Sunday, May 5, 2024
spot_imgspot_img
spot_imgspot_img

ಕ್ಷಿಪಣಿ ದಾಳಿ : ಕೇರಳ ಮೂಲದ ವ್ಯಕ್ತಿ ಮೃತ್ಯು

- Advertisement -G L Acharya panikkar
- Advertisement -

ಜೆರುಸೆಲಂನ ಲೆಬನಾನ್ ನಿಂದ ಉಡಾಯಿಸ್ಪಟ್ಟ ಕ್ಷಿಪಣಿ ಇಸ್ರೇಲ್ ನ ಉತ್ತರದ ಗಡಿ ಮಾರ್ಗಲಿಯಟ್ ಬಳಿಯ ಹಣ್ಣಿನ ತೋಟಕ್ಕೆ ಅಪ್ಪಳಿಸಿ ಕೇರಳ ಮೂಲದ ವ್ಯಕ್ತಿಯೊಬ್ಬರು ಮೃತಪಟ್ಟು ಮತ್ತು ಇಬ್ಬರು ಕೇರಳೀಯರು ಸೇರಿ ಏಳು ಜನ ಗಾಯಗೊಂಡ ಘಟನೆ ಸೋಮವಾರ ಸಂಭವಿಸಿದೆ.

ಮೃತನನ್ನು ಕೇರಳದ ಕೊಲ್ಲಂ ಮೂಲದ ಪಟ್ನಬಿನ್ ಮ್ಯಾಕ್ಸ್‌ವೆಲ್ ಎಂದು ಗುರುತಿಸಲಾಗಿದೆ.

ಅವರ ಮೃತದೇಹವನ್ನು ಜಿವ್ ಆಸ್ಪತ್ರೆಯಲ್ಲಿ ಇರಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. ಸೋಮವಾರ ಬೆಳಗ್ಗೆ 11 ಗಂಟೆಯ ಸುಮಾರಿಗೆ ಇಸ್ರೇಲ್‌ನ ಉತ್ತರದ ಗಲಿಲಿ ಪ್ರದೇಶದಲ್ಲಿ ಮೊಶಾವ್ (ಸಾಮೂಹಿಕ ಕೃಷಿ ಸಮುದಾಯ) ಎಂಬ ತೋಟದಲ್ಲಿ ಕ್ಷಿಪಣಿ ಅಪ್ಪಳಿಸಿತು ಎಂದು ರಕ್ಷಣಾ ಸೇವೆಗಳ ವಕ್ತಾರ ಮ್ಯಾಗೆನ್ ಡೇವಿಡ್ ಆಡಮ್ (ಎಂಡಿಎ) ಝಕಿ ಹೆಲ್ಲರ್ ಪಿಟಿಐಗೆ ತಿಳಿಸಿದರು.

ಈ ಕ್ಷಿಪಣಿ ದಾಳಿಯಿಂದ ಇತರ ಇಬ್ಬರು ಕೇರಳಿಗರಾದ ಬುಷ್ ಜೋಸೆಫ್ ಜಾರ್ಜ್ ಮತ್ತು ಪಾಲ್ ಮೆಲ್ವಿನ್ ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ ಎಂದು ಅವರು ಹೇಳಿದ್ದಾರೆ. ಗಂಭೀರ ಗಾಯಗೊಂಡಿದ್ದ ಜಾರ್ಜ್ ಅವರು ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದು, ಸದ್ಯ ಚೇತರಿಸಿಕೊಳ್ಳುತ್ತಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅಲ್ಪ-ಸ್ವಲ್ಪ ಗಾಯಗೊಂಡ ಮೆಲ್ವಿನ್ ಅವರನ್ನು ಉತ್ತರ ಇಸ್ರೇಲ್‌ನ ಸಫೆಡ್‌ನ ಜಿವ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಇವರು ಕೇರಳದ ಇಡುಕ್ಕಿ ಜಿಲ್ಲೆಯವರು.

- Advertisement -

Related news

error: Content is protected !!