- Advertisement -
- Advertisement -
ಮಂಗಳೂರು: ಕೇರಳಿಗರು ಪ್ರತೀನಿತ್ಯ ಮಂಗಳೂರು ಪ್ರಯಾಣಿಸುವುದಕ್ಕೆ ಕೇರಳ ಸರ್ಕಾರ ನಿಷೇಧ ಹೇರಿದೆ.ದ.ಕ ಜಿಲ್ಲೆಯಲ್ಲಿ ಕೋವಿಡ್ ಪ್ರಕರಣ ಹೆಚ್ಚಳ ಹಿನ್ನೆಲೆಯಲ್ಲಿ ಮಂಗಳೂರು ಪ್ರವೇಶಕ್ಕೆ ಕೇರಳದಿಂದ ಕೊಡುತ್ತಿದ್ದ ನಿತ್ಯದ ಪಾಸ್ ರದ್ದು ಪಡಿಸುವ ಮೂಲಕ ಆದೇಶ ಹೊರಡಿಸಿದೆ.
ಇನ್ನು ಮುಂದೆ ತಿಂಗಳಿಗೆ ಒಮ್ಮೆ ಮಾತ್ರ ಮಂಗಳೂರಿಗೆ ಪ್ರಯಾಣಿಸಬಹುದು ಎಂದು ತಿಳಿಸಿದೆ. ತಲಪಾಡಿ ಚೆಕ್ ಪೋಸ್ಟ್ ಮೂಲಕ ಪ್ರತಿನಿತ್ಯ ನೂರಾರು ಮಂದಿ ಒಂದು ದಿನ, ವಾರದ, ತಿಂಗಳ ಪಾಸ್ ನೀಡಲಾಗುತ್ತಿತ್ತು. ಇದೀಗ ಈ ಪಾಸ್ ಅನ್ನು ರದ್ದು ಪಡಿಸಲಾಗಿದೆ.
- Advertisement -