Wednesday, June 24, 2026
spot_imgspot_img
spot_imgspot_img

ಮಾಣಿ: ಕರ್ನಾಟಕ ಮುಸ್ಲಿಂ ಜಮಾ‌ಅತ್, ಎಸ್‌ವೈ‌ಎಸ್, ಎಸ್‌ಎಸ್‌ಎಫ್‌ ಸೂರಿಕುಮೇರು ಯುನಿಟ್ ವತಿಯಿಂದ ಮಹ್‌‌ಳರತುಲ್ ಬದ್ರಿಯಾ ಕಾರ್ಯಕ್ರಮ

- Advertisement -
- Advertisement -

ಮಾಣಿ: ಕರ್ನಾಟಕ ಮುಸ್ಲಿಂ ಜಮಾ‌ಅತ್, ಎಸ್‌ವೈ‌ಎಸ್, ಎಸ್‌ಎಸ್‌ಎಫ್‌ ಸೂರಿಕುಮೇರು ಯುನಿಟ್ ವತಿಯಿಂದ ಅಬ್ದುಲ್ ಕರೀಂ ನೆಲ್ಲಿಯವರ ನಿವಾಸದಲ್ಲಿ ಮಹ್‌‌ಳರತುಲ್ ಬದ್ರಿಯಾ ಕಾರ್ಯಕ್ರಮ ನಡೆಯಿತು.

ಕೆಸಿಎಫ್ ರಿಯಾದ್ ಝೋನ್ ದಾಯಿ ಮುಸ್ತಫಾ ಸ‌ಅದಿ ಸೂರಿಕುಮೇರು ಕಾರ್ಯಕ್ರಮ ಉದ್ಘಾಟಿಸಿದರು. ಕರ್ನಾಟಕ ಮುಸ್ಲಿಂ ಜಮಾ‌ಅತ್ ಈಸ್ಟ್ ಜಿಲ್ಲಾ ಅಧ್ಯಕ್ಷ ಜಿಎಂಎಂ ಕಾಮಿಲ್ ಸಖಾಫಿ ಕಾರ್ಯಕ್ರಮಕ್ಕೆ ನೇತೃತ್ವ ನೀಡಿ ಮಾತನಾಡಿ ಸುನ್ನೀ ಸಂಘಟನೆಗಳ ಕಾರ್ಯಕರ್ತರಾಗಲು ಸದಸ್ಯತನ ಪಡೆದವರು ಸಾಧಾರಣ ವ್ಯಕ್ತಿಗಳಂತೆ ಅಲ್ಲ, ಸಯ್ಯಿದ್ ಸಾದಾತುಗಳ ಉಲಮಾಗಳ ಸದಾ ದುಆ ಪಡೆಯುವ ಭಾಗ್ಯವಂತರು ಎಂದು ಹೇಳಿದರು.

ಕರ್ನಾಟಕ ಮುಸ್ಲಿಂ ಜಮಾ‌ಅತ್ ಈಸ್ಟ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹಾಜಿ ಯೂಸುಫ್ ಸಯೀದ್ ನೇರಳಕಟ್ಟೆ,ದಾವೂದ್ ಕಲ್ಲಡ್ಕ, ಅಝೀಂ ನೆಲ್ಲಿ, ನಿಝಾಂ ಸ‌ಅದಿ ಸೂರಿಕುಮೇರು, ಅಬ್ದುಲ್ ಲತೀಫ್ ಕಲ್ಲಡ್ಕ, ಅಬ್ದುಲ್ ರಝಾಕ್ ಫಲಾಹ್ ಕಲ್ಲಡ್ಕ, ನಝೀರ್ ಅಮ್ಜದಿ ಮಾಣಿ, ಯೂಸುಫ್ ಹಾಜಿ ಸೂರಿಕುಮೇರು, ಹಾರಿಸ್ ಯೂಸುಫ್, ಹಂಝ ಕಾಯರಡ್ಕ, ಇಬ್ರಾಹಿಂ ಮಾಣಿ,ಎಸ್ ಕೆ ಅಶ್ರಫ್ ಗಡಿಯಾರ, ಹಸೈನ್ ಟೈಲರ್ ಸೂರಿಕುಮೇರು,ಹಾಫಿಳ್ ಮುರ್ಶಿದ್ ಮುಂತಾದವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಸಲೀಂ ಮಾಣಿ ಕಾರ್ಯಕ್ರಮ ಸ್ವಾಗತಿಸಿ, ಧನ್ಯವಾದಗೈದರು.

- Advertisement -

Related news

error: Content is protected !!