರೆಗಿನ ರಸ್ತೆಗೆ ಸುಂದರರಾಮ ಶೆಟ್ಟಿ ಹೆಸರು ನಾಮಕರಣ ಮಾಡಲು 2017ರ ಮೇ 24ರಂದು ಆಗಿನ ರಾಜ್ಯ ಸರಕಾರ ಆದೇಶ ಮಾಡಿತ್ತು. ಆದರೆ, ಕೊನೆಕ್ಷಣದಲ್ಲಿ ಎಚ್ಚತ್ತುಕೊಂಡ ಅಲೋಶಿಯಸ್ ಕಾಲೇಜು ಆಡಳಿತ, ಆಗ ಮಂಗಳೂರು ಶಾಸಕರಾಗಿದ್ದ ಜೆ.ಆರ್ ಲೋಬೊ ಮೂಲಕ ಕೋರ್ಟಿನಿಂದ ತಡೆಯಾಜ್ಞೆ ತಂದಿತ್ತು. ಅಲ್ಲದೆ, ರಸ್ತೆಗೆ ಸುಂದರರಾಮ ಶೆಟ್ಟಿ ಹೆಸರಿಡುವುದಕ್ಕೆ ಆಕ್ಷೇಪ ಸೂಚಿಸಿ ವಿದ್ಯಾರ್ಥಿಗಳ ಮೂಲಕ ಪ್ರತಿಭಟನೆಯನ್ನೂ ನಡೆಸಲಾಗಿತ್ತು.ಬಳಿಕ ಕೋರ್ಟ್ ಮತ್ತು ಮಹಾನಗರ ಪಾಲಿಕೆಯಲ್ಲಿ ಜಟಾಪಟಿ ನಡೆದು ಪ್ರಕ್ರಿಯೆ ನೆನೆಗುದಿಗೆ ಬಿದ್ದಿತ್ತು.

- Advertisement -

Related news

error: Content is protected !!