Friday, September 4, 2026
spot_imgspot_img
spot_imgspot_img

ಮಂಗಳೂರು: ನಿಯಂತ್ರಣ ತಪ್ಪಿ ಪಂಪ್‌ವೆಲ್ ಮೇಲ್ಸೇತುವೆಯಿಂದ ಸರ್ವಿಸ್ ರಸ್ತೆಗೆ ಜಾರಿದ ಕಾರು!

- Advertisement -
- Advertisement -

ಮಂಗಳೂರು: ನಗರದ ಪಂಪ್‌ವೆಲ್ ಮೇಲ್ಸೇತುವೆಯಿಂದ ಕಾರೊಂದು ಸರ್ವಿಸ್ ರಸ್ತೆಗೆ ಜಾರಿದ ಘಟನೆ ಗುರುವಾರ ಸಂಜೆ ನಡೆದಿದೆ.

ಘಟನೆಯಲ್ಲಿ ಕಾರು ನಗರದ ಖಾಸಗಿ ಆಸ್ಪತ್ರೆಯ ವೈದ್ಯರೊಬ್ಬರದ್ದಾಗಿದೆ. ತೊಕ್ಕೊಟ್ಟು ಕಡೆಯಿಂದ ಮಂಗಳೂರಿಗೆ ಬರುತ್ತಿದ್ದ ವೇಳೆ ಎದುರಿನಿಂದ ವೇಗವಾಗಿ ವಾಹನವೊಂದು ಬಂದಿದ್ದು, ವಾಹನದ ವೇಗಕ್ಕೆ ರಸ್ತೆಯಲ್ಲಿದ್ದ ಮಳೆನೀರು ವೈದ್ಯರ ಕಾರಿನ ಮುಂಭಾಗದ ಗ್ಲಾಸ್ ಮೇಲೆ ಬಿದ್ದಿದೆ. ಈ ವೇಳೆ ದಾರಿ ಕಾಣದೇ ನಿಯಂತ್ರಣ ತಪ್ಪಿದ ಕಾರು ಸರ್ವಿಸ್ ರಸ್ತೆಗೆ ಜಾರಿದೆ. ಸ್ಥಳೀಯರ ಸಹಕಾರದೊಂದಿಗೆ ಪೊಲೀಸರು ಕೆಳ ರಸ್ತೆಗೆ ಜಾರಿದ ಕಾರನ್ನು ಸಮತಟ್ಟಾದ ರಸ್ತೆಗೆ ತಂದು ನಿಲ್ಲಿಸಿದರು. ಘಟನಾ ಸ್ಥಳಕ್ಕೆ ಮಂಗಳೂರು ದಕ್ಷಿಣ ಸಂಚಾರ ಠಾಣೆ ಪೊಲೀಸರು ಭೇಟಿ ನೀಡಿದ್ದಾರೆ ಎಂದು ತಿಳಿದುಬಂದಿದೆ.

- Advertisement -

Related news

error: Content is protected !!