Wednesday, May 8, 2024
spot_imgspot_img
spot_imgspot_img

ಕರಾವಳಿಗೂ ಅಪ್ಪಳಿಸಲಿದೆ ತೌಕ್ತೆ ಚಂಡಮಾರುತ; ಮೀನುಗಾರರಿಗೆ ಸಮುದ್ರಕ್ಕಿಳಿಯದಂತೆ ಸೂಚನೆ!

- Advertisement -G L Acharya panikkar
- Advertisement -

ಮಂಗಳೂರು: ವಾಯುಭಾರ ಕುಸಿತದಿಂದಾಗಿ ಅರಬ್ಬಿ ಸಮುದ್ರದಲ್ಲಿ ಚಂಡಮಾರುತ ಏಳುವ ಸಾಧ್ಯತೆಗಳಿದ್ದು, ಈ ಚಂಡಮಾರುತಕ್ಕೆ “ತೌಕ್ತೇ” ಎಂದು ಹೆಸರಿಡಲಾಗಿದೆ. ಮೀನುಗಾರರಿಗೆ ಸಮುದ್ರಕ್ಕಿಳಿಯದಂತೆ ಸೂಚಿಸಲಾಗಿದೆ.

ಗುಜರಾತ್ ಭಾಗದ ಕರಾವಳಿಯಲ್ಲಿ ಉಂಟಾಗಿರುವ ವಾಯುಭಾರ ಕುಸಿತದಿಂದ ಚಂಡಮಾರುತ ಉಂಟಾಗಲಿದ್ದು, ಮ್ಯಾನ್ಮಾರ್ ದೇಶವು ಅದಕ್ಕೆ ‘ತೌಕ್ತೆ’ (ಹಲ್ಲಿ) ಎಂದು ಹೆಸರಿಟ್ಟಿದೆ. ಉಸ್ತುವಾರಿ ಕೇಂದ್ರ ಬೆಂಗಳೂರು ಇವರ ಮುನ್ಸೂಚನೆಯಂತೆ ರಾಜ್ಯದ ಕರಾವಳಿ ಭಾಗದಲ್ಲಿ ಮುಂದಿನ 4 ದಿನಗಳ ಕಾಲ ಸಾಮಾನ್ಯಕ್ಕಿಂತ ಹೆಚ್ಚಿನ ಮಳೆಯಾಗುವ ಸಾಧ್ಯತೆ ಇದೆ. ಪೂರ್ವ ಮಧ್ಯ ಅರಬ್ಬಿ ಸಮುದ್ರದಲ್ಲಿ ಮೇ.16ರ ಸುಮಾರಿಗೆ ಬಿರುಗಾಳಿಯಾಗಿ ತೀವೃವಾಗಲಿದ್ದು, ಈ ಎಚ್ಚರಿಕೆ ಹಿನ್ನೆಲೆಯಲ್ಲಿ ಭಾರತೀಯ ಮೀನುಗಾರಿಕೆ ದೋಣಿಗಳು ಮೀನುಗಾರಿಕೆಗೆ ಇಳಿಯದಂತೆ ಕೋಸ್ಟ್ ಗಾರ್ಡ್ ಕರ್ನಾಟಕ ಸೂಚನೆ ನೀಡಿದೆ.

ಗಸ್ತು ತಿರುಗುತ್ತಿದ್ದ ಐಸಿಜಿ ಹಡಗುಗಳು ಮತ್ತು ಸಿಜಿ ಡಾರ್ನಿಯರ್ ವಿಮಾನಗಳು ವಿಎಚ್‌ಎಫ್ ಚಾನೆಲ್‌ನಲ್ಲಿ ಸಮುದ್ರದಲ್ಲಿರುವ ಮೀನುಗಾರರಿಗೆ ಹವಾಮಾನ ಎಚ್ಚರಿಕೆ ನೀಡಿ ಹತ್ತಿರದ ತೀರಕ್ಕೆ ಮರಳುತ್ತಿವೆ. ತೌಕ್ತೇ ಚಂಡಮಾರುತದಿಂದ ಕರ್ನಾಟಕದ ಕರಾವಳಿ, ಕೇರಳ, ತಮಿಳುನಾಡು, ಲಕ್ಷದ್ವೀಪಗಳಲ್ಲಿ ಜೋರಾದ ಗಾಳಿಯೊಂದಿಗೆ ಭಾರಿ ಮಳೆಯಾಗಬಹುದು ಎಂದು ಹವಾಮಾನ ಇಲಾಖೆ ತಿಳಿಸಿದೆ.

ಗಂಟೆಗೆ 40-50 ಕಿಮೀ ವೇಗದಲ್ಲಿ ಗಾಳಿ ಬೀಸಲಿದೆ. ಮೇ 20ರಂದು ಗುಜರಾತ್‌ನ ಕಛ್ ಅಥವಾ ಆ ರಾಜ್ಯದ ಉತ್ತರ ಭಾಗವನ್ನು ಹಾದು ಒಮಾನ್‌ನತ್ತ ಸಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ. ಪಾಕ್‌ನ ದಕ್ಷಿಣ ಭಾಗದಲ್ಲೂ ಚಂಡಮಾರುತದ ಪ್ರಕೋಪ ಕಾಣಿಸುವ ಸಾಧ್ಯತೆ ಇದೆ.

- Advertisement -

Related news

error: Content is protected !!