Wednesday, September 23, 2026
spot_imgspot_img
spot_imgspot_img

ಮಂಗಳೂರು: ಕಾಲೇಜಿಗೆ ಹೋದ ಯುವತಿ ಏಕಾಏಕಿ ನಾಪತ್ತೆ; ಯುವಕನೊಂದಿಗೆ ಪರಾರಿ ಶಂಕೆ..!

- Advertisement -
- Advertisement -

ಮಂಗಳೂರು: ಕಾಲೇಜಿಗೆ ಹೋದ ಯುವತಿ ಏಕಾಎಕಿ ನಾಪತ್ತೆಯಾದ ಘಟನೆ ಕೊಣಾಜೆ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನಾಪತ್ತೆಯಾದ ಯುವತಿಯನ್ನು ಸ್ವಾತಿ (23) ಎಂದು ಗುರುತಿಸಲಾಗಿದೆ. ಕಾಸರಗೂಡು ಜಿಲ್ಲೆಯ ಮಂಜೇಶ್ವರ ತಾಲೂಕಿನ ಕೊಡ್ಲಮೊಗರು ಗ್ರಾಮದ ಊರ್ನಿ ಮನೆ ಎಂಬಲ್ಲಿ ತನ್ನ ಕುಟುಂಬಸ್ಥರೊಂದಿಗೆ ವಾಸವಾಗಿದ್ದಳು.

ಇವಳು ದೇರಳಕಟ್ಟೆ ಮಾಡೂರಿನ ಖಾಸಗಿ ಕಾಲೇಜ್‌ನಲ್ಲಿ ಅಂತಿಮ ವರ್ಷದ ಎಂಬಿಎ ವ್ಯಾಸಂಗ ಮಾಡುತಿದ್ದು, ಪ್ರತಿನಿತ್ಯ ಮನೆಯಿಂದ ಕಾಲೇಜಿಗೆ ಹೋಗುತ್ತಿದ್ದ ಈಕೆ ಮಾ. 14 ರಂದು ಎಂದಿನಂತೆ ಬೆಳಗ್ಗೆ ತನ್ನ ದ್ವಿಚಕ್ರ ಸ್ಕೂಟರ್‌ನಲ್ಲಿ ಮುಡಿಪುಗೆ ಹೋಗಿ ಅಲ್ಲಿಂದ ಬಸ್ಸಿನಲ್ಲಿ ಹೋಗಿದ್ದಾಳೆ.

ಆದರೆ ಸಂಜೆ ಆಕೆಯ ಅಣ್ಣ ಕರೆ ಮಾಡಿದಾಗ ಸ್ವಾತಿಯ ಮೊಬೈಲ್ ಫೋನ್ ಸ್ವಿಚ್ ಆಪ್ ಆಗಿದೆ. ಮತ್ತು ಹಲವಾರು ಕಡೆ ಹುಡುಕಿದರೂ ಸ್ವಾತಿಯ ಸುಳಿವು ಸಿಕ್ಕರುವುದಿಲ್ಲ ಎಂದು ಆಕೆಯ ಅಣ್ಣ ಕೊಣಾಜೆ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

- Advertisement -

Related news

error: Content is protected !!