Sunday, May 5, 2024
spot_imgspot_img
spot_imgspot_img

ನನ್ನ ಹೆಸರಿನಲ್ಲಿ ಹಣ ಕೇಳಿದರೆ ಕೊಡುವ ಅಗತ್ಯವಿಲ್ಲ- ಶಾಸಕ ಅಶೋಕ್‌ ಕುಮಾರ್‌ ರೈ

- Advertisement -G L Acharya panikkar
- Advertisement -

ನನ್ನ ಹೆಸರು ಹೇಳಿಕೊಂಡು ಕೆಲವರು ಸರಕಾರಿ ಇಲಾಖೆಯ ಅಧಿಕಾರಿಗಳ ಬಳಿ, ಉದ್ಯಮಿಗಳ ಬಳಿ ಹಣ ಕೇಳುತ್ತಿದ್ದಾರೆ ಎಂಬ ವಿಚಾರ ನನ್ನ ಗಮನಕ್ಕೆ ಬಂದಿದ್ದು ನನ್ನ ಹೆಸರು ಹೇಳಿ ಯಾರಾದರು ಹಣ ಕೇಳಿದರೆ ಕೊಡಬೇಕಾದ ಅವಶ್ಯಕತೆಯಿಲ್ಲ ಎಂದು ಈ ಮೂಲಕ ಸ್ಪಷ್ಟ ಪಡಿಸುತ್ತಿದ್ದೇನೆ.

ಕಳೆದ ಹಲವಾರು ದಿನಗಳಿಂದ ಈ ರೀತಿಯ ವಿಚಾರಗಳು ನಡೆಯುತ್ತಿರುವ ಬಗ್ಗೆ ನನ್ನ ಗಮನಕ್ಕೆ ಬಂದಿದೆ. ನಾನು ಯಾವುದೇ ಅಧಿಕಾರಿಗಳ ಬಳಿಯಾಗಲಿ, ಉದ್ಯಮಿಗಳ ಬಳಿಯಾಗಲಿ ಚುನಾವಣೆಗೆ ಮುನ್ನವೂ ಹಣ ಕೇಳಿಲ್ಲ ಆ ಬಳಿಕವೂ ಕೇಳಿಲ್ಲ , ಇನ್ನು ಕೇಳುವುದೂ ಇಲ್ಲ ಅದರ ಅಗತ್ಯತೆ ನನಗಿಲ್ಲ. ನನ್ನ ಹೆಸರಿನಲ್ಲಿ ಯಾರಾದರೂ ಅಧಿಕಾರಿಗಳ ಬಳಿ , ಉದ್ಯಮಿಗಳ ಬಳಿ ಹಣ ಕೇಳಿದರೆ ಅವರು ಕೊಡಬೇಕಾದ ಅಗತ್ಯವಿಲ್ಲ.

ಶಾಸಕರು ಹೇಳಿರಬಹುದೇ ಎಂಬ ಅನುಮಾನವೇ ಬೇಡ, ನಾನು ಯಾರಲ್ಲೂ ಹಣ ಕಲೆಕ್ಷನ್ ಮಾಡಲು ಹೇಳಿಯೂ ಇಲ್ಲ , ಮುಂದಕ್ಕೆ ಹೇಳುವುದೂ ಇಲ್ಲ ಎಂದು ಶಾಸಕ ಅಶೋಕ್‌ ಕುಮಾರ್‌ ರೈ ಸ್ಪಷ್ಟನೆ ನೀಡಿದ್ದಾರೆ.

- Advertisement -

Related news

error: Content is protected !!