Sunday, July 19, 2026
spot_imgspot_img
spot_imgspot_img

ಮಂಗಳೂರು: ಸುಲಿಗೆ ಪ್ರಕರಣದಲ್ಲಿ ಶಿಕ್ಷೆ ಪ್ರಕಟವಾದ ನಂತರ ತಲೆಮರಿಸಿಕೊಂಡಿದ್ದ ಆರೋಪಿಯ ಬಂಧನ

- Advertisement -
- Advertisement -

ಮಂಗಳೂರು: ನವೀನ್ ಸಿಕ್ವೇರಾ (52) ತೊಕ್ಕೊಟ್ಟು ಚಂಬುಗುಡ್ಡೆ, ಪೆರ್ಮನ್ನೂರು ನಿವಾಸಿ, ಎಂಬಾತನ ಮೇಲೆ 2011 ಹಾಗೂ 2012ರಲ್ಲಿ ಮಂಗಳೂರು ಪೂರ್ವ ಪೊಲೀಸ್ ಠಾಣೆಯಲ್ಲಿ ಠಾಣಾ ಅಕ್ರ ನಂಬರ್ 195/2011 ಕಲಂ 392 ಐಪಿಸಿ ರಂತೆ ಪ್ರಕರಣ ದಾಖಲಾಗಿದ್ದು ವಿಚಾರಣೆ ನಡೆಸಿದ ನ್ಯಾಯಾಲಯವು ಆರೋಪಿಯ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ 2015 ರಲ್ಲಿ ಮೂರು ವರ್ಷಗಳ ಕಠಿಣ ಕಾರವಾಸ ಶಿಕ್ಷೆ ಹಾಗೂ ರೂಪಾಯಿ 5000 ಜುಲ್ಮಾನೆ ವಿಧಿಸಿ ತೀರ್ಪು ನೀಡಿರುತ್ತದೆ ನಂತರ ಆರೋಪಿಯು ಮಾನ್ಯ ಜಿಲ್ಲಾ ನ್ಯಾಯಾಲಯದ ಆದೇಶವನ್ನು ಪ್ರಶ್ನಿಸಿ ಮಾನ್ಯ ಉಚ್ಚ ನ್ಯಾಯಾಲಯಕ್ಕೆ ಕ್ರಿಮಿನಲ್ ರಿಟ್ ಪೆಟಿಷನ್ ಅರ್ಜಿ ಸಲ್ಲಿಸಿದ್ದು ಅರ್ಜಿ ಪರಿಶೀಲಿಸಿದ ಮಾನ್ಯ ಉಚ್ಚ ನ್ಯಾಯಾಲಯವು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗೆ ಒಂದು ವರ್ಷ ಸಾಧಾ ಕಾರವಾಸ ಶಿಕ್ಷೆ ಹಾಗೂ ರೂಪಾಯಿ 15000 ದಂಡ ವಿಧಿಸಿ ಈ ಶಿಕ್ಷೆಯನ್ನು 2022ರ ಒಳಗೆ ಅನುಭವಿಸುವಂತೆ ಇದಕ್ಕೆ ತಪ್ಪಿದಲ್ಲಿ ಮಾನ್ಯ ಜಿಲ್ಲಾ ನ್ಯಾಯಾಲಯದ ಈ ಹಿಂದಿನ ಆದೇಶದ ಪ್ರಕಾರ ಶಿಕ್ಷೆಗೆ ಒಳಪಡಬೇಕಾಗಿ ಆದೇಶಿಸಿ ತೀರ್ಪು ಪ್ರಕಟ ಮಾಡಿರುತ್ತದೆ .

ತೀರ್ಪು ಪ್ರಕಟವಾದ ನಂತರ ಆರೋಪಿ ತಲೆ ಮರೆಸಿಕೊಂಡಿದ್ದು ಮಾನ್ಯ ನ್ಯಾಯಾಲಯವು ಈತನ ಮೇಲೆ ಬಂಧನದ ವಾರೆಂಟ್ ಹೊರಡಿಸಿರುತ್ತದೆ. ಈತನನ್ನು ಮಂಗಳೂರು ಪೂರ್ವ ಪೊಲೀಸ್ ಠಾಣಾ ವಾರಂಟ್ ಜಾರಿ ಸಿಬ್ಬಂದಿಗಳಾದ ಏಎಸ್ಐ ಮಚ್ಚೆಂದ್ರನಾಥ್ ಜೋಗಿ, ಹೆಚ್ ಸಿ ಅಭಿಷೇಕ್ ಹಾಗೂ ಹೆಚ್ ಸಿ ನಾರಪ್ಪ ಕೆಬಿ ರವರು ಈತನನ್ನು ದಿನಾಂಕ 14.01.2026 ರಂದು ಖಚಿತ ಮಾಹಿತಿ ಮೇರೆಗೆ ಸುರತ್ಕಲ್ ಹೊನ್ನಕಟ್ಟೆಯ ಸುಪ್ರಭಾತ ಬಾರ್ ಅಂಡ್ ರೆಸ್ಟೋರೆಂಟ್ ಎಂಬಲ್ಲಿ ದಸ್ತಗಿರಿ ಮಾಡಿ ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು ಮಾನ್ಯ ನ್ಯಾಯಾಲಯವು ಈ ಹಿಂದೆ ನೀಡಿದ ತೀರ್ಪಿನಂತೆ ಮೂರು ವರ್ಷಗಳ ಕಠಿಣ ಕಾರವಾಸ ಶಿಕ್ಷೆ ಹಾಗೂ 5000/- ರೂಪಾಯಿ ದಂಡ ವಿಧಿಸಿ ತೀರ್ಪು ನೀಡಿ ಆದೇಶಿಸಿರುತ್ತದೆ.

ಈತನ ಮೇಲೆ ದಾಖಲಾಗಿರುವ ಸುಲಿಗೆ ಪ್ರಕರಣಗಳು

  1. ಮಂಗಳೂರು ಪೂರ್ವ ಪೊಲೀಸ್ ಠಾಣಾ ಅ.ಕ್ರ ನಂಬ್ರ 195/2011 ಕಲಂ 392 ಐಪಿಸಿ ಜೊತೆಗೆ 34 ಐಪಿಸಿ,
  2. ಮಂಗಳೂರು ಪೂರ್ವ ಪೊಲೀಸ್ ಠಾಣಾ ಅ.ಕ್ರ ನಂಬ್ರ 105/2012 ಕಲಂ 392 ಐಪಿಸಿ ಜೊತೆಗೆ 34 ಐಪಿಸಿ,
  3. ಮಂಗಳೂರು ಪೂರ್ವ ಪೊಲೀಸ್ ಠಾಣಾ ಅ.ಕ್ರ ನಂಬ್ರ 129/2012 ಕಲಂ 392 ಐಪಿಸಿ ಜೊತೆಗೆ 34 ಐಪಿಸಿ
  4. ಮಂಗಳೂರು ಉತ್ತರ ಪೊಲೀಸ್ ಠಾಣಾ ಅ.ಕ್ರ ನಂಬ್ರ 160/2012 ಕಲಂ 392 ಐಪಿಸಿ ಜೊತೆಗೆ 34 ಐಪಿಸಿ

- Advertisement -

Related news

error: Content is protected !!