Wednesday, June 17, 2026
spot_imgspot_img
spot_imgspot_img

ಬಂಟ್ವಾಳ: (ಆ.6) ಬಂಟರ ಸಂಘ ಕಲ್ಲಡ್ಕ ವಲಯದ ವತಿಯಿಂದ ಆಟಿಡೊಂಜಿ ದಿನ ಕಾರ್ಯಕ್ರಮ

- Advertisement -
- Advertisement -

ಬಂಟ್ವಾಳ: ಬಂಟರ ಸಂಘ ಕಲ್ಲಡ್ಕ ವಲಯದ ವತಿಯಿಂದ ಆಟಿಡೊಂಜಿ ದಿನ ಕಾರ್ಯಕ್ರಮವು ಆ.6 ಬಂಟ್ವಾಳ ತಾ.ಮರಾಠಿ ಸಮಾಜ ಸೇವಾ ಸಂಘ(ರಿ.), ಪೂರ್ಲಿಪಾಡಿಮ ಕಲ್ಲಡ್ಕದಲ್ಲಿ ತುಳುನಾಡಿನ ವೈವಿಧ್ಯಮಯ ಆಟಿಯ ತಿಂಡಿ-ತಿನಿಸುಗಳ ಗಮ್ಮತ್ತಿನೊಂದಿಗೆ ನಡೆಯಲಿದೆ.

ಬೆಳಿಗ್ಗೆ ಗಂಟೆ 10ರಿಂದ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ. ಮಧ್ಯಾಹ್ನ ನಡೆಯುವ ಸಭಾಕಾರ್ಯಕ್ರಮದಲ್ಲಿ ತಾ.ಬಂಟರ ಸಂಘದ ಅಧ್ಯಕ್ಷ ಚಂದ್ರಹಾಸ ಶೆಟ್ಟಿ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಕಲ್ಲಡ್ಕ ವಲಯ ಬಂಟರ ಸಂಘದ ಅಧ್ಯಕ್ಷ ಕೆ.ಪದ್ಮನಾಭ ರೈ ಕಲ್ಲಡ್ಕ ಅಧ್ಯಕ್ಷತೆ ವಹಿಸಲಿದ್ದಾರೆ.

ಮುಖ್ಯ ಅತಿಥಿಗಳಾಗಿ ಬಂಟ್ವಾಳ ತಾ.ಬಂಟರ ಸಂಘದ ಪ್ರ.ಕಾರ್ಯದರ್ಶಿ ಜಗನ್ನಾಥ ಚೌಟ ಬದಿಗುಡ್ಡೆ, ಬಂಟ್ವಾಳ ತಾ.ಬಂಟರ ಸಂಘದ ಉಪಾಧ್ಯಕ್ಷ ಡಾ|ಪ್ರಶಾಂತ್ ಮಾರ್ಲ ಪಾಣೆಮಂಗಳೂರು, ದ.ಕ ಜಿಲ್ಲೆ ಕರ್ನಾಟಕ ಜರ್ನಲಿಸ್ಟ್ ಯೂನಿಯನ್ ಕಾರ್ಯದರ್ಶಿ ಹೇಮಾ ಜಯರಾಮ ರೈ, ಶ್ರೀ ದುರ್ಗಾ ಫೆಸಿಲಿಟಿ ಮ್ಯಾನೇಜ್‌ಮೆಂಟ್ ಸರ್ವಿಸಸ್ ಪ್ರೈ.ಲಿ.ನ ಸಚ್ಚಿದಾನಂದ ಶೆಟ್ಟಿ ಬೊಂಡಾಲ, ಮಂಗಳೂರು ಶ್ರೀಮಾತಾ ಬಿಲ್ಡರ್‍ಸ್‌ ನ ಸಂತೋಷ್ ಶೆಟ್ಟಿ ಅರೆಬೆಟ್ಟು, ಬಂಟ್ವಾಳ ತಾ.ಬಂಟರ ಸಂಘದ ಜೊತೆ ಖಜಾಂಚಿ ಪ್ರತಿಭಾ ಎ.ರೈ, ಬಂಟ್ವಾಳ ತಾ.ಮಹಿಳಾ ವಿಭಾಗ ಬಂಟರ ಸಂಘದ ಅಧ್ಯಕ್ಷ ರಮಾ ಎಸ್.ಭಂಡಾರಿ, ಬಂಟ್ವಾಳ ತಾ.ಯುವ ಬಂಟರ ಸಂಘದ ಅಧ್ಯಕ್ಷ ನಿಶಾನ್ ಆಳ್ವ, ಬಂಟ್ವಾಳ ತಾ.ಮಹಿಳಾ ವಿಭಾಗ ಬಂಟರ ಸಂಘದ ಖಜಾಂಚಿ ಸುಜಾತಾ ಪಿ.ರೈ ಕಲ್ಲಡ್ಕ ಭಾಗವಹಿಸಲಿದ್ದಾರೆ.

ತುಂಬೆ ಬಿ.ಎ ಪದವಿ ಪೂರ್ವ ಕಾಲೇಜಿನ ರಾಜ್ಯಶಾಸ್ತ್ರ ಉಪನ್ಯಾಸಕ ದಿನೇಶ್ ಶೆಟ್ಟಿ ಅಳಿಕೆ ಆಟಿ ತಿಂಗಳ ಮಹತ್ವದ ಬಗ್ಗೆ ಮಾಹಿತಿ ನೀಡಲಿದ್ದಾರೆ ಎಂದು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Insta: glacharyajewellers
Fb: glacharya

- Advertisement -

Related news

error: Content is protected !!