



ಮಂಗಳೂರು: ಲಯನ್ಸ್ ಇಂಟರ್‌ನ್ಯಾಷನಲ್ ಡಿಸ್ಟ್ರಿಕ್ಟ್ 317D ವತಿಯಿಂದ “ಸಿಂಹದ ಕಲೊಟು ಪಿಲಿಗೊಬ್ಬು” ವಿಶೇಷ ಕಾರ್ಯಕ್ರಮವು ಸೆಪ್ಟೆಂಬರ್ 27ರಂದು ಸಂಜೆ 5 ಗಂಟೆಗೆ ಅದ್ಧೂರಿಯಾಗಿ ನಡೆಯಿತು.
ಲಯನ್ಸ್ ಜಿಲ್ಲೆ 317ಡಿ ಯ ಜಿಲ್ಲಾ ಗವರ್ನರ್ ಕುಡ್ಪಿ ಅರವಿಂದ್ ಶೆಣೈ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ಹುಲಿ ವೇಷ ಸೇರಿದಂತೆ ಕಲಾ ಕ್ಷೇತ್ರದಲ್ಲಿ ಸಾಧನೆ ಮಾಡಿದ ಎರ್ಮಾಳು ಹಿದಾಯತುಲ್ಲ ಸಾಹೇಬ್, ಆರ್ ಜೆ ನಯನ, ರೆಮೋನ ಪಿರೇರ, ಆಸೀಫ್ ಬಪ್ಪಲ್, ಶೀನ ಪೂಜಾರಿ, ಚಂದ್ರಶೇಖರ್ ಕೋಡಿಕಲ್, ಶ್ರೀಧರ್ ಆಚಾರ್ಯ ಗ್ಲಾನ್ಸಿ ಗೊಂಜಾಲ್ವಿಸ್, ಪ್ರಶಾಂತ್ ಡಿಸೋಜ ಸೇರಿ ಒಂಬತ್ತು ಮಂದಿ ಸಾಧಕರನ್ನು ಸನ್ಮಾನಿಸಲಾಯಿತು.

ಆಳ್ವಾಸ್ ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥ ಡಾ. ಮೋಹನ್ ಆಳ್ವ ಮುಖ್ಯ ಅಥಿತಿಗಳಾಗಿದ್ದರು. ಲಯನ್ಸ್ ಸಂಸ್ಥೆಯ ಪೂರ್ವ ಅಂತಾರಾಷ್ಟ್ರೀಯ ನಿರ್ದೇಶಕ ವಿ ವಿ ಕೃಷ್ಣ ರೆಡ್ಡಿ, ಮಲ್ಟಿಪಲ್ ಅಧ್ಯಕ್ಷ ಮೋಹನ್ ಕುಮಾರ್, ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕ ಡಿ ವೇದವ್ಯಾಸ್ ಕಾಮತ್ , ಮುಖ್ಯ ಸಲಹೆಗರ ಸಂಜೀತ್ ಶೆಟ್ಟಿ, ಅಂತಾರಾಷ್ಟ್ರೀಯ ಖ್ಯಾತಿಯ ಹಾಡುಗಾರ ನಿಹಾಲ್ ತಾವ್ರೋ, ಉಪಸ್ಥಿತರಿದ್ದರು.ಅಂತೆಯೇ ನಿಕಟ ಪೂರ್ವ ಗವರ್ನರ್ ಭಾರತಿ ಬಿ ಎಂ, ಉಪ ರಾಜ್ಯ ಪಾಲರುಗಳಾದ ತಾರಾನಾಥ್ ಹೆಚ್ ಎಂ ಮತ್ತು ಗೋವರ್ಧನ್ ಶೆಟ್ಟಿ ಶುಭಾಶಂಸನೆಗೈದರು. ಲಯನ್ಸ್ ಜಿಲ್ಲಾ ಸಂಪುಟ ಸದಸ್ಯರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಸಭಾ ಕಾರ್ಯಕ್ರಮದ ಮೊದಲು ಮಲ್ಲಿಕಟ್ಟೆಯ ಲಯನ್ಸ್ ಸೇವಾ ಮಂದಿರದಿಂದ ಆರಂಭವಾದ ಮೆರವಣಿಗೆಯು ಕದ್ರಿ ಮೈದಾನದವರೆಗೆ ಸಾಗಿ ಬಂತು.
ಲಯನ್ಸ್ ಜಿಲ್ಲಾ ಸದಸ್ಯರ ತಂಡ, ಪೆರ್ಮಯಿ ಪಿಲಿ ರುದ್ರ ಟೈಗರ್ಸ್ ಪೊಳಲಿ ಮತ್ತು ನಂದಿ ಗುಡ್ಡ ಫ್ರೆಂಡ್ಸ್ ಬಾಬು ಗುಡ್ಡೆ ಸೇರಿದಂತೆ ಮೂರು ತಂಡಗಳು ನೃತ್ಯ ಪ್ರದರ್ಶಿಸಿದವು ಮತ್ತು ಈ ತಂಡಗಳಿಗೆ ಗೌರವ ಸಮರ್ಪಣೆ ನಡೆಯಿತು. ಕಾರ್ಯಕ್ರಮದ ಮುಖ್ಯ ಸಂಯೋಜಕ ಗಣೇಶ ಶೆಟ್ಟಿ ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಸ್ವಾಗತಿಸಿ, ಸಂತೋಷ್ ಶೆಟ್ಟಿ ಪ್ರಾರ್ಥನೆ ಸಲ್ಲಿಸಿದರು. ಸುಜಿತ್ ಕುಮಾರ್, ಅನುಷಾ ಪ್ರಶಾಂತ್ ಶೆಟ್ಟಿ, ಪ್ರೀತಿ ರೈ, ಡಾ ವಿದ್ಯಾ ಪ್ರದೀಪ್ ಶೆಟ್ಟಿ, ತ್ರಿವೇಣಿ ಗಣೇಶ್ ಶೆಟ್ಟಿ ಸನ್ಮಾನ ಪತ್ರ ವಾಚಿಸಿದರು. ನಿಖಿಲ್ ಶೆಟ್ಟಿ ವಂದಿಸಿದರು. ಪ್ರಶಾಂತ್ ಬಿ ಶೆಟ್ಟಿ ಮತ್ತು ಮನೋಜ್ ಶೆಟ್ಟಿ ನಿರೂಪಿಸಿದರು.








