



ಮಾಣಿಲ: ಬಂಟರ ಸಂಘ ಮಾಣಿಲ ಗ್ರಾಮ ಸಮಿತಿ ಇದರ ವತಿಯಿಂದ ದಿನಾಂಕ 19-10-2024ನೇ ಶನಿವಾರದಂದು ಶ್ರೀ ಶನೀಶ್ಚರ ಪೂಜೆ ಮತ್ತು ಧಾರ್ಮಿಕ ಕಾರ್ಯಕ್ರಮವು ಮಾಣಿಲ ಸಹಕಾರಿ ಸಂಘದ ಅಭಯದ ಸಭಾ ಭವನದಲ್ಲಿ ನಡೆಯಲಿದೆ.

ಸಂಜೆ ಗಂಟೆ 4:00ರಿಂದ ಪೂಜೆ ಪ್ರಾರಂಭವಾಗಿ, ಬಳಿಕ 6:00ಕ್ಕೆ ಮಂಗಳಾರತಿ ಮತ್ತು ಪ್ರಸಾದ ವಿತರಣೆ ನಡೆಯಲಿದೆ.
ಸಂಜೆ 6:30ಕ್ಕೆ ಧಾರ್ಮಿಕ ಕಾರ್ಯಕ್ರಮ ನಡೆಯಲಿದೆ. ಪರಮ ಪೂಜ್ಯ ಶ್ರೀ ಶ್ರೀ ಗುರುದೇವಾನಂದ ಸ್ವಾಮಿಗಳವರು ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನಮ್ ಆಶೀರ್ವಚನ ನೀಡಲಿದ್ದಾರೆ.
ರಾಧಾಕೃಷ್ಣ ಶೆಟ್ಟಿ ಚೆಲ್ಲಡ್ಕ ಅಧ್ಯಕ್ಷರು, ವಿಟ್ಲ ವಲಯ ಬಂಟರ ಸಂಘ ಇವರ ಸಭಾ ಅಧ್ಯಕ್ಷತೆಯಲ್ಲಿ ನಡೆಯುವ ಈ ಧಾರ್ಮಿಕ ಕಾರ್ಯಕ್ರಮದಲ್ಲಿ ಲತಾ ಪಿ. ರೈ ಕೊಲ್ಯ ಮಹಿಳಾ ಅಧ್ಯಕ್ಷರು, ಬಂಟರ ಸಂಘ ವಿಟ್ಲ ವಲಯ, ಭಾಸ್ಕರ ಶೆಟ್ಟಿ, ಮಾಜಿ ಅಧ್ಯಕ್ಷರು, ವಿಟ್ಲ ವಲಯ, ರಂಜಿತ್ ಕುಮಾರ್ ಶೆಟ್ಟಿ ಗುಬ್ಯ ಮೇಗಿನ ಗುತ್ತು, ಅಧ್ಯಕ್ಷರು, ಬಂಟರ ಸಂಘ ವಿಟ್ಲ ವಯಲ ಯುವ ವಿಭಾಗ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಜಗನ್ನಾಥ ರೈ, ಕೆಳಗಿನಮನೆ ಪೂವಣಿ ಶೆಟ್ಟಿ, ಬಿರಿಕಾಪು ಗೌರವ ಉಪಸ್ಥಿತರಾಗಿ ಭಾಗವಹಿಸಲಿದ್ದಾರೆ.
ರಾತ್ರಿ ಗಂಟೆ 9:00ಕ್ಕೆ ಭೋಜನ ವ್ಯವಸ್ಥೆ ನಡೆಯಲಿದೆ.








