Wednesday, May 15, 2024
spot_imgspot_img
spot_imgspot_img

ಮೊಬೈಲ್ ನಲ್ಲಿ ಗೇಮ್ಸ್ ಆಡಿದಕ್ಕೆ ಪೋಷಕರು ಬೈದ ಪರಿಣಾಮ 15 ವರ್ಷದ ಬಾಲಕ ಕಟ್ಟಡದಿಂದ ಜಿಗಿದು ಆತ್ಮಹತ್ಯೆ..!

- Advertisement -G L Acharya panikkar
- Advertisement -

ನೊಯ್ಡಾ: ಮೊಬೈಲ್ ಫೋನ್ ನಲ್ಲಿ ಗೇಮ್ಸ್ ಆಡಿದ್ದಕ್ಕೆ ಬುದ್ದಿ ಮಾತು ಹೇಳಿದ ಪೋಷಕರ ಮಾತಿನಿಂದ ನೊಂದು 15 ವರ್ಷದ ಬಾಲಕ ಕಟ್ಟಡದಿಂದ ಕೆಳಗೆ ಜಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಉತ್ತರ ಪ್ರದೇಶದ ನೊಯ್ಡಾದಲ್ಲಿ ನಡೆದಿದೆ.

ಪೋಷಕರು ಬೈದರೆಂದು ರಾತ್ರೋರಾತ್ರಿ ಮನೆಯಿಂದ ಹೇಳದೆ ಹೋದ 7ನೇ ತರಗತಿ ಬಾಲಕ ನಿರ್ಮಾಣ ಹಂತದ ಕಟ್ಟಡದಿಂದ ಕೆಳಗೆ ಜಿಗಿದು ಪ್ರಾಣ ಕಳೆದುಕೊಂಡಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮೊಬೈಲ್ ನಲ್ಲಿ ಗೇಮ್ ಆಡುವ ಗೀಳು ಹಚ್ಚಿಸಿಕೊಂಡ ಬಾಲಕ ಪೋಷಕರು ಬೈದರೆಂದು ರಾತ್ರಿ 8 ಗಂಟೆ ಸುಮಾರಿಗೆ ಮನೆಬಿಟ್ಟು ಹೋಗಿದ್ದಾನೆ. ಇಂದು ಬೆಳಗ್ಗೆ ಆತನ ಮೃತದೇಹ ಮನೆ ಹತ್ತಿರದ ನಿರ್ಮಾಣ ಕಟ್ಟಡದ ಕೆಳಗೆ ಸಿಕ್ಕಿದೆ ಎಂದು ಹೆಚ್ಚುವರಿ ಪೊಲೀಸ್ ಉಪ ಆಯುಕ್ತ ಎಲಮರನ್ ಜಿ ತಿಳಿಸಿದ್ದಾರೆ.

- Advertisement -

Related news

error: Content is protected !!