Monday, June 15, 2026
spot_imgspot_img
spot_imgspot_img

ವಿಟ್ಲ: ಹನಿ ಟ್ರ್ಯಾಪ್ ನಡೆಸಿ ಕೈಕಾಲು ಮುರ್ಕೊಂಡು ಮತ್ತೆ ಪೊಲೀಸರ ದಲ್ಲಾಳಿಯಂತೆ ವರ್ತಿಸಿದ ವಿಟ್ಲದ ನಟೋರಿಯಸ್ ರೌಡಿ ಶೀಟರ್ ಜಮಾಲ್..!

- Advertisement -
- Advertisement -

ಮಾಧ್ಯಮದಲ್ಲಿ ಬಂದರೆ, ಪೊಲೀಸರಿಗೆ ಹೇಳಿದರೆ ಮನೆಗೆ ನುಗ್ಗಿ ಕಡಿದು ಹಾಕುವೆ- ಸಾಮಾಜಿಕ ಜಾಲತಾಣದಲ್ಲಿ ಜಮಾಲನ ಆಡಿಯೋ ವೈರಲ್

ಸಾಮಾಜಿಕ ಕಾರ್ಯರ್ತರೊಬ್ಬರಿಂದ ಎಸ್ ಪಿ ಗೆ ದೂರು

ವಿಟ್ಲ: ಸಾರ್ವಜನಿಕ ಸ್ಥಳದಲ್ಲಿ ಜುಗಾರಿ ನಡೆಯುತ್ತಿದ್ದ ವೇಳೆ ಮಾಹಿತಿ ಮೇರೆಗೆ ವಿಟ್ಲ ಪೊಲೀಸ್ ಸಿಬ್ಬಂದಿಗಳ ಜೊತೆ ಎಸ್ ಐ ಠಾಣಾ ವ್ಯಾಪ್ತಿಯ ಪಳಿಕೆ ಎಂಬಲ್ಲಿ ದಾಳಿ ನಡೆಸಿದ್ದಾರೆ. ಈ ವೇಳೆ ಆರೋಪಿಗಳು ಪರಾರಿಯಾಗಿದ್ದಾರೆ.

ಬಳಿಕ ವಿಟ್ಲ ಠಾಣೆಯಲ್ಲಿ ಮಧ್ಯವರ್ತಿ ಮಾಡುತ್ತಿರುವ ಈ ಹಿಂದೆ ಪಿರಿಯಾಪಟ್ಟಣ ಮತ್ತು ಉಪ್ಪಿನಂಗಡಿಯಲ್ಲಿ ಹನಿಟ್ರ್ರಾಪ್ ನಡೆಸಿ ಸಿಕ್ಕಿಬಿದ್ದಿರುವ ಆರೋಪಿ ವಿಟ್ಲದ ಜಮಾಲ್ ಜೊತೆ ಎಸೈ ಅವರು ಸೇರಿಕೊಂಡು ಜುಗಾರಿ ಆರೋಪಿಗೆ ಕರೆ ಮಾಡಿದ್ದಾರೆ.

ಜಮಾಲ್ ಜೊತೆ ಮಾತುಕತೆ ನಡೆಸಿ ಮೂವತ್ತು ಸಾವಿರ ನೀಡಬೇಕು. ಇಲ್ಲವಾದರೆ ಸ್ಥಳೀಯ ಹದಿನೈದು ಜನರಿಂದ ದೂರು ಪಡೆದು ಬಂಧಿಸುತ್ತೇನೆಂದು ಆರೋಪಿಗಳ ಪೈಕಿ ಒಬ್ಬರಿಗೆ ಹೇಳಿದ್ದಾರೆ. ಇನ್ನು ಈ ವಿಚಾರ ಮಾಧ್ಯಮದಲ್ಲಿ ಬಂದರೆ ಮತ್ತು ಹಿರಿಯ ಪೊಲೀಸರಿಗೆ ಹೇಳಿದರೆ ಮನೆಗೆ ನುಗ್ಗಿ ಕಡಿಯುತ್ತೇವೆಂದು ಬ್ರೋಕರ್ ಜಮಾಲ್ ಧಮ್ಕಿ ಹಾಕಿದ್ದಾನೆ. ಈ ಎಲ್ಲಾ ಆಡಿಯೋಗಳು ಮತ್ತು ಬರಹಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಈ ಬಗ್ಗೆ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ಎಸ್ ಪಿ ಯವರಿಗೆ ಸಾಮಾಜಿಕ ಕಾರ್ಯಕರ್ತರೊಬ್ಬರು ಮನವಿ ಮಾಡಿದ್ದಾರೆ.

- Advertisement -

Related news

error: Content is protected !!