Sunday, October 6, 2024
spot_imgspot_img
spot_imgspot_img

ಮಂಗಳೂರು: ಸ್ಕೂಲ್ ಬಸ್‌ನಿಂದ ಇಳಿದ ಬಾಲಕ ಮನೆಗೆ ತೆರಳದೆ ನಾಪತ್ತೆ..!

- Advertisement -
- Advertisement -

ಮಂಗಳೂರು: ಸ್ಕೂಲ್ ಬಸ್‌ನಿಂದ ಇಳಿದ ಬಾಲಕ ಮನೆಗೆ ತೆರಳದೇ ನಾಪತ್ತೆಯಾಗಿರುವ ಘಟನೆ ಕಾವೂರು ಜಂಕ್ಷನ್‌ನಲ್ಲಿ ನಡೆದಿದೆ.

ಅಶ್ಲೇವ್ (14) ನಾಪತ್ತೆಯಾದ ಬಾಲಕ.

ಕಾವೂರಿನ ಮೀಟ್ ಕಾಂಪ್ಲೆಕ್ಸ್ ನ ನಿವಾಸಿ ಉಮೇಶ್ ಅವರ ಪುತ್ರನಾಗಿರುವ ಈತ ಶಕ್ತಿ ರೆಸಿಡೆನ್ಸಿ ಸ್ಕೂಲ್‌ನಿಂದ ನಿನ್ನೆ ಮಧ್ಯಾಹ್ನ 1-30ಕ್ಕೆ ಸ್ಕೂಲ್ ಬಸ್‌ನಲ್ಲಿ ಬಂದು ಕಾವೂರು ಜಂಕ್ಷನ್‌ನಲ್ಲಿ ಇಳಿದಿದ್ದಾನೆ. ಆದರೆ ಮನೆಗೆ ಬಂದಿಲ್ಲ. ಈ ಹುಡುಗ ಎಲ್ಲಾದರೂ ಕಂಡುಬಂದಲ್ಲಿ ಕಾವೂರು ಪೊಲೀಸ್ ಠಾಣೆಯ ಈ 08242220533 ಈ ನಂಬರ್ ಗೆ ಮಾಹಿತಿ ನೀಡಬೇಕೆಂದು ಮನವಿ ಮಾಡಲಾಗಿದೆ.

ಬಾಲಕ ಬ್ಲೂ ಶರ್ಟ್ ಬ್ಲ್ಯಾಕ್ ಪ್ಯಾಂಟ್ ಧರಿಸಿದ್ದು, ಕನ್ನಡ, ತುಳು, ಇಂಗ್ಲಿಷ್ ಭಾಷೆ ಮಾತನಾಡುತ್ತಾನೆ.

- Advertisement -

Related news

error: Content is protected !!