Thursday, June 18, 2026
spot_imgspot_img
spot_imgspot_img

ಮಂಗಳೂರು: ಇಬ್ಬರು ವಿದ್ಯಾರ್ಥಿಗಳನ್ನು ಕಾರಿನಲ್ಲಿ ಅಪಹರಿಸಿ ಹಲ್ಲೆಗೈದ ಆರೋಪ; 7 ಮಂದಿ ಬಂಧನ

- Advertisement -
- Advertisement -

ಮಂಗಳೂರು: ಇಬ್ಬರು ವಿದ್ಯಾರ್ಥಿಗಳನ್ನು ಅಪಹರಿಸಿ ಕಾರಿನಲ್ಲಿ ಕರೆದೊಯ್ದು ಹಲ್ಲೆ ನಡೆಸಿದ ಬಗ್ಗೆ ನಗರ ಉತ್ತರ ಠಾಣೆಯಲ್ಲಿ ದೂರು ದಾಖಲಾಗಿದ್ದು, ಈ ಸಂಬಂಧ ಏಳು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ವಿದ್ಶಾರ್ಥಿಗಳಾದ ಶಮೀರ್‌ ಹಾಗೂ ಇಬ್ರಾಹಿಂ ಫಾಹಿಮ್ ಹಲ್ಲೆಗೊಳಗಾದವರು.

ಬಂಧಿತರನ್ನು ಪಾಣೆಮಂಗಳೂರು ಸಮೀಪದ ಆಲಡ್ಕದ ಇಬ್ರಾಹೀಂ ತಾಬೀಶ್ (19), ಗೂಡಿನ ಬಳಿಯ ಅಬ್ದುಲ್ಲಾ ಹನ್ನಾನ್ (19), ಸಜಿಪ ಮುನ್ನೂರು ಗ್ರಾಮದ ಶಕೀಫ್ (19), ಬಂಟ್ವಾಳ ಮೂಡ ಗ್ರಾಮದ ಶಾಹೀಕ್ (19), ಬಜಾಲ್ ನಂತೂರಿನ ಯುಪಿ ತನ್ವೀರ್ (20), ಬಜಾಲ್ ಫೈಸಲ್ ನಗರದ ಅಬ್ದುಲ್ ರಶೀದ್ (19), ಗೂಡಿನ ಬಳಿಯ ಮನ್ಸೂರ್ (37) ಎಂದು ಗುರುತಿಸಲಾಗಿದೆ. ಈ ಬಗ್ಗೆ ಇಬ್ರಾಹೀಂ ಫಾಹೀಮ್ ನೀಡಿದ ದೂರಿನಂತೆ ಬಂದರ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ವಿದ್ಯಾರ್ಥಿಗಳಾದ ಶಾಮೀರ್ ಮತ್ತು ಇಬ್ರಾಹೀಂ ಫಾಹೀಮ್ ಎಂಬವರನ್ನು ಆ.23ರಂದು ಈ ಆರೋಪಿಗಳು ಕಾರಿನಲ್ಲಿ ಹಲ್ಲೆ ನಡೆಸಿದ್ದರು ಎನ್ನಲಾಗಿದೆ. ಈ ಬಗ್ಗೆ ಇಬ್ರಾಹೀಂ ಫಾಹೀಮ್ ನೀಡಿದ ದೂರಿನಂತೆ ಬಂದರ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

- Advertisement -

Related news

error: Content is protected !!