Sunday, July 19, 2026
spot_imgspot_img
spot_imgspot_img

ಮೈಸೂರಿನಲ್ಲಿ ಪೊಲೀಸರ ಮೇಲೆ ಥಳಿತ; ಹಲ್ಲೆ ಮಾಡಿದವರಲ್ಲಿ ಪ್ರಮುಖರು ರೌಡಿಶೀಟರ್‌ಗಳು

- Advertisement -
- Advertisement -

ಮೈಸೂರಿನ ವಿ.ವಿ.ಪುರ ಸಂಚಾರ ಪೊಲೀಸ್ ಠಾಣೆ ವ್ಯಾಪ್ತಿಯ ರಿಂಗ್ ರಸ್ತೆಯಲ್ಲಿ ತಪಾಸಣೆ ನಡೆಸುತ್ತಿದ್ದ ಪೊಲೀಸರು ಅಡ್ಡಗಟ್ಟಿದಾಗ ದೇವರಾಜು ತಪ್ಪಿಸಿಕೊಳ್ಳಲು ಪ್ರಯತ್ನಿಸಿದ್ದಾರೆ. ಆಗ ಆಯತಪ್ಪಿ ಕೆಳಕ್ಕೆ ಬಿದ್ದಿದ್ದು, ಅದೇ ಸಮಯಕ್ಕೆ ಬರುತ್ತಿದ್ದ ವ್ಯಾನ್ವೊಂದು ಅವರಿಗೆ ಹಿಂದುಗಡೆಯಿ0ದ ಡಿಕ್ಕಿ ಹೊಡೆದಿದೆ. ಗಂಭೀರ ಗಾಯಗೊಂಡ ಅವರು ಸ್ಥಳದಲ್ಲೇ ಮೃತಪಟ್ಟ ಘಟನೆ ಸಾರ್ವಜನಿಕರನ್ನು ರೊಚ್ಚಿಗೇಳುವಂತೆ ಮಾಡಿತ್ತು. ಹೀಗಾಗಿ ಪೊಲೀಸರ ಮೇಲೆ ಥಳಿಸಲಾಗಿದೆ. ಈ ದೃಶ್ಯ ಸಾಕಷ್ಟು ವೈರಲ್ ಆಗಿದೆ.

ಮೂವರು ಪೊಲೀಸರ ಮೇಲೆ ಕೈ ಮಾಡಿದ ವ್ಯಕ್ತಿಗಳನ್ನು ಪತ್ತೆ ಹಚ್ಚಿ ಬಂಧಿಸಲಾಗಿದೆ. ಬಂಧಿಸವರಲ್ಲಿ ಪ್ರಮುಖರು ರೌಡಿ ಶೀಟರ್‌ಗಳು ಎಂಬುವುದನ್ನು ಪೊಲೀಸರು ತಿಳಿಸಿದ್ದಾರೆ.

- Advertisement -

Related news

error: Content is protected !!