Monday, June 8, 2026
spot_imgspot_img
spot_imgspot_img

ಮಂಗಳೂರು: ಪ್ರೇಯಸಿ ಔಟಿಂಗ್ ಬರಲಿಲ್ಲ ಎಂದು ಪಿಜಿಗೆ ಕಲ್ಲು ಎಸೆದ ಯುವಕ; ಸಾರ್ವಜನಿಕರಿಂದ ಧರ್ಮದೇಟು

- Advertisement -
- Advertisement -

ಮಂಗಳೂರು: ತನ್ನ ಪ್ರೇಯಸಿ ಔಟಿಂಗ್ ಬರಲಿಲ್ಲ ಎಂದು ಅಕೆ ಕೆಲಸ ಮಾಡುತ್ತಿದ್ದ ಕಟ್ಟಡಕ್ಕೆ ಯುವಕನೊಬ್ಬ ಕಲ್ಲು ಎಸೆದ ಘಟನೆ ಮಂಗಳೂರಿನ ಸೆಂಟ್ ಆಗ್ನೆಸ್ ಕಾಲೇಜು ಮುಂಭಾಗದಲ್ಲಿ ನಡೆದಿದೆ. ಸುಳ್ಯ ನಿವಾಸಿ ವಿವೇಕ್ (18) ಕಲ್ಲೆಸೆದ ಪ್ರಿಯಕರ ಎಂದು ತಿಳಿದು ಬಂದಿದೆ.

ಪಿಜಿಯಲ್ಲಿ ಕೆಲಸ ಮಾಡುತ್ತಿದ್ದ ಯುವತಿಯೊಂದಿಗೆ ಪ್ರೀತಿಯಲ್ಲಿ ಬಿದ್ದಿದ್ದ, ಅದರಂತೆ ಗುರುವಾರ ಸಂಜೆ ಔಟಿಂಗ್‌ಗೆ ಬರುವಂತೆ ಕರೆ ಮಾಡಿದ್ದಾನೆ. ಆದರೆ, ಯುವತಿ ಔಟಿಂಗ್ ಬರಲು ನಿರಾಕರಿಸಿದ್ದಾಳೆ. ಇದರಿಂದ ಕೋಪಗೊಂಡ ಪ್ರಿಯಕರ ವಿವೇಕ್, ಆಕೆ ಕೆಲಸ ಮಾಡುತ್ತಿದ್ದ ಪಿಜಿಗೆ ಕಲ್ಲು ಎಸೆದಿದ್ದಾನೆ ಎಂದು ತಿಳಿದು ಬಂದಿದೆ. ಕಲ್ಲೆಸೆತದಿಂದ ಕಟ್ಟಡದ ಗಾಜು ಪುಡಿಯಾಗಿದ್ದರಿಂದ ಸಾರ್ವಜನಿಕರು ಯುವಕನಿಗೆ ಧರ್ಮದೇಟು ನೀಡಿದ್ದಾರೆ ಎನ್ನಲಾಗಿದೆ.

- Advertisement -

Related news

error: Content is protected !!