Monday, June 8, 2026
spot_imgspot_img
spot_imgspot_img

ದ.ಕ.ಜಿ.ಪೊಲೀಸ್ ವ್ಯಾಪ್ತಿಯ ಬ್ಯಾಂಕ್ ಸುರಕ್ಷತೆಯ ಬಗ್ಗೆ ಬ್ಯಾಂಕ್ ಮುಖ್ಯಸ್ಥರುಗಳೊಂದಿಗೆ ಸಭೆ

- Advertisement -
- Advertisement -

ಬಿ.ಸಿ. ರೋಡ್‌: ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಬ್ಯಾಂಕ್ ಗಳ ಸುರಕ್ಷತೆಗೆ ಸಂಬಂಧಿಸಿದಂತೆ, ಪೊಲೀಸ್ ಅಧೀಕ್ಷಕರ ಉಪಸ್ಥಿತಿಯಲ್ಲಿ ಎಲ್ಲಾ ಬ್ಯಾಂಕ್ ಮುಖ್ಯಸ್ಥರುಗಳೊಂದಿಗೆ ದ.ಕ.ಜಿಲ್ಲಾ ಬ್ಯಾಂಕ್ ಹಾಗೂ ಸಹಕಾರಿ ಸಂಘಗಳ ಭದ್ರತಾ ವ್ಯವಸ್ಥೆ ಕುರಿತು ಬಿ.ಸಿರೋಡಿನ ಲಯನ್ಸ್ ಕ್ಲಬ್‌ನಲ್ಲಿ ಸಮಾಲೋಚನ ಸಭೆ ನಡೆಯಿತು.

ಸಭೆಯ ಅಧ್ಯಕ್ಷತೆ ವಹಿಸಿ, ಸಲಹೆ ನೀಡಿದ ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿ ಸಿ.ಬಿ.ರಿಷ್ಯಂತ್ ಬ್ಯಾಂಕ್ ಗಳ ಸುರಕ್ಷತೆಗೆ ಸಂಬಂಧಿಸಿದಂತೆ ತೆಗೆದುಕೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳಗಳನ್ನು ಕಟ್ಟುನಿಟ್ಟಾಗಿ ಅಳವಡಿಸಿಕೊಳ್ಳುವಂತೆ ಸೂಚನೆ ನೀಡಿದರು.

ಸಭೆಯಲ್ಲಿ ನೀಡಲಾಗಿರುವ ಸೂಚನೆಗಳನ್ನು, ಮುಂದಿನ 20 ದಿನಗಳ ಒಳಗಾಗಿ ಬ್ಯಾಂಕ್ ಗಳು ಅಳವಡಿಸಿಕೊಂಡಿರುವ ಬಗ್ಗೆ, ಆಯಾ ಠಾಣಾ ವ್ಯಾಪ್ತಿಯ ಪೊಲೀಸ್ ಠಾಣೆಗಳ ಠಾಣಾಧಿಕಾರಿಗಳು, ಖುದ್ದಾಗಿ ಪರಿಶೀಲಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಯಿತು.

ಸಭೆಯಲ್ಲಿ ಜಿಲ್ಲೆಯ 300ಕ್ಕೂ ಅಧಿಕ ಬ್ಯಾಂಕ್ ಮ್ಯಾನೇಜರ್ ಗಳು ಭಾಗಿಯಾಗಿದ್ದರು.

- Advertisement -

Related news

error: Content is protected !!