Saturday, April 20, 2024
spot_imgspot_img
spot_imgspot_img

ಮಂಗಳೂರಿನ ಕುದ್ಮುಲ್ ರಂಗರಾವ್ ಪುರಭವನದಲ್ಲಿ ಜನಮನವನ್ನು ಆಕರ್ಷಿಸಿದ “ಶ್ರೀರಾಮ ನೃತ್ಯ ನಮನ” ಕಾರ್ಯಕ್ರಮ

- Advertisement -G L Acharya panikkar
- Advertisement -

ಮಂಗಳೂರು: ಬೆಂಗಳೂರಿನ ಪ್ರತಿಷ್ಟಿತ ಕಲಾ ಸಂಸ್ಥೆ ಇಂಟರ್‌ನ್ಯಾಶನಲ್ ಆರ್ಟ್ಸ್ ಎಂಡ್ ಕಲ್ಚರಲ್ ಫೌಂಡೇಶನ್ ವತಿಯಿಂದ ಸಂಸ್ಕೃತಿ ಸಚಿವಾಲಯ ಭಾರತ ಸರಕಾರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕರ್ನಾಟಕ ಸರಕಾರ ಇವರ ಸಹಯೋಗದೊಂದಿಗೆ ಖ್ಯಾತ ಕಲಾ ಪ್ರವರ್ತಕ, ಛಾಯಾಗ್ರಾಹಕ, ಬಹುಮುಖ ಪ್ರತಿಭೆ ಶ್ರೀವತ್ಸ ಶಾಂಡಿಲ್ಯ ಇವರ ನೇತ್ರತ್ವದಲ್ಲಿ “ಶ್ರೀರಾಮ ನೃತ್ಯ ನಮನ” ಕಾರ್ಯಕ್ರಮ ಮಂಗಳೂರಿನ ಕುದ್ಮುಲ್ ರಂಗರಾವ್ ಪುರಭವನದಲ್ಲಿ ಭಾನುವಾರ ನಡೆಯಿತು.

ಆರ್ ಎಸ್ ಎಸ್ ಪ್ರಚಾರಕರಾದ ವಿಕ್ರಮ ವಾರ ಪತ್ರಿಕೆಯ ಸಂಪಾದಕ ನಾ.ನಾಗರಾಜ್ ಇವರು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಅತಿಥಿಗಳಾಗಿ ಎಬಿವಿಪಿಯ ಮಂಗಳೂರು ವಿಭಾಗ ಸಂಘಟನಾ ಕಾರ್ಯದರ್ಶಿ ಬಸವೇಶ್ ಅವರು ಪಾಲ್ಗೊಂಡಿದ್ದರು.

ಕರ್ನಾಟಕ ಕಲಾಶ್ರೀ ವಿದ್ವಾನ್ ಕೆ. ಚಂದ್ರಶೇಖರ್ ನಾವಡ, ವಿದೂಷಿ ಪ್ರತಿಮಾ ಶ್ರೀಧರ್, ವಿದೂಷಿ ಸೌಮ್ಯ ಸುಧೀಂದ್ರ ರಾವ್, ವಿದೂಷಿ ಡಾ. ಶ್ರೀವಿದ್ಯಾ ಮುರಳಿಧರ್, ವಿದೂಷಿ ಶಾರದಾ ಮಣಿ ಶೇಖರ್, ವಿದೂಷಿ ಶ್ರೀಲತಾ ನಾಗರಾಜ್, ವಿದೂಷಿ ವಿದ್ಯಾಶ್ರೀ ರಾಧಕೃಷ್ಣ, ವಿದೂಷಿ ಸುಮಂಗಲಾ ರತ್ನಾಕರ್ ರಾವ್ ಮುಂತಾದವರು ಉಪಸ್ಥಿತರಿದ್ದರು.

ಇಂಟರ್‌ನ್ಯಾಶನಲ್ ಆರ್ಟ್ಸ್ ಎಂಡ್ ಕಲ್ಚರಲ್ ಫೌಂಡೇಶನ್ ಬೆಂಗಳೂರು ಇದರ ನಿರ್ದೇಶಕರಾದ ಶ್ರೀವತ್ಸ ಶಾಂಡಿಲ್ಯ ಸ್ವಾಗತಿಸಿ, ಪ್ರಸ್ತಾವನೆಗೈದರು.

ಕಾರ್ಯಕ್ರಮದಲ್ಲಿ ಎಂಟು ಪ್ರಸಿದ್ಧ ನೃತ್ಯ ತಂಡಗಳು ರಾಮಾಯಣದ ಎಂಟು ಸನ್ನಿವೇಶಗಳ ಬಗ್ಗೆ ನೃತ್ಯ ಪ್ರದರ್ಶನ ನೀಡಿದವು. ನಾಲ್ಕು ಇತರ ತಂಡಗಳು ರಾಮ ಕೀರ್ತನೆ, ರಾಮ ಗೀತೆ‌, ಭಜನೆ ಪ್ರಸ್ತುತ ಪಡಿಸಿದವು. ಸುಮಾರು ನೂರಕ್ಕೂ ಹೆಚ್ಚು ನೃತ್ಯ ಕಲಾವಿದರು,, ಹಾಡುಗಾರರು ಶ್ರೀರಾಮನ ಚಿಂತನ-ಮಂಥನ ಕಲಾ ಪ್ರದರ್ಶನ ನೀಡಿದರು. ಶ್ರೀಮತಿ ಮಂಜುಳಾ. ಪಿ. ಶೆಟ್ಟಿ ನಿರೂಪಿಸಿದರು.

- Advertisement -

Related news

error: Content is protected !!