Sunday, July 26, 2026
spot_imgspot_img
spot_imgspot_img

ಮಂಗಳೂರು: ದಕ್ಕೆಯಲ್ಲಿ ಲೈಟ್ ಕಂಬ ಮೈಮೇಲೆ ಬಿದ್ದು ಯುವಕ ಸಾವು

- Advertisement -
- Advertisement -

ಮಂಗಳೂರು: ಲೈಟ್ ಕಂಬವೊಂದು ಮುರಿದು ಮೈಮೇಲೆ ಬಿದ್ದ ಪರಿಣಾಮ ವ್ಯಕ್ತಿಯೋರ್ವ ಮೃತಪಟ್ಟ ಘಟನೆ ನಗರದ ದಕ್ಕೆಯಲ್ಲಿ ಇಂದು ಬೆಳಗ್ಗೆ ನಡೆದಿದೆ. ಮೃತರನ್ನು ಮೀನು ಕಾರ್ಮಿಕನಾಗಿ ಕೆಲಸ ಮಾಡುತ್ತಿದ್ದ ತಮಿಳುನಾಡು ಮೂಲದ ಮುರುಗನ್ (35) ಎಂದು ಗುರುತಿಸಲಾಗಿದೆ.

ಇಂದು ಬೆಳಗ್ಗೆ ದಕ್ಕೆಯಲ್ಲಿ ಮೀನಿನ ಬಾಕ್ಸ್ ಹೊರುತ್ತಿದ್ದ ವೇಳೆ ಲೈಟ್ ಕಂಬ ಏಕಾಏಕಿ ಬುಡದಿಂದಲೇ ಮುರಿದುಬಿದ್ದಿದ್ದು, ಈ ವೇಳೆ ಅದು ಮುರುಗನ್ ಅವರ ಮೇಲೆ ಬಿದ್ದಿದ್ದರಿಂದ ಗಂಭೀರ ಗಾಯಗೊಂಡಿದ್ದ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಆದರೆ ಅಷ್ಟರಲ್ಲಿ ಅವರು ಮೃತಪಟ್ಟಿದ್ದಾರೆ ಎಂದು ಸ್ಥಳೀಯರು ಮಾಹಿತಿ ನೀಡಿರುವುದಾಗಿ ತಿಳಿದುಬಂದಿದೆ.

- Advertisement -

Related news

error: Content is protected !!