Friday, April 26, 2024
spot_imgspot_img
spot_imgspot_img

ಮನ್ ಕಿ ಬಾತ್ ಸರಣಿಯ 70 ನೇ ಕಾರ್ಯಕ್ರಮ -ದೇಶವಾಸಿಗಳಿಗೆ ಪ್ರಧಾನಿ ಮೋದಿಯ ಕಿವಿಮಾತು

- Advertisement -G L Acharya panikkar
- Advertisement -

ನವದೆಹಲಿ( ಅ.25) : ದೇಶವನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ದೇಶದ ಎಲ್ಲಾ ಜನರಿಗೆ ವಿಜಯದಶಮಿಯ ಶುಭಾಶಯಗಳನ್ನು ಕೋರಿದರು. “ಇಂದು ನೀವು ಸಂಯಮದಿಂದ ಜೀವಿಸುತ್ತಿದ್ದೀರಿ, ಈ ನಮ್ಮ ಹೋರಾಟದಲ್ಲಿ ನಮಗೆ ಜಯ ಖಂಡಿತ ಸಿಗುತ್ತದೆ” ಎಂದರು.


ಪ್ರಧಾನಿ ನರೇಂದ್ರ ಮೋದಿ ‘ಮನ್ ಕೀ ಬಾತ್’ ತಿಂಗಳ ರೇಡಿಯೋ ಕಾರ್ಯಕ್ರಮದ ಮೂಲಕ ಭಾನುವಾರ ದೇಶವನ್ನು ಉದ್ದೇಶಿಸಿ ಮಾತನಾಡಿದರು. ಮನ್ ಕೀ ಬಾತ್ ಸರಣಿಯ 70ನೇ ಕಾರ್ಯಕ್ರಮ ಇದಾಗಿತ್ತು.”ಈ ಬಾರಿ ವಿಜಯ ದಶಮಿ, ರಾಮನವಮಿ ಆಚರಣೆಯಲ್ಲಿ ಹಲವಾರು ಬದಲಾವಣೆ ಆಗಿದೆ.ದೊಡ್ಡ ದೊಡ್ಡ ಆಚರಣೆಗಳು ಕಡಿಮೆಯಾಗಿವೆ. ಈದ್, ದೀಪಾವಳಿ ಸೇರಿದಂತೆ ಅನೇಕ ಹಬ್ಬಗಳು ಮುಂದೆ ಬರಲಿವೆ” ಎಂದರು.

ನರೇಂದ್ರ ಮೋದಿ ಮನ್ ಕೀ ಬಾತ್; ಮುಖ್ಯಾಂಶಗಳು: “ಹಬ್ಬಗಳು ಬಂತು ಎಂದರೆ ನಮ್ಮ ಆಲೋಚನೆ ಮಾರುಕಟ್ಟೆ ಬಳಿ ಸಾಗುತ್ತದೆ. ಏನು ಖರೀದಿ ಮಾಡಬೇಕು ಎಂದು ಆಲೋಚಿಸುತ್ತೇವೆ. ನಾವು ಇಂತಹ ಸಂದರ್ಭದಲ್ಲಿ ಸ್ಥಳೀಯವಾಗಿ ತಯಾರಾಗುವ ಉತ್ಪನ್ನಗಳು ಹೆಚ್ಚು ಖರೀದಿ ಮಾಡೋಣ” ಎಂದು ಮೋದಿ ಕರೆ ನೀಡಿದರು.


ಮೋದಿ ಭಾಷಣದ ಮುಖ್ಯಾಂಶಗಳು

  • ಕಠಿಣ ಪರಿಸ್ಥಿತಿಯಲ್ಲಿ ನಾವೆಲ್ಲರೂ ಒಗ್ಗಟ್ಟಾಗಿದ್ದೆವು. ಭದ್ರತಾ ಸಿಬ್ಬಂದಿ, ಪೊಲೀಸ್, ಪೌರ ಕಾರ್ಮಿಕರ ಜೊತೆ ನಿಂತಿದ್ದೇವೆ. ಹಬ್ಬಗಳ ಸಮಯದಲ್ಲಿಯೂ ನಾವು ಅವರ ಜೊತೆ ನಿಲ್ಲೋಣ, ಅವರನ್ನು ನಮ್ಮ ಪರಿವಾರದವು ಎಂದು ನೋಡೋಣ.
  • ನಾವು ಸ್ಥಳೀಯವಾಗಿ ತಯಾರಾಗುವ ಉತ್ಪನ್ನಗಳನ್ನು ಖರೀದಿ ಮಾಡೋಣ. ಇವುಗಳಿಗೆ ವಿಶ್ವಮಟ್ಟದಲ್ಲಿ ಬೆಳೆಯುವ ಅವಕಾಶವಿದೆ. ಖಾದಿ ಸಹ ಇದರಲ್ಲಿ ಒಂದಾಗಿದೆ. ಖಾದಿಯ ಪ್ರಸಿದ್ಧತೆ ಬೆಳೆಯುತ್ತಿದೆ, ಇದು ಪರಿಸರ ಸ್ನೇಹಿಯಾಗಿದೆ, ಜೊತೆಗೆ ದೇಹಕ್ಕೂ ಸಹ ಉತ್ತಮವಾಗಿದೆ.
  • ಮೆಕ್ಸಿಕೋದಲ್ಲೂ ಖಾದಿ ತಯಾರು ಆಗುತ್ತದೆ. ಖಾದಿ ಎಂಬುದು ಕೇವಲ ಬಟ್ಟೆಯಲ್ಲ. ಅದೊಂದು ಜೀವನ ಪದ್ಧತಿ ಎಂದು ಮೆಕ್ಸಿಕೋ ತಿಳಿಸಿದೆ. ಇಂದು ಮೆಕ್ಸಿಕೋದ ಖಾದಿ ಬಹಳ ಪ್ರಸಿದ್ಧಿ ಪಡೆದಿದೆ.
  • ದೆಹಲಿಯ ಒಂದು ಕೇಂದ್ರದಲ್ಲಿ ಒಂದೇ ದಿನ 1 ಕೋಟಿಗೂ ಅಧಿಕ ರೂ.ಗಳ ಖಾದಿ ಬಟ್ಟೆ ವ್ಯಾಪಾರವಾಗಿದೆ. ಕೋವಿಡ್ ಸಂದರ್ಭದಲ್ಲಿ ಖಾದಿ ಮಾಸ್ಕ್‌ಗಳು ಸಹ ಪ್ರಸಿದ್ಧಿ ಪಡೆದಿದೆ. ಮಹಿಳಾ ಸ್ವ ಸಹಾಯ ಸಂಘಗಳು ಮಾಸ್ಕ್ ಉತ್ಪಾದನೆಯಲ್ಲಿ ತೊಡಗಿವೆ.
  • ನಮ್ಮ ದೇಶದ ಅನೇಕ ಕ್ರೀಡೆಗಳು ವಿದೇಶದಲ್ಲಿ ಮಾನ್ಯತೆ ಪಡೆಯುತ್ತಿವೆ. ಅವುಗಳಲ್ಲಿ ಮಲ್ಲಕಂಭ ಸಹ ಒಂದು. ಅಮೆರಿಕದಲ್ಲಿ ಹಲವು ಪ್ರದೇಶದಲ್ಲಿ ಇಂದು ಮಲ್ಲಕಂಭ ತರಬೇತಿ ನೀಡುವ ಕೇಂದ್ರಗಳಿವೆ. ಹಲವಾರು ಯುವಕರು ಇದರ ತರಬೇತಿಯನ್ನು ಪಡೆಯುತ್ತಿದ್ದಾರೆ.
    ನರೇಂದ್ರ ಮೋದಿ ಅವರು ಗ್ರಂಥಾಲಯಗಳ ಬಗ್ಗೆ ಮಾತನಾಡಿದರು
  • ಪೋನ್ ಮಾರ್ಯಪ್ಪ ತಮಿಳುನಾಡಿನ ತೂತುಕುಡಿಯಲ್ಲಿ ವಾಸಿಸುತ್ತಾರೆ. ಅವರು ತಮ್ಮ ಸಲೂನ್‌ನಲ್ಲಿ ಚಿಕ್ಕ ಗ್ರಂಥಾಲಯವನ್ನು ಮಾಡಿದ್ದಾರೆ. ಅಲ್ಲಿ ಪುಸ್ತಕ ಓದಿ ಅದರ ಬಗ್ಗೆ ಬರೆದವರಿಗೆ ಅವರು ರಿಯಾಯಿತಿ ನೀಡುತ್ತಾರೆ.
  • ಮನ್ ಕೀ ಬಾತ್ ಕಾರ್ಯಕ್ರಮದಲ್ಲಿ ಮೋದಿ ಪೋನ್ ಮಾರ್ಯಪ್ಪ ಅವರ ಜೊತೆ ದೂರವಾಣಿಯಲ್ಲಿ ಮಾತನಾಡಿದರು. ಗ್ರಂಥಾಲಯ ಸ್ಥಾಪನೆ ಮಾಡಲು ಪ್ರೇರಣೆ ಸಿಕ್ಕಿದ್ದು ಹೇಗೆ? ಎಂದು ಮಾತುಕತೆ ನಡೆಸಿದರು.
  • ಭಾರತದಲ್ಲಿ ಹಲವಾರು ಜನರಿಗೆ ಜ್ಞಾನವನ್ನು ಪ್ರಸರಣ ಮಾಡುವುದರಲ್ಲಿ ಸಂತಸ ಸಿಗುತ್ತದೆ. ಅರುಣಾಚಲ ಪ್ರದೇಶದಲ್ಲಿ ಸ್ಥಾಪನೆ ಮಾಡಲಾದ ಸಾಮುದಾಯಿಕ ಗ್ರಂಥಾಲಯದ ಬಗ್ಗೆ ಮೋದಿ ಮಾತನಾಡಿದರು.
  • ಚಂಡೀಗಢ್‌ದಲ್ಲಿ ಸಂದೀಪ್ ಕುಮಾರ್ ಸಂಚಾರಿ ಗ್ರಂಥಾಲಯ ತೆರೆದಿದ್ದಾರೆ. ಇದರಿಂದಾಗಿ ಬಡ ಮಕ್ಕಳಿಗೆ ಓದಲು ಅನುಕೂಲವಾಗಿದೆ. ಶಾಲೆಯಲ್ಲಿಯೂ ಈಗ ಆನ್ ಲೈನ್ ತರಗತಿಗಳು ಆರಂಭವಾಗಿವೆ.
  • ಅಕ್ಟೋಬರ್ 31ರಂದು ರಾಷ್ಟ್ರೀಯ ಏಕತಾ ದಿವಸವಾಗಿದೆ. ಸರ್ದಾರ್ ಪಟೇಲ್ ಅವರ ಜನ್ಮದಿನ ಅಂದು. ಪಟೇಲ್ ಅವರ ಬಗ್ಗೆ ನಾವು ಮನ್ ಕೀ ಬಾತ್‌ನಲ್ಲಿ ಹಲವಾರು ಬಾರಿ ವಿವರವಾಗಿ ಚರ್ಚೆ ಮಾಡಿದ್ದೇವೆ.
  • ಸರ್ದಾರ್ ಪಟೇಲ್ ತಮ್ಮ ಸಂಪೂರ್ಣ ಜೀವನವನ್ನು ರಾಷ್ಟ್ರೀಯ ಏಕತೆಗಾಗಿ ಮೀಸಲಾಗಿಟ್ಟರು. ನಾವು ಇವುಗಳನ್ನು ಮುಂದುವರೆಸಿಕೊಂಡು ಹೋಗಬೇಕು. ನಮ್ಮ ಪೂರ್ವಜರು ಮಾಡಿದ ತ್ಯಾಗ, ಬಲಿದಾನಗಳನ್ನು ನೆನಪುಮಾಡಿಕೊಳ್ಳಬೇಕು ಎಂದು ಮೋದಿ ಹೇಳಿದರು.
  • ಭಾರತದ ನದಿಗಳ ಬಗ್ಗೆ ಮಾತನಾಡಿದ ನರೇಂದ್ರ ಮೋದಿ ಸಿಂಧೂ ನದಿಯಿಂದ ದಕ್ಷಿಣದ ಕಾವೇರಿ ನದಿ ವರೆಗೆ ಹಬ್ಬಿರುವ ಸಂಸ್ಕೃತಿಗಳ ಬಗ್ಗೆ ಮಾತನಾಡಿದರು. ಗಂಗಾನದಿ ನಮ್ಮ ಸಂಸ್ಕೃತಿ, ವೇದಗಳಲ್ಲಿ ಹೇಗೆ ಅಡಗಿದೆ.
  • ‘ಏಕ್ ಭಾರತ್ ಶ್ರೇಷ್ಠ ಭಾರತ್’ ವೆಬ್ ಸೈಟ್ ಓದುವಂತೆ ನರೇಂದ್ರ ಮೋದಿ ಕರೆ ನೀಡಿದರು. ಇಲ್ಲಿ ಪ್ರತಿದಿನ ಒಂದು ವಾಕ್ಯವನ್ನು ಬೇರೆ-ಬೇರೆ ಭಾಷೆಗಳಲ್ಲಿ ಹೇಗೆ ಬಳಕೆ ಮಾಡಬೇಕು ಎಂಬ ವಿವರಗಳಿವೆ ಎಂದು ವಿವರಿಸಿದರು.
  • ಪೆನ್ಸಿಲ್ ನಿರ್ಮಾಣದ ಬಗ್ಗೆ ಮಾತನಾಡಿದ ನರೇಂದ್ರ ಮೋದಿ ಕಾಶ್ಮೀರದ ಪುಲ್ವಮಾದಲ್ಲಿ ಹೇಗೆ ಪೆನ್ಸಿಲ್ ಉತ್ಪಾದನೆ ಆಗುತ್ತದೆ ಎಂದು ವಿವರಿಸಿದರು. ಪೆನ್ಸಿಲ್ ಸ್ಲೇಟ್ ಉತ್ಪಾದನೆಯಲ್ಲಿ ಪುಲ್ವಮಾ ದೇಶದಲ್ಲಿಯೇ ಪ್ರಸಿದ್ಧಿ ಪಡೆದಿದೆ ಎಂದರು.
  • ಜಾರ್ಖಂಡ್‌ನಲ್ಲಿ ಮಹಿಳಾ ಸ್ವ ಸಹಾಯ ಸಂಘದವರು ರೈತರಿಂದ ತರಕಾರಿ ಸಂಗ್ರಹ ಮಾಡಿ ಮೊಬೈಲ್ ತಂತ್ರಜ್ಞಾನದ ಮೂಲಕ ಹೇಗೆ ಮಾರಾಟ ಮಾಡುತ್ತಾರೆ ಎಂದು ವಿವರಣೆಯನ್ನು ನೀಡಿದರು.
  • ಹಬ್ಬದ ಸಂದರ್ಭದಲ್ಲಿಯೂ ಪದೇ ಪದೇ ಸಾಬೂನ್‌ನಿಂದ ಕೈ ತೊಳೆಯುವುದು, ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಪಾಡುವುದನ್ನು ಮರೆಯಬೇಡಿ ಎಂದು ಮೋದಿ ಕರೆ ಕೊಟ್ಟರು.
- Advertisement -

Related news

error: Content is protected !!