ಪೆರುವಾಯಿ ವ್ಯವಸಾಯ ಸೇವಾ ಸಹಕಾರಿ ಸಂಘ ನಿ. ಪೆರುವಾಯಿ ಮಾಣಿಲ ಶಾಖೆಯ ವಿಸ್ತರಣಾ ಕಟ್ಟಡ ‘ಅಭಯ’ ಇದರ ಉದ್ಘಾಟನಾ ಸಮಾರಂಭ 15-09-2024ನೇ ಆದಿತ್ಯವಾರ ಬೆಳಿಗ್ಗೆ ಗಂಟೆ 10.30 ಕ್ಕೆ ಮಾಣಿಲ ಶಾಖೆಯ ವಠಾರದಲ್ಲಿ ನಡೆಯಲಿದೆ.
ಪರಮಪೂಜ್ಯ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ಶ್ರೀಧಾಮ ಮಾಣಿಲ ಇವರು ದೀಪ ಪ್ರಜ್ವಲನೆಯ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ.
ಮಂಗಳೂರು ಲೋಕಸಭಾ ಕ್ಷೇತ್ರದ ಸಂಸದರು ಕ್ಯಾಪ್ಟನ್ ಬ್ರಿಜೇಶ್ ಚೌಟ ವಿಸ್ತರಣಾ ಕಟ್ಟಡವನ್ನು ಉದ್ಘಾಟಿಸಲಿದ್ದಾರೆ. ಪುತ್ತೂರು ವಿಧಾನಸಭಾ ಕ್ಷೇತ್ರದ ಶಾಸಕರು ಅಶೋಕ್ ಕುಮಾರ್ ರೈ ಭದ್ರತಾ ಕೊಠಡಿ ಉದ್ಘಾಟನೆಯನ್ನು ನೆರವೇರಿಸಲಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿ. ಮಂಗಳೂರು ಇದರ ನಿರ್ದೇಶಕರು,ಟಿ. ಜಿ. ರಾಜಾರಾಮ್ ಭಟ್ ಇವರ ಅಧ್ಯಕ್ಷತೆಯಲ್ಲಿ ನಡೆಯುವ ಉದ್ಘಾಟನಾ ಕಾರ್ಯಕ್ರಮದಲ್ಲಿ ರವೀಂದ್ರ ಕಂಬಳಿ ಅಧ್ಯಕ್ಷರು, ದ.ಕ. ಕೃಷಿ ಸಹಕಾರ ಸಂಘ ಮಂಗಳೂರು, ಶ್ರೀಧರ ಬಾಳೆಕಲ್ಲು ಅಧ್ಯಕ್ಷರು, ಮಾಣಿಲ ಗ್ರಾಮ ಪಂಚಾಯತ್, ಶ್ರೀಮತಿ ನಫೀಸಾ ಅಧ್ಯಕ್ಷರು, ಪೆರುವಾಯಿ ಗ್ರಾಮ ಪಂಚಾಯತ್, ರಾಜೇಶ್ ಕುಮಾರ್ ಬಾಳೆಕಲ್ಲು ನಿರ್ದೇಶಕರು, ಭೂ ಅಭಿವೃದ್ಧಿ ಬ್ಯಾಂಕ್ ನಿ. ಬಂಟ್ವಾಳ, ಮಹಾಬಲ ಭಟ್ ಮುರುವ ನಡುಮನೆ ಮಾಜಿ ಮಂಡಲ ಪ್ರಧಾನರು, ಪೆರುವಾಯಿ, ಯಚ್. ಯನ್. ರಮೇಶ್ ಸಹಕಾರ ಸಂಘಗಳ ಉಪನಿಬಂಧಕರು ಮಂಗಳೂರು, ಸುಧೀರ್ ಕುಮಾರ್ ಜೆ. ಸಹಕಾರ ಸಂಘಗಳ ಸಹಾಯಕ ನಿಬಂಧಕರು ಮಂಗಳೂರು, ಗೋಪಾಲ ಯನ್, ಜೆ. ಸಹಕಾರ ಸಂಘಗಳ ಅಭಿವೃದ್ಧಿ ಅಧಿಕಾರಿ ಬಂಟ್ವಾಳ, ಯೋಗಿಶ್ ಎಚ್. ವಲಯ ಮೇಲ್ವಿಚಾರಕರು, ವಿಟ್ಲ ವಲಯ ಇವರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ಈ ಕಾರ್ಯಕ್ರಮದಲ್ಲಿ ತಾವೆಲ್ಲರೂ ಭಾಗವಹಿಸಿ ಚಂದಗಾಣಿಸಿಕೊಡುವಂತೆ ಪೆರುವಾಯಿ ವ್ಯವಸಾಯ ಸೇವಾ ಸಹಕಾರಿ ಸಂಘ ನಿ.ಇದರ ಅಧ್ಯಕ್ಷರು ಗೀತಾನಂದ ಶೆಟ್ಟಿ ಮಾಣಿಲಗುತ್ತು, ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಮುರಳೀಕೃಷ್ಣ ಎಂ. ಎಸ್., ಉಪಾಧ್ಯಕ್ಷರು, ಮನೋರಾಜ್ ರೈ ಅಡ್ವಾಯಿ, ಶಾಖಾ ಸಹಾಯಕರು ಜಯರಾಮ ಡಿ. ಆಡಳಿತ ಮಂಡಳಿ ನಿರ್ದೇಶಕರು ಮತ್ತು ಸರ್ವಸದಸ್ಯರು ಹಾಗೂ ಸಿಬ್ಬಂದಿ ವರ್ಗ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕಾರ್ಯಕ್ರಮಕ್ಕೆ ಹಾಜರಾದ ಸಂಘದ ಸದಸ್ಯರಿಗೆ ಉಡುಗೊರೆ (ಗಿಫ್ಟ್) ನೀಡಲಾಗುವುದು (ಸಮಯ : ಬೆಳಗ್ಗೆ 9.00 ಗಂಟೆಗೆ) ಸ್ಥಳದಲ್ಲೇ ಕೂಪನ್ ವಿತರಿಸಲಾಗುವುದು. ಕಡ್ಡಾಯವಾಗಿ ಮಹಾಸಭೆಯ ನೋಟೀಸನ್ನು ತೋರಿಸಿ ಕೂಪನ್ ಪಡೆದುಕೊಳ್ಳುವುದು.
ಬೆಳಗ್ಗೆ ಗಂಟೆ 9.30ಕ್ಕೆ ಉಪಾಹಾರ ಮತ್ತು ಮಧ್ಯಾಹ್ನ ಗಂಟೆ 1.00ಕ್ಕೆ ಭೋಜನ. ಮಧ್ಯಾಹ್ನ ಗಂಟೆ 2.30ಕ್ಕೆ ಸರಿಯಾಗಿ ಸಂಘದ 2023-24ನೇ ಸಾಲಿನ ಮಹಾಸಭೆ ಜರಗಲಿರುವುದು.