Monday, June 22, 2026
spot_imgspot_img
spot_imgspot_img

ಮಣಿಪಾಲ: ಸಿಲಿಂಡರ್ ಸ್ಪೋಟ; ಅಪಾಯದಿಂದ ಪಾರಾದ ಮನೆ ಮಂದಿ!

- Advertisement -
- Advertisement -

ಮಣಿಪಾಲ: ಮಣಿಪಾಲದ ಸೋನಿಯಾ ಕ್ಲಿನಿಕ್ ಬಳಿ ಅಡುಗೆಗೆ ಬಳಸುವ ಸಿಲಿಂಡರ್ ಸ್ಪೋಟಗೊಂಡ ಘಟನೆ ನಡೆದಿದೆ.

ಮನೆಯಲ್ಲಿ ಬಳಸುವ ಸಿಲಿಂಡರ್‌ನಲ್ಲಿ ಅಡುಗೆ ಅನಿಲ ಸೋರುತ್ತಿರುವುದು ಮನೆಯವರ ಗಮನಕ್ಕೆ ಬಂದಿದ್ದು, ಅದನ್ನು ತಡೆಯುವ ಪ್ರಯತ್ನ ಮಾಡಿದರೂ ಸಫಲವಾಗದೇ ಸಿಲಿಂಡರ್ ಸ್ಪೋಟಗೊಂಡಿದೆ.

ಸ್ಪೋಟದ ರಭಸಕ್ಕೆ ಅಡುಗೆ ಮನೆಯ ಮೇಲ್ಛಾವಣೆಗಳು ಹಾರಿ ಹೋಗಿ ಅಡುಗೆ ಕೋಣೆಯೊಳಗಡೆಯೂ ಹಾನಿಯುಂಟಾಗಿದೆ. ಸ್ಥಳಕ್ಕೆ ಭೇಟಿ ನೀಡಿದ ಅಗ್ನಿಶಾಮಕ ದಳದ ಸಿಬ್ಬಂದಿಗಳು ಬೆಂಕಿ ನಂದಿಸಿದರು. ಅದೃಷ್ಟವಶಾತ್ ಮನೆಯವರು ಅಪಾಯದಿಂದ ಪಾರಾಗಿದ್ದಾರೆ.

- Advertisement -

Related news

error: Content is protected !!