Monday, April 29, 2024
spot_imgspot_img
spot_imgspot_img

ಆತ್ಮನಿರ್ಭರ ಭಾರತಕ್ಕೆ ಮತ್ತೊಂದು ಹೆಜ್ಜೆ; ದೇಶದಲ್ಲೇ ತಾಳೆ ಎಣ್ಣೆ ಉತ್ಪಾದಿಸಲು ಕೇಂದ್ರದಿಂದ ಹೊಸ ಯೋಜನೆ

- Advertisement -G L Acharya panikkar
- Advertisement -

ನವದೆಹಲಿ: ತೈಲ ಆಮದಿಗಾಗಿ ವಿದೇಶಗಳ ಮೇಲೆ ಅವಲಂಬನೆಯಾಗುವುದಕ್ಕೆ ಬ್ರೇಕ್ ಹಾಕಲು ಕೇಂದ್ರ ಸರ್ಕಾರ ಹೊಸ ಯೋಜನೆಯೊಂದಕ್ಕೆ ಅನುಮತಿ ನೀಡಿದೆ. ಈ ಯೋಜನೆಯ ಮೂಲಕ ತಾಳೆ ಎಣ್ಣೆ ಉತ್ಪನ್ನಕ್ಕೆ ವೇಗ ತುಂಬಲು ಕೇಂದ್ರ ಸರ್ಕಾರ ಮುಂದಾಗಿದೆ.

ನ್ಯಾಷನಲ್ ಮಿಷನ್ ಆನ್ ಎಡಿಬಲ್ ಆಯಿಲ್ಸ್- ಆಯಿಲ್ ಪಾಮ್ ಸ್ಕೀಮ್ ಇದಾಗಿದ್ದು ಈಶಾನ್ಯ ಭಾರತ ಮತ್ತು ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳಲ್ಲಿ ಎಂಎಸ್​ಪಿ ಬೆಂಬಲ ಪಡೆಯುವ ಬೆಳೆಗಾರರಿಗೆ ನಿಗದಿತ ಬೆಲೆ ಫಿಕ್ಸ್ ಮಾಡುವುದು. ಮಾರುಕಟ್ಟೆ ಏರಿಳಿತದ ಸಂದರ್ಭದಲ್ಲಿ ರೈತರು ಉತ್ಪನ್ನಗಳಿಗೆ ವ್ಯತ್ಯಾಸವಾದ ಬೆಲೆಯನ್ನ ನೇರ ಲಾಭ ವರ್ಗಾವಣೆಯ ಮೂಲಕ ಪಾವತಿಸಲಾಗುವುದು ಎಂದು ಕೇಂದ್ರ ಸರ್ಕಾರ ಹೇಳಿದೆ.

2025-26 ರ ವೇಳೆಗೆ 6.5 ಲಕ್ಷ ಹೆಕ್ಟೇರ್​ಗಳ ಹೆಚ್ಚುವರಿ ಪ್ರದೇಶವನ್ನ ಹಾಗೂ 2029-30 ರ ಒಳಗೆ ಲಕ್ಷ ಹೆಕ್ಟೇರ್​ ಪ್ರದೇಶವನ್ನ ಈ ಸ್ಕೀಮ್​ಗೆ ಒಳಪಡಿಸಲು ಪ್ರಸ್ತಾಪಿಸಲಾಗಿದೆ. ಈ ಯೋಜನೆಗೆ ಒಟ್ಟು 11,040 ಕೋಟಿ ಖರ್ಚಾಗಬಹುದೆಂದು ಅಂದಾಜಿಸಲಾಗಿದ್ದು ಕೇಂದ್ರ ಸರ್ಕಾರ 8,844 ಕೋಟಿ ಹಾಗೂ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು 2,196 ಕೋಟಿ ಭರಿಸಲಿವೆಯಂತೆ.

- Advertisement -

Related news

error: Content is protected !!