Tuesday, April 23, 2024
spot_imgspot_img
spot_imgspot_img

ವಿಟ್ಲ: ಶ್ರೀ ನಾಗಸಾನಿಧ್ಯ ಪಾರ್ಥಪಾಂಡಿ ಜಠಾಧಾರಿ ದೈವಸ್ಥಾನ ಮತ್ತು ಶ್ರೀ ರಾಜನ್ ದೈವ ಗುಳಿಗ ಸಾನಿಧ್ಯದಲ್ಲಿ ಲೋಕ ಕಲ್ಯಾಣಾರ್ಥಕವಾಗಿ ನಾಗತಂಬಿಲ, ಜಟಾಧಾರಿ ಮೈಮೆ ಹಾಗೂ ಗುಳಿಗ ದೈವದ ಕೋಲ

- Advertisement -G L Acharya panikkar
- Advertisement -

ವಿಟ್ಲ: ವಿಟ್ಲದ ಶ್ರೀ ನಾಗಸಾನಿಧ್ಯ ಪಾರ್ಥಪಾಂಡಿ ಜಠಾಧಾರಿ ದೈವಸ್ಥಾನ ಮತ್ತು ಶ್ರೀ ರಾಜನ್ ದೈವ ಗುಳಿಗ ಸಾನಿಧ್ಯದಲ್ಲಿ ಲೋಕ ಕಲ್ಯಾಣಾರ್ಥಕವಾಗಿ ಪ್ರಾರ್ಥಿಸಿ ಕೊಂಡ ಹರಕೆಯ ನಾಗತಂಬಿಲ, ಜಟಾಧಾರಿ ಮೈಮೆ ಹಾಗೂ ಗುಳಿಗ ದೈವದ ಕೋಲ ನಡೆಯಿತು.

ಎ.7ರಂದು ಬೆಳಿಗ್ಗೆ ಪ್ರಾರ್ಥನೆ, ಸ್ಥಳ ಶುದ್ಧಿ, ಪಂಚಗವ್ಯ, ಪುಣ್ಯಹಃ, ಶ್ರೀ ಗಣಪತಿ ಹೋಮ, ನಾಗದೇವರಿಗೆ ತಂಬಿಲ ಸೇವೆ ನಡೆಯಿತು.

ಸಾಯಂಕಾಲ ಕುಡಾಲು ಬಾಡೂರು ಕೂಡುಕಟ್ಟಿನ ಬಾಡೂರು ಚಾವಡಿಯಿಂದ ಶ್ರೀ ಜಠಾಧಾರಿ ದೈವದ ಭಂಡಾರ ಆಗಮಿಸಿ, ಬಳಿಕ ಶ್ರೀ ರಾಜನ್ ದೈವ ಗುಳಿಗನ ಭಂಡಾರ ಆಗಮನವಾಗಿ ಅನ್ನಸಂತರ್ಪಣೆ ನಡೆಯಿತು.

ರಾತ್ರಿ 9ರಿಂದ ರಾಜನ್ ದೈವ ಗುಳಿಗನಿಗೆ ಕೋಲ ಸೇವೆ, ಶ್ರೀ ಜಠಾಧಾರಿ ದೈವದ ಹರಕೆಯ ಮೈಮೆ ನಡೆಯಿತು.

ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ಶ್ರೀ ಗುರುದೇವಾನಂದ ಸ್ವಾಮೀಜಿಯವರು ಭೇಟಿ ನೀಡಿದರು. ರಾತ್ರಿ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಸಾಂಸ್ಕೃತಿಕ  ಕಾರ್ಯಕ್ರಮವನ್ನು ವಿಟ್ಲ ಅರಮನೆಯ ಕೃಷ್ಣಯ್ಯರವರು ದೀಪಬೆಳಗಿಸಿ ಉದ್ಘಾಟಿಸಿದರು.

ಕಾರ್ಯಾಧ್ಯಕ್ಷರಾದ ಬಾಬು ಕೊಪ್ಪಳ, ಕಾಶಿ ಯುವಕ ಮಂಡಲದ ಅಧ್ಯಕ್ಷರಾದ ದಿವಾಕರ ಮೊದಲಾದವರು ಉಪಸ್ಥಿತರಿದ್ದರು.

driving
- Advertisement -

Related news

error: Content is protected !!