Sunday, June 14, 2026
spot_imgspot_img
spot_imgspot_img

ಮಂಗಳೂರು: 2 ವರ್ಷಗಳಿಂದ ನ್ಯಾಯಾಲಯಕ್ಕೆ ಹಾಜರಾಗದೇ ತಲೆಮರೆಸಿಕೊಂಡಿದ್ದ ಆರೋಪಿಯ ಬಂಧನ

- Advertisement -
- Advertisement -

ಮಂಗಳೂರು: ಕಂಕನಾಡಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ವಾರೆಂಟ್ ಆರೋಪಿ ರಮ್ಮಿ @ ರಮಿಜ್ ಎಂಬಾತನನ್ನು ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.

ಆರೋಪಿ ವಿರುದ್ಧ ಮಂಗಳೂರು ನಗರದ ವಿವಿಧ ಪೊಲೀಸ್ ಠಾಣೆಗಳಲ್ಲಿ ಕಳವು, ಕೊಲೆ ಯತ್ನ, ಹಲ್ಲೆ ಸೇರಿದಂತೆ ಒಟ್ಟು ಐದು ಪ್ರಕರಣಗಳು ದಾಖಲಾಗಿವೆ.
1) KTPS cr no 137/2017 u/s 379 IPC
2) MRPS cr no 262/2016 u/s 323.506.341.307.427.324 r/w 34 IPC
3) Ullala ps cr no 206/2018 u/s 143.147.148.504. 323.324.307.r/w 149 IPC
4) Mangalore South PS CR No: 193/2015 U/s: 379 IPC
5) Mangalore East Ps Cr No: U/s: 379 IPC

ಕಂಕನಾಡಿ ನಗರ ಪೊಲೀಸ್ ಠಾಣೆಯ ಅ.ಕ್ರ. 136/2017ರ ಕಳವು ಪ್ರಕರಣದಲ್ಲಿ ಮಾನ್ಯ ನ್ಯಾಯಾಲಯವು ದಸ್ತಗಿರಿ ವಾರೆಂಟ್ ಹೊರಡಿಸಿತ್ತು. ಆದರೆ ಆರೋಪಿ ಸುಮಾರು ಎರಡು ವರ್ಷಗಳಿಂದ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದನು.

ಈ ಹಿನ್ನೆಲೆಯಲ್ಲಿ ಕಂಕನಾಡಿ ನಗರ ಪೊಲೀಸ್ ಠಾಣೆಯ ವಾರೆಂಟ್ ಸಿಬ್ಬಂದಿಗಳಾದ ಹೆಚ್‌ಸಿ 944 ಬಾಲರಾಜ್, ಪಿಸಿ 3046 ರವಿಕುಮಾರ್ ಹಾಗೂ ಪಿಸಿ 2365 ಯುವರಾಜ್ ಅವರು ಜೂನ್ 8ರಂದು ಬೆಂಗಳೂರಿನ ಕೋನಪ್ಪನ ಅಗ್ರಹಾರದಲ್ಲಿ ಆರೋಪಿಯನ್ನು ಬಂಧಿಸಿ, ಬಳಿಕ ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ ಎಂದು ಪೊಲೀಸ್ ಇಲಾಖೆ ತಿಳಿಸಿದೆ.

- Advertisement -

Related news

error: Content is protected !!