Friday, April 19, 2024
spot_imgspot_img
spot_imgspot_img

ಮಂಗಳೂರಿನಲ್ಲಿ ಗೋಡೆಬರಹದ ಮಾಸ್ಟರ್ ಮೈಂಡ್ ಅಬ್ದುಲ್ ಮಾಥೀನ್ ಅಹ್ಮದ್ ತಾಹಾ!!

- Advertisement -G L Acharya panikkar
- Advertisement -

ಬೆಂಗಳೂರು: ಮಂಗಳೂರಿನಲ್ಲಿ ಬರೆದಿದ್ದ ವಿವಾದಾತ್ಮಕ ಗೋಡೆ ಬರಹದ ಮಾಸ್ಟರ್ ಮೈಂಡ್ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿಯ ಉಗ್ರ ಅಬ್ದುಲ್ ಮಾಥೀನ್ ಅಹ್ಮದ್ ತಾಹಾ ಕೈವಾಡವಿದೆ ಎಂದು ನಂಬಲರ್ಹ ಮೂಲಗಳು ತಿಳಿಸಿವೆ.

ಮಾಥೀನ್ ಬಗ್ಗೆ ಸುಳಿವು ನೀಡಿದವರಿಗೆ 3 ಲಕ್ಷ ರು ಬಹುಮಾನ ನೀಡುವುದಾಗಿ ರಾಷ್ಟ್ರೀಯ ತನಿಖಾ ದಳ ಘೋಷಿಸಿತ್ತು. ತಮಿಳುನಾಡಿನ ಹಿಂದೂ ನಾಯಕನ ಹತ್ಯೆ ಪ್ರಕರಣದಲ್ಲಿ ಕೂಡ ಈತ ವಾಂಟೆಂಡ್ ಆಗಿದ್ದ. ಮಂಗಳೂರಿನಲ್ಲಿ ವಿವಾದಾತ್ಮಕ ಗೋಡೆ ಪ್ರಕರಣ ಸಂಬಂಧ ಡಿಸೆಂಬರ್ 6 ರಂದು ಮಂಗಳೂರು ಪೊಲೀಸರು ಮಾಜ್ ಮುನೀರ್ ಅಹ್ಮದ್ ಎಂಬ ಕಾಮರ್ಸ್ ಪದವೀದರನನ್ನು ಹಾಗೂ ಮಂಗಳೂರಿನ ತನ್ನ ತಂದೆಯ ಅಂಗಡಿಯಲ್ಲಿ ಸೇಲ್ಸ್ ಮ್ಯಾನ್ ಆಗಿ ಕೆಲಸ ಮಾಡುತ್ತಿದ್ದ ಮೊಹಮದ್ ಶಾರೀಖ್ ಎಂಬುವವನ್ನು ಪೊಲೀಸರು ಬಂಧಿಸಿದ್ದರು.

ಆಹ್ಮದ್ ಮತ್ತು ಶಾರೀಖ್ ಇಬ್ಬರು ತೀರ್ಥಹಳ್ಳಿವರಾಗಿದ್ದು, ಪರಸ್ಪರ ತಿಳಿದುಕೊಂಡಿದ್ದರು.
ಶಾರೀಖ್ ಮತ್ತು ಮಾಜ್ ಮಾಥೀನ್ ಜೊತೆ ನಿರಂತರವಾಗಿ ಸಂಪರ್ಕ ಹೊಂದಿದ್ದರು. ಜನರಲ್ಲಿ ಭಯ ಮತ್ತು ಭೀತಿ ಮೂಡಿಸಲು ಸಾರ್ವಜನಿಕ ಸ್ಥಳಗಳಲ್ಲಿ ಗೋಡೆಗಳ ಮೇಲೆ ಭಯೋತ್ಪಾದಕ ಪರವಾದ ಬರಹ ಬರೆಯುವಂತೆ ಅವರಿಗೆ ತಿಳಿಸಿದ್ದನು. ಲಷ್ಕರ್ ಇ ತೊಯ್ಬಾ ಮತ್ತು ತಾಲಿಬಾನ್ ಪರ ಬರಹ ಗೀಚಿದ್ದರು.

ಮಾಥೀನ್ ದೇಶ ಬಿಟ್ಟು ಪರಾರಿಯಾಗಿದ್ದು, ಭಾರತದ ತನ್ನ ಸಹಚರರೊಂದಿಗೆ ಸಂಪರ್ಕ ಹೊಂದಿದ್ದ ಎಂದು ಮೂಲಗಳು ತಿಳಿಸಿವೆ. ಡಿಸೆಂಬರ್ 19 ರಂದು ಪೌರತ್ವ ಕಾಯ್ದೆಯ ಮೊದಲ ವಾರ್ಷಿಕೋತ್ಸವ ಸಮಾರಂಭದಲ್ಲಿ ಸಮಸ್ಯೆ ಸೃಷ್ಟಿಸಲು ಪ್ಲಾನ್ ಮಾಡಿದ್ದರು. 2019 ಮತ್ತು ನ್ಯಾಷನಲ್ ರಿಜಿಸ್ಟರ್ ಆಫ್ ಸಿಟಿಜನ್ಸ್ (ಎನ್‌ಆರ್‌ಸಿ) ಹಿಂಸಾತ್ಮಕ ಪ್ರತಿಭಟನೆಯಲ್ಲಿ ಅಬ್ದುಲ್ ಜಲೀಲ್ ಮತ್ತು ನೌಶೀನ್ ಕುಡ್ರೊಲಿ ಪೊಲೀಸ್ ಗುಂಡಿನ ದಾಳಿಯಲ್ಲಿ ಪ್ರಾಣ ಕಳೆದುಕೊಂಡಿದ್ದಾರೆ.

- Advertisement -

Related news

error: Content is protected !!