


ಮಂಗಳೂರು: ಕರ್ನಾಟಕ ಜರ್ನಲಿಸ್ಟ್ ಯೂನಿಯನ್ (ರಿ) ದ.ಕ ಜಿಲ್ಲಾ ಘಟಕ ಜಿಲ್ಲಾ ನೂತನ ತಂಡದ ಪದಗ್ರಹಣ ಕಾರ್ಯಕ್ರಮ ಹಾಗೂ ಕೃಷಿ ಅಧ್ಯಯನ ಮಾ.3 ಮಂಗಳವಾರದಂದು ಸಮಯ ಪೂರ್ವಾಹ್ನ ಗಂಟೆ 9ಕ್ಕೆ ಒಡ್ಡೂರು ಫಾರ್ಮ್ ಗಂಜಿಮಠ ಮಂಗಳೂರು ಇಲ್ಲಿ ನಡೆಯಲಿದೆ.
ಕಾರ್ಯಕ್ರಮವನ್ನು ರಾಜೇಶ್ ಉಳಿಪ್ಪಾಡಿಗುತ್ತು, ಶಾಸಕರು ಬಂಟ್ವಾಳ ಉದ್ಘಾಟಿಸಲಿದ್ದಾರೆ. ಪದಗ್ರಹಣವನ್ನು ಬಿ. ನಾರಾಯಣ, ರಾಜ್ಯಾಧ್ಯಕ್ಷರು ಕೆ.ಜೆ.ಯು, ಕರ್ನಾಟಕ ನಡೆಸಿಕೊಡಲಿದ್ದಾರೆ. ಅಧ್ಯಕ್ಷತೆಯನ್ನು ತಾರಾನಾಥ ಗಟ್ಟಿ ಕಾಪಿಕಾಡ್, ಅಧ್ಯಕ್ಷರು ಕರ್ನಾಟಕ ಜರ್ನಲಿಸ್ಟ್ ಯೂನಿಯನ್ ದ.ಕ ಜಿಲ್ಲೆ ವಹಿಸಲಿದ್ದಾರೆ.
ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಖಾದರ್ ಷಾ, ವಾರ್ತಾಧಿಕಾರಿ ದ.ಕ ಜಿಲ್ಲೆ, ಡಾ. ಯು.ಪಿ ಶಿವಾನಂದ, ಆಡಳಿತ ನಿರ್ದೇಶಕರು ಸುದ್ದಿ ಸಮೂಹ ಸಂಸ್ಥೆಗಳು, ಶ್ರೀಮತಿ ರಶ್ಮಿ ನೆಕ್ರಾಜೆ, ನಿರೂಪಣಾಧಿಕಾರಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ದ.ಕ, ಹರೀಶ್ ರೈ ಪಿ.ಬಿ, ಅಧ್ಯಕ್ಷರು ಪ್ರೆಸ್ ಕ್ಲಬ್ ಮಂಗಳೂರು , ಶ್ರೀಮತಿ ಪುಷ್ಪಾ ಡಿ ಪ್ರಸಾದ್ ಕಾನತ್ತೂರ್, ಅಧ್ಯಕ್ಷರು ಸುಳ್ಯ ತಾಲೂಕು ಮಹಿಳಾ ಮಂಡಲಗಳ ಒಕ್ಕೂಟ(ರಿ) ಸುಳ್ಯ ಭಾಗವಹಿಸಲಿದ್ದಾರೆ.

ಗೌರವ ಉಪಸ್ಥಿತಿ ಹರೀಶ್ ಬಂಟ್ವಾಳ್, ಗೌರವಾಧ್ಯಕ್ಷರು ಕೆ.ಜೆ.ಯು ದ.ಕ ಘಟಕ, ರಾಮದಾಸ್ ಶೆಟ್ಟಿ, ಅಧ್ಯಕ್ಷರು ಕೆ.ಜೆ.ಯು ಪುತ್ತೂರು ತಾಲೂಕು ಘಟಕ ಮತ್ತು ಯಶ್ವಿತ್ ಕಾಳಮ್ಮನೆ, ಅಧ್ಯಕ್ಷರು ಕೆ.ಜೆ.ಯು ಸುಳ್ಯ ತಾಲೂಕು ಘಟಕ.
ಕಾರ್ಯಕ್ರಮಕ್ಕೆ ಆಗಮಿಸುವ ಸದಸ್ಯರಿಗಾಗಿ ಸುಳ್ಯ, ಪುತ್ತೂರು, ಮತ್ತು ಬಿ.ಸಿ.ರೋಡ್ ನಿಂದ ವಿಶೇಷ ಬಸ್ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಈ ಸಮಾರಂಭಕ್ಕೆ ಸಂಘಟನೆಯ ಎಲ್ಲಾ ಪದಾಧಿಕಾರಿಗಳು ಹಾಗೂ ಸದಸ್ಯರು ಅಲ್ಲದೇ ಸಂಘಟನೆಗೆ ಸೇರ್ಪಡೆಯಾಗುವ ಪತ್ರಿಕಾ ಮಿತ್ರರು ಭಾಗವಹಿಸುವಂತೆ ವಿನಂತಿಸುತ್ತಿದ್ದೇವೆ ಎಂದು ಪ್ರಕಟನೆಯಲ್ಲಿ ತಿಳಿಸಲಾಗಿದೆ.








