Tuesday, June 23, 2026
spot_imgspot_img
spot_imgspot_img

ಉಡುಪಿ: ಕೇಳಿದ ಸಮಯಕ್ಕೆ ಮಾತ್ರೆ ನೀಡದ ಮೆಡಿಕಲ್ ಶಾಪ್ ಮಾಲಕರ ಮೇಲೆ ಹಲ್ಲೆ ಪ್ರಕರಣ: ಆರೋಪಿಗಳ ವಿರುದ್ಧ ಕೇಸು ದಾಖಲು

- Advertisement -
- Advertisement -

ಉಡುಪಿ: ಕೇಳಿದ ಸಮಯಕ್ಕೆ ಮಾತ್ರೆ ನೀಡದ ಮೆಡಿಕಲ್ ಶಾಪ್ ಮಾಲಕರ ಮೇಲೆ ವ್ಯಕ್ತಿಗಳಿಬ್ಬರು ಹಲ್ಲೆ ಮಾಡಿದ ಘಟನೆ ಉಡುಪಿಯಲ್ಲಿ ನಡೆದಿದೆ.

ಉಡುಪಿಯ ಕೊಡಂಕೂರಿನಲ್ಲಿ ಮೆಡಿಕಲ್ ಶಾಪ್ ವೊಂದನ್ನು ನಡೆಸುತ್ತಿರುವ ಪುಷ್ಪರಾಜ್ ಶೆಟ್ಟಿಯವರು ಸರ್ಕಾರದ ಆದೇಶದಂತೆ ರಾತ್ರಿ 8:00 ಗಂಟೆಯ ವೇಳೆಗೆ ಮೆಡಿಕಲ್ ಬಂದ್ ಮಾಡಲು ಹೊರಟಿದ್ದಾರೆ.

ಈ ವೇಳೆಯಲ್ಲಿ ಹರೀಶ್ ಹಾಗೂ ಅವರ ಮಗ ಶಾಪ್ ಗೆ ಬಂದು ಬಿಪಿ ಮಾತ್ರೆಯನ್ನು ಕೇಳಿದ್ದಾರೆ. ಸಮಯ ಆಗಿದ್ದರಿಂದ ಶಾಪ್ ಮುಚ್ಚಲು ಹೊರಟಿದ್ದ ಪುಷ್ಪರಾಜ್ ಶೆಟ್ಟಿ ನಾಳೆ ಬೆಳಿಗ್ಗೆ ಕೊಡುವುದಾಗಿ ತಿಳಿಸಿದ್ದಾರೆ.

ಇದನ್ನು ಕೇಳದ ಗ್ರಾಹಕರು ಮಾತಿಗೆ ಮಾತು ಬೆಳೆಸಿ, ಮಾಲಕರ ಮೇಲೆ ಹಲ್ಲೆಗೆ ಮುಂದಾಗಿದ್ದಾರೆ. ಹರೀಶ್ ಹಾಗೂ ಅವರ ಮಗ ಕೈಯಿಂದ ಪುಷ್ಪರಾಜ್ ಶೆಟ್ಟಿ ಮೇಲೆ ಹಲ್ಲೆ ಮಾಡಿದ್ದು, ಹಲ್ಲೆಯಿಂದ ಪುಷ್ಪರಾಜ್ ಮುಖಕ್ಕೆ, ಕಣ್ಣಿನ ಕೆಳಗೆ ಗಾಯವಾಗಿದೆ.

ಇಷ್ಟು ಮಾತ್ರವಲ್ಲದೆ ಆರೋಪಿಗಳು ಅವಾಚ್ಯ ಶಬ್ದಗಳಿಂದ ಬೈದು ಜೀವ ಬೆದರಿಕೆ ಹಾಕಿದ್ದಾರೆ ಎಂದು ನಗರ ಪೊಲೀಸ್ ಠಾಣೆಯಲ್ಲಿ ನೀಡಿದ ದೂರಿನಲ್ಲಿ ದಾಖಲಾಗಿದೆ.

- Advertisement -

Related news

error: Content is protected !!