- Advertisement -
- Advertisement -



ಮಂಗಳೂರು: ದೀಪಕ್ ರಾವ್ ಕೊಲೆ ಪ್ರಕರಣದ ಸಾಕ್ಷಿಗಳು ಹಾಗೂ ಸ್ಥಳೀಯ ಕಾರ್ಪೋರೇಟರ್ ಕೊಲೆಗೆ ಸಂಚು ಮಾಡಿರುವ ಆರೋಪದಡಿ ರೌಡಿಶೀಟರ್ ಪಿಂಕಿ ನವಾಜ್ ಸೇರಿದಂತೆ ಐದು ಜನರನ್ನು ಸುರತ್ಕಲ್ ಪೊಲೀಸರು ಬಂಧಿಸಿದ್ದಾರೆ.
ಈ ಹಿಂದೆ ಲೋಕಂಡ್ವಾಲ ವಾಟ್ಸಾಪ್ ಗ್ರೂಪ್ ನಲ್ಲಿ ಸಂಚಿನ ಬಗ್ಗೆ ಚರ್ಚೆ ನಡೆದ ಆಡಿಯೋ ಕಾನ್ವರ್ಜೇಷನ್ ವೈರಲ್ ಆಗಿದ್ದು, ಈ ಸಂಚು ಬಯಲಾಗಿತ್ತು.

ಇತ್ತೀಚೆಗೆ ಸುರತ್ಕಲ್ ಬಸ್ ಸ್ಟಾಂಡ್ ಗೆ ದಿ.ದೀಪಕ್ ರಾವ್ ಹೆಸರಿಟ್ಟಿದ್ದರು. ಸ್ಥಳೀಯ ಶಾಸಕ ಭರತ್ ಶೆಟ್ಟಿ ಬಸ್ ನಿಲ್ದಾಣ ಉದ್ಘಾಟನೆ ಮಾಡಿದ್ದರು. ಈ ವಿಚಾರ ಒಂದು ವರ್ಗದಲ್ಲಿ ಆಕ್ರೋಶಕ್ಕೆ ಕಾರಣವಾಗಿತ್ತು. ಆದ್ರಿಂದ ಇದೇ ವಿಚಾರವಾಗಿ ಗಲಭೆ ಎಬ್ಬಿಸಿ ಬೆದರಿಕೆ ಹಾಕಿರುವ ಆಡಿಯೋ ವೈರಲ್ ಆದ ಬಳಿಕ ಇದೀಗ ಆರೋಪಿಗಳು ಅರೆಸ್ಟ್ ಆಗಿದ್ದಾರೆ.



- Advertisement -








