Monday, July 20, 2026
spot_imgspot_img
spot_imgspot_img

ಮಂಗಳೂರು: ಪಬ್ ಜಿ ಗೇಮ್ ನ್ನು ನಿಷೇಧಿಸುವಂತೆ ಶಾಸಕ ಯು.ಟಿ.ಖಾದರ್ ಕೇಂದ್ರ ಸರ್ಕಾರಕ್ಕೆ ಒತ್ತಾಯ

- Advertisement -
- Advertisement -

ಮಂಗಳೂರು: ಪಬ್ ಜಿ ಗೇಮ್ ನ್ನು ನಿಷೇಧ ಮಾಡುವಂತೆ ಶಾಸಕ ಯು.ಟಿ.ಖಾದರ್ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದಾರೆ. ಮಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪಬ್ ಜಿ ಗೇಮ್ ನಿಂದಾಗಿ ಬಾಲಕನ ಹತ್ಯೆ ವಿಚಾರಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಪಬ್ ಜಿ ಗೇಮ್ ಸಂಪೂರ್ಣನಿಷೇಧಕ್ಕೆ ಸಶಕ್ತ ಕಾನೂನು ರೂಪಿಸಬೇಕೆಂದು ಅವರು ಒತ್ತಾಯಿಸಿದರು.

ಈ ಘಟನೆಯನ್ನಾದರೂ ಮನಸ್ಸಲ್ಲಿ ಇಟ್ಟುಕೊಂಡು ಕೇಂದ್ರ, ರಾಜ್ಯ ಸರ್ಕಾರ ಕಠಿಣ ಕಾನೂನು ಮಾಡಲೇ ಬೇಕಿದೆ. ವಿದ್ಯಾರ್ಥಿ‌ ಸಮುದಾಯ ಇಂತಹ ಗೇಮ್ ನಿಂದಾಗಿ ಕ್ರೂರ ಮನಸ್ಥಿತಿ ಹೊಂದುತ್ತಾರೆ.‌ಕೆ.ಸಿ.ರೋಡ್ ನಲ್ಲಿ ನಡೆದ ಘಟೆಯಿಂದ ಸರ್ಕಾರ ಎಚ್ಚೆತ್ತುಕೊಳ್ಳಬೇಕಿದೆ ಎಂದು ತಿಳಿಸಿದರು.

- Advertisement -

Related news

error: Content is protected !!