- Advertisement -
- Advertisement -


ಮಂಗಳೂರು: ಮಂಗಳೂರು ಆರ್ ಟಿಒ ಕಚೇರಿಗೆ ಬಾಂಬ್ ಇಡುವುದಾಗಿ ಬೆದರಿಕೆ ಹಾಕಲಾಗಿ, ಕಿಡಿಗೇಡಿಗಳು ಈ ಬಗ್ಗೆ ಆರ್ ಟಿಒ ಕಚೇರಿಗೆ ಇ-ಮೇಲ್ ಮೂಲಕ ಸಂದೇಶ ಕಳುಹಿಸಲಾಗಿದೆ ಎಂದು ತಿಳಿದು ಬಂದಿದೆ.

ಮಂಗಳೂರಿನ ನೆಹರೂ ಮೈದಾನ ಬಳಿ ಇರುವ ಆರ್ ಟಿಒ ಕಚೇರಿಗೆ ನಿನ್ನೆ ರಾತ್ರಿ ಕಛೇರಿಯ ಅಧಿಕೃತ ಮೇಲ್ ಐಡಿಗೆ ಬಾಂಬ್ ಬೆದರಿಕೆಯ ಇ-ಮೇಲ್ ಸಂದೇಶ ಬಂದಿದೆ. ಮೇಲ್ ಬಂದಿದೆ. ಐದು ಕಡೆಗಳಲ್ಲಿ ಬಾಂಬ್ ಇಡುವುದಾಗಿ ಮೇಲ್ ನಲ್ಲಿ ಉಲ್ಲೇಖಿಸಲಾಗಿದೆ.
ಸೋಮವಾರ ಅಪರಾಹ್ನ 12 ಗಂಟೆಯ ವೇಳೆ ಆರ್ ಟಿಒ ಅಧಿಕಾರಿಯ ಈ ಇ-ಮೇಲ್ ಗಮನಿಸಿದ್ದಾರೆ. ತಕ್ಷಣ ಅವರು ಪೊಲೀಸ್ ಇಲಾಖೆಗೆ ಮಾಹಿತಿ ನೀಡಿದ್ದಾರೆ.

ಮಂಗಳೂರು ನಗರ ಎಎಸ್ ಸಿ ಮತ್ತು ಬಿಡಿಡಿಎಸ್ ತಂಡ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ. ಆರ್ ಟಿಒ ಕಚೇರಿ ಹಾಗೂ ಕಚೇರಿ ಆವರಣದಲ್ಲಿ ಪರಿಶೀಲನೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.

- Advertisement -








