


ಮಾಣಿ: ಶ್ರೀ ಶಾರದಾ ಯುವ ವೇದಿಕೆ ಸೇವಾ ಟ್ರಸ್ಟ್ (ರಿ.) ಮಾಣಿ ಇದರ ವತಿಯಿಂದ ನವರಾತ್ರಿ ಮಹೋತ್ಸವದ ಅಂಗವಾಗಿ “ದಸರಾ ಕ್ರೀಡಾಕೂಟ” ಸಾರ್ವಜನಿಕ ಕಬಡ್ಡಿ ಪಂದ್ಯಾಟ ಹಾಗೂ ಹಗ್ಗಜಗ್ಗಾಟ ಸ್ಪರ್ಧೆ ಸೆ.21-9-2025ನೇ ಆದಿತ್ಯವಾರ ಗಾಂಧಿ ಮೈದಾನ ಮಾಣಿಯಲ್ಲಿ ನಡೆಯಲಿದೆ.
ಮಾಣಿ ಶ್ರೀ ಉಳ್ಳಾಲ್ತಿ ದೈವಸ್ಥಾನ ಆಡಳಿತ ಮೊಕ್ತೇಸರರು ಸಚಿನ್ ರೈ ಮಾಣಿಗುತ್ತು ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ನಿವೃತ್ತ ದೈಹಿಕ ಶಿಕ್ಷಣ ಶಿಕ್ಷಕ ಗಂಗಾಧರ ರೈ ತುಂಗೆರೆಕೋಡಿ ಗೌರವ ಉಪಸ್ಥಿತರಿರುವರು.
*ಮಧ್ಯಾಹ್ನ 1 ಗಂಟೆಗೆ ಹಿರಿಯರ ಕಬಡ್ಡಿ ಪಂದ್ಯಾಟ ಆರಂಭವಾಗಲಿದೆ.
*ತಂಡವನ್ನು ಸ್ಥಳದಲ್ಲೇ ರಚಿಸಲಾಗುವುದು.
*ಅಂಪೈರ್ ಮತ್ತು ಸಂಘಟಕರ ತೀರ್ಮಾನವೇ ಅಂತಿಮ
*ಪುರುಷರ ಹಗ್ಗ ಜಗ್ಗಾಟಕ್ಕೆ 7 ಜನರ ತಂಡವನ್ನು ತಾವೇ ರಚಿಸಿ ತರತಕ್ಕದು.
*4 ಗಂಟೆಗೆ ಹಗ್ಗ ಜಗ್ಗಾಟ ಸ್ಪರ್ಧೆ ಆರಂಭವಾಗಲಿದೆ.
ಮಧ್ಯಾಹ್ನ 2 ಗಂಟೆಗೆ ಮಹಿಳೆಯರಿಗೆ ಆಟೋಟ ಸ್ಪರ್ಧೆ ಆರಂಭವಾಗಲಿದೆ.
ಸಂಜೆ ನಡೆಯುವ ಸಮಾರೋಪ ಸಮಾರಂಭದಲ್ಲಿ ಬಂಟ್ವಾಳ ವಿಧಾನಸಭಾ ಕ್ಷೇತ್ರ ಶಾಸಕ ರಾಜೇಶ್ ನಾಯ್ಕ್ ಅಧ್ಯಕ್ಷತೆ ವಹಿಸಲಿದ್ದಾರೆ. ಮಂಗಳೂರು ಲೋಕಸಭಾ ಕ್ಷೇತ್ರ ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್, ಮಾವಂತೂರು ಶ್ರೀ ಬಲಬಂಡಿ, ಪಿಲಿಚಂಡಿ ದೈವಸ್ಥಾನ ಗಡಿಪ್ರಧಾನರು ದುರ್ಗಾದಾಸ್ ಶೆಟ್ಟಿ, ಸಂದೀಪ್ ಶೆಟ್ಟಿ ಅರಿಯಡ್ಕ, ನವೀನ್ ಕುಮಾಋರ್ ಎಂಜಿನಿಯರ್ ಇಸ್ರೋ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿರುವರು.

ಪಂದ್ಯಾಟದಲ್ಲಿ ವಿಜೇತ ತಂಡಗಳಿಗೆ
*ಹಿರಿಯರ ಕಬಡ್ಡಿ ಪಂದ್ಯಾಟದ ಬಹುಮಾನ
ಪ್ರಥಮ- 4,001/-ನಗದು
ದ್ವಿತೀಯ-3,001/-ನಗದು
*ಹಗ್ಗಜಗ್ಗಾಟದ ಬಹುಮಾನ
ಪ್ರಥಮ-2,501/-ನಗದು
ದ್ವಿತೀಯ-2,001/-ನಗದು
*9ನೇ ತರಗತಿಯಿಂದ ಪದವಿವರೆಗೆ ಕಬಡ್ಡಿ ಪಂದ್ಯಾಟದ ಬಹುಮಾನ
ಪ್ರಥಮ-1,501/-ನಗದು
ದ್ವಿತೀಯ-1,001/-ನಗದು
*1ನೇ ತರಗತಿಯಿಂದ 8ನೇ ತರಗತಿಯವರೆಗೆ ಕಬಡ್ಡಿ ಪಂದ್ಯಾಟದ ಬಹುಮಾನ
ಪ್ರಥಮ-701/-ನಗದು
ದ್ವಿತೀಯ-301/-ನಗದು ನೀಡಲಾಗುವುದು.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:
9663157839








