Tuesday, June 9, 2026
spot_imgspot_img
spot_imgspot_img

ಮಂಗಳೂರು: ಬಾಲಕಿಯ ಮೇಲೆ ಅತ್ಯಾಚಾರ ಪ್ರಕರಣ; ಆರೋಪಿಗೆ ಕಠಿಣ ಶಿಕ್ಷೆ..!

- Advertisement -
- Advertisement -

ಮಂಗಳೂರು: 2023 ನೇ ಸಾಲಿನಲ್ಲಿ ಮಹಿಳಾ ಪೊಲೀಸ್ ಠಾಣೆಯಲ್ಲಿ ದಾಖಲಾದ ಬಾಲಕಿಯ ಮೇಲೆ ಅತ್ಯಾಚಾರ ಪ್ರಕರಣದ ಆರೋಪಿಗೆ ನ್ಯಾಯಾಲಯವು ಕಠಿಣ ಶಿಕ್ಷೆ ವಿಧಿಸಿದೆ.

ಬಂಧಿತ ಆರೋಪಿಯನ್ನು ಬಂಟ್ವಾಳ ತಾಲೂಕು ಸಜಿಪ ನಡು ಗ್ರಾಮ ಮತ್ತು ಅಂಚೆ ಬಸ್ತಿ ಗುಡ್ಡೆ ನಿವಾಸಿ ಮನ್ಸೂರ್ @ ಮೊಹಮ್ಮದ್ ಮನ್ಸೂರ್ @ ಜಾಬೀರ್‌ (30) ಎಂದು ಗುರುತಿಸಲಾಗಿದೆ.

ಮಂಗಳೂರು ನಗರ ಮಹಿಳಾ ಪೊಲೀಸ್ ಠಾಣೆಯಲ್ಲಿ ದಾಖಲಾದ ಅಪ್ರಾಪ್ತ(16) ವರ್ಷದ ಬಾಲಕಿಗೆ ಆರೋಪಿತ ಮನ್ಸೂರ್ @ ಮೊಹಮ್ಮದ್ ಮನ್ಸೂರ್ @ ಜಾಬೀರ್ ಎಂಬಾತನ ದಿನಾಂಕ 30-05-2023 ರಂದು ಅಪ್ರಾಪ್ತ ನೊಂದ ಬಾಲಕಿಯ ಮೇಲೆ ಅತ್ಯಾಚಾರ ಮಾಡಿ ಬೆದರಿಸಿ ವಿಡಿಯೋ ಮಾಡಿರುತ್ತಾನೆ. ಆ ಬಗ್ಗೆ ಬಾಲಕಿ ಮಂಗಳೂರು ಮಹಿಳಾ ಪೊಲೀಸ್ ಠಾಣಾ ಅ.ಕ್ರ 128/2023 ಕಲಂ: 363, 376(2)(ಎನ್),376(3),506 ಐಪಿಸಿ & ಕಲಂ: 6 ಪೋಕ್ಸೋ ಕಾಯಿದೆ ರೀತ್ಯಾ ದಿನಾಂಕ 23-12-2023 ರಂದು ಪ್ರಕರಣ ದಾಖಲಾಗಿತ್ತು.

ಆರೋಪಿಯು ಸುಮಾರು 8 ತಿಂಗಳುಗಳ ಕಾಲ ತಲೆಮರೆಸಿಕೊಂಡಿದ್ದು, ದಿನಾಂಕ 02-07-2024 ರಂದು ಆರೋಪಿಯನ್ನು ದಸ್ತಗಿರಿ ಮಾಡಿ ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ಮಾನ್ಯ ನ್ಯಾಯಾಲಯವು ಆರೋಪಿಗೆ ನ್ಯಾಯಾಂಗ ಬಂಧನವನ್ನು ವಿಧಿಸಿರುತ್ತದೆ. ಪ್ರಕರಣದಲ್ಲಿ ತನಿಖೆಯನ್ನು ಕೈಗೊಂಡ ಮಹಿಳಾ ಪೊಲೀಸ್ ಠಾಣಾ ಪೊಲೀಸ್ ನಿರೀಕ್ಷಕ ಗುರುರಾಜ್ ರವರು ಭಾಗಶಃ ತನಿಖೆಯನ್ನು ಪೂರೈಸಿದ್ದು, ಪ್ರಕರಣದಲ್ಲಿ ಮುಂದಿನ ತನಿಖೆಯನ್ನು ರಾಜೆಂದ್ರ ಬಿ ರವರು ಕೈಗೊಂಡಿರುತ್ತಾರೆ.

ಪ್ರಕರಣದಲ್ಲಿ ತನಿಖಾಧಿಕಾರಿಯವರು ಪೂರಕ ಸಾಕ್ಷ್ಯಾಧಾರಗಳನ್ನು ಸಂಗ್ರಹಿಸಿ ನಿಗದಿತ ಸಮಯದ ಒಳಗಾಗಿ ತನಿಖೆಯನ್ನು ಪೂರೈಸಿ ಆರೋಪಿತ ಮನ್ಸೂರ್ @ ಮೊಹಮ್ಮದ್ ಮನ್ಸೂರ್ @ ಜಾಬೀರ್ ಎಂಬಾತನ ವಿರುದ್ಧ ದೋಷರೋಪಣಾ ಪತ್ರವನ್ನು ಸಲ್ಲಿಸಲಾಗಿತ್ತು.

ಮಾನ್ಯ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಎಫ್.ಟಿ.ಎಸ್.ಸಿ-2 (ಪೋಕ್ಸೋ ) ನ್ಯಾಯಾಲಯ ಮಂಗಳೂರು ಇಲ್ಲಿ ಪ್ರಕರಣದ ವಿಚಾರಣೆ ನಡೆಸಲಾಗಿದ್ದು, ಸರಕಾರಿ ಅಭಿಯೋಜಕರು ಬದ್ರಿನಾಥ ಮತ್ತು ವಿಶೇಷ ಸರಕಾರಿ ಅಭಿಯೋಜಕರು ಶ್ರೀಮತಿ ಸಹನಾದೇವಿ ಬೋಳೂರು ರವರ ಸರಕಾರದ ಪರವಾಗಿ ವಾದ ಮಂಡಿಸಿದ್ದರು.

ದಿನಾಂಕ: 30-07-2025 ರಂದು ಮಾನ್ಯ ನ್ಯಾಯಾಧೀಶ ಮಾನು ಕೆ.ಎಸ್ ರವರು ಆರೋಪಿಗೆ ಬಾಲಕಿಯ ಅತ್ಯಾಚಾರದ ಆರೋಪದ ಅಡಿಯಲ್ಲಿ 20 ವರ್ಷಗಳ ಕಾಲ ಕಾರಾಗೃಹ ಶಿಕ್ಷೆ ಮತ್ತು ರೂಪಾಯಿ 50,000/- ದಂಡ ವಿಧಿಸಿರುತ್ತದೆ. ಮತ್ತು ಬೆದರಿಕೆ ನೀಡಿರುವುದಕ್ಕಾಗಿ ಪ್ರಕರಣದಲ್ಲಿ ಆರೋಪಿಗೆ 5,000/ ದಂಡ ಮತ್ತು 1 ವರ್ಷ ಶಿಕ್ಷೆಯನ್ನು ವಿಧಿಸಿರುತ್ತದೆ.

- Advertisement -

Related news

error: Content is protected !!