Saturday, October 17, 2026
spot_imgspot_img
spot_imgspot_img

ಅನಿವಾಸಿ ಭಾರತೀಯರೊಂದಿಗೆ ಮಂಗಳೂರು ಪೊಲೀಸರ ‘ಸಮನ್ವಯ’ ವೆಬಿನಾರ್

- Advertisement -
- Advertisement -

ಮಂಗಳೂರು: ವಿದೇಶದಲ್ಲಿ ನೆಲೆಸಿರುವ ಭಾರತೀಯರ ಸಂಕಷ್ಟವನ್ನು ಆಲಿಸಲು ಮಂಗಳೂರು ಪೊಲೀಸ್ ಆಯುಕ್ತರು ನಾಳೆ ಸಮಯ 12 ಗಂಟೆಗೆ ವೆಬಿನಾರ್ ‘ಸಮನ್ವಯ’ ಆಯೋಜಿಸಿದ್ದಾರೆ. ಈ ಆನ್‌ಲೈನ್ ಸಂವಹನ ಕಾರ್ಯಗಾರದಲ್ಲಿ ದಕ್ಷಿಣ ಕನ್ನಡದ ಮಂದಿ ಭಾಗವಹಿಸುವಂತೆ ಆಯುಕ್ತರು ತಿಳಿಸಿದ್ದಾರೆ.

ಅನಿವಾಸಿ ಭಾರತೀಯರು ಅನುಭವಿಸುವ ಕಷ್ಟದ ಬಗ್ಗೆ ಆಯುಕ್ತರ ಜೊತೆಗೆ ಹೇಳಿಕೊಳ್ಳಬಹುದು. ಕೊರೊನಾ ಕಾಲಘಟ್ಟದಲ್ಲಿ ಉದ್ಯೋಗ ನಿಮಿತ್ತ ವಿದೇಶಗಳಿಗೆ ತೆರಳಿರುವ ಮಂದಿಯ ಕಷ್ಟ, ಮನೆಯಲ್ಲಿರುವ ಸಮಸ್ಯೆಯ ಬಗ್ಗೆ ಹೇಳಿಕೊಳ್ಳಬಹುದು.

ದಕ್ಷಿಣ ಕನ್ನಡದಿಂದ ವಿದೇಶಕ್ಕೆ ತೆರಳಿರುವ ಮಂದಿಯ ಈ ವೆಬಿನಾರ್‌ನಲ್ಲಿ ಭಾಗವಹಿಸಬಹುದು. ಈ ಬಗ್ಗೆ ಪೊಲೀಸ್ ಆಯುಕ್ತ ಎನ್ ಶಶಿಕುಮಾರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

- Advertisement -

Related news

error: Content is protected !!