Friday, April 19, 2024
spot_imgspot_img
spot_imgspot_img

ತಮ್ಮ ಮನೆಯನ್ನೇ ಕೊವಿಡ್ ಕೇರ್ ಸೆಂಟರ್ ಆಗಿ ಪರಿವರ್ತಿಸಿದ ಗೃಹಸಚಿವ!

- Advertisement -G L Acharya panikkar
- Advertisement -

ಹಾವೇರಿ: ಜಿಲ್ಲೆಯಲ್ಲಿ ಕೊರೋನಾ ಸೋಂಕು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಗೃಹಸಚಿವ ಬಸವರಾಜ ಬೊಮ್ಮಾಯಿ ಅವರು ತಮ್ಮ ಮನೆಯನ್ನೇ ಕೊವಿಡ್ ಕೇರ್ ಸೆಂಟರ್ ಆಗಿ ಪರಿವರ್ತಿಸಿದ್ದಾರೆ.

ಹಾವೇರಿ ಜಿಲ್ಲೆಯ ಶಿಗ್ಗಾಂವಿ ಪಟ್ಟಣದಲ್ಲಿರುವ ಬಸವರಾಜ ಬೊಮ್ಮಾಯಿ ನಿವಾಸದ ವರಾಂಡವನ್ನು ಕೊರೊನಾ ರೋಗಿಗಳ ಚಿಕಿತ್ಸೆಗಾಗಿ ಮಾರ್ಪಡಿಸಿ 50 ಬೆಡ್​ಗಳ ವ್ಯವಸ್ಥೆ ಮಾಡಲಾಗಿದ್ದು, ಆಕ್ಸಿಜನ್ ವ್ಯವಸ್ಥೆ ಕೂಡ ಮಾಡಲಾಗಿದೆ. ಇದೇ ಮೊದಲ ಬಾರಿಗೆ ಸಚಿವರೊಬ್ಬರ ನಿವಾಸವನ್ನು ಕೋವಿಡ್ ಕೇರ್ ಕೇಂದ್ರ ಮಾಡಲಾಗಿದೆ.

ಹಾವೇರಿ ಜಿಲ್ಲೆಯ ಶಿಗ್ಗಾಂವಿ ಕ್ಷೇತ್ರದಲ್ಲಿರುವ ಕೊವಿಡ್ ಸೋಂಕಿತರಿಗಾಗಿ ಬಸವರಾಜ ಬೊಮ್ಮಾಯಿಯವರು ಈ ವ್ಯವಸ್ಥೆ ಮಾಡಿದ್ದಾರೆ. ಈ ಕೊವಿಡ್ ಕೇರ್ ಸೆಂಟರ್​​ನಲ್ಲಿ ರೋಗಿಗಳಿ ಚಿಕಿತ್ಸೆ ನೀಡಲು ವೈದ್ಯರು ಮತ್ತು ಸಿಬ್ಬಂದಿಯ ನೇಮಕ ಮಾಡಲಾಗಿದೆ. ಶೀಘ್ರವೇ 50 ಆಮ್ಲಜನಕ ಕಾನ್ಸಂಟ್ರೇಟರ್ ಗಳು ಬರಲಿದ್ದು, ಮುಂದಿನ ಕೆಲ ದಿನಗಳಲ್ಲೇ ಬರುವ ನಿರೀಕ್ಷೆ ಇದೆ, ಅವುಗಳನ್ನು ಪ್ರತಿ ಬೆಡ್ ಗೆ ಅಳವಡಿಸಲಾಗುವುದು.

ಇದರಿಂದ ಶಿಗ್ಗಾವಿ ಆಸ್ಪತ್ರೆಯಲ್ಲಿ ಬೆಡ್ ನ ಕೊರತೆ ಕಡಿಮೆಯಾಗಲಿದೆ, ತಮ್ಮ ಮನೆಯ ಆವರಣದಲ್ಲಿ ನಿರ್ಮಿಸಲಾಗಿರುವ ಕೋವಿಡ್ ಕೇರ್ ಕೇಂದ್ರ ಪರಿಶೀಲಿಸಿ ಮಾತನಾಡಿದ ಅವರು ದಿನದ 24 ಗಂಟೆಯೂ ರೋಗಿಗಳ ಚಿಕಿತ್ಸೆಗಾಗಿ ಸಿಬ್ಬಂದಿ ಇರಲಿದ್ದಾರೆ ಎಂದು ತಿಳಿಸಿದ್ದಾರೆ.

driving

ತಮ್ಮ ಕುಟುಂಬ ಹುಬ್ಬಳ್ಳಿಯಲ್ಲಿ ವಾಸವಿದ್ದು, ತಾವು ಕ್ಷೇತ್ರಕ್ಕೆ ಭೇಟಿ ನೀಡಿದಾಗ ಮಾತ್ರ ಶಿಗ್ಗಾವಿ ಮನೆಯಲ್ಲಿರುವುದಾಗಿ ತಿಳಿಸಿದರು. ಶಿಗ್ಗಾವಿ ತಾಲೂಕು ಆಸ್ಪತ್ರೆಯಲ್ಲಿ 88 ಬೆಡ್ ಇದ್ದು, ಅದರಲ್ಲಿ 44 ಆಕ್ಸಿಜನ್ ಬೆಡ್ , ಐದು ವೆಂಟಿಲೇಟರ್ ಮತ್ತು ಐಸಿಯು ಬೆಡ್ ಇದೆ. ಎಲ್ಲಾ ಬೆಡ್ ಗಳನ್ನು ಸೋಂಕಿತ ರೋಗಿಗಳಿಗಾಗಿ ನೀಡಲಾಗಿದೆ.

- Advertisement -

Related news

error: Content is protected !!