Friday, May 17, 2024
spot_imgspot_img
spot_imgspot_img

ಭಾರತವನ್ನು ಜಗತ್ತು ಈಗ ಹವಾಮಾನ ನ್ಯಾಯದ ನಾಯಕನಂತೆ ಕಾಣುತ್ತಿದೆ- ಪ್ರಧಾನಿ ಮೋದಿ

- Advertisement -G L Acharya panikkar
- Advertisement -

ನವದೆಹಲಿ: ಭಾರತವನ್ನು ಜಗತ್ತು ಇಂದು ಹವಾಮಾನ ನ್ಯಾಯದ ನಾಯಕನಂತೆ ಕಾಣುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ಈ ಕುರಿತು ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಮಾತನಾಡಿದ ಅವರು, ಹವಾಮಾನ ವಿಚಾರದಲ್ಲಿ ಭಾರತವು ಅನೇಕ ದೂರ ಕ್ರಮಿಸಿದ್ದು, ಹವಾಮಾನ ವಿಚಾರದಲ್ಲಿ ಭಾರತವನ್ನು ಸವಾಲೆಂದು ಪರಿಗಣಿಸಿದ್ದ ವಿಶ್ವದ ಇತರ ರಾಷ್ಟ್ರಗಳು ಈಗ ದೇಶವನ್ನು ಹವಾಮಾನ ನ್ಯಾಯದ ನಾಯಕನಂತೆ ಕಾಣುತ್ತಿವೆ ಎಂದರು.

ಇನ್ನು ಕಬ್ಬು ಬೆಳೆಗಾರರನ್ನು ಉದ್ದೇಶಿಸಿ ಮಾತನಾಡಿದ ಅವರು, “ಎಥೆನಾಲ್‌ ಅನ್ನು ಜೈವಿಕ ಇಂಧನವಾಗಿ ಬಳಸುವ ಪ್ರಯೋಜನಗಳ ಬಗ್ಗೆ ಹೆಚ್ಚು ಅರಿವು ಮೂಡಿಸುವಂತೆ ಸಲಹೆ ನೀಡಿ, ತೈಲ ಮಾರುಕಟ್ಟೆ ಕಂಪನಿಗಳು ಎಥೆನಾಲ್‌ಗೆ 21,000 ಕೋಟಿ ಹೂಡಿಕೆ ಮಾಡಿದ್ದು, ಅದರಲ್ಲಿ ಹೆಚ್ಚಿನವು ರೈತರಿಗೆ ಲಭ್ಯವಾಗುವಂತೆ ಮಾಡಿವೆ” ಎಂದಿದ್ದಾರೆ.

ಜೈವಿಕ ಇಂಧನ ಬಳಕೆಯ ಉತ್ತೇಜನಕ್ಕಾಗಿ ಪುಣೆಯಲ್ಲಿ ಕೈಗೊಳ್ಳಲಾಗಿರುವ ‘ಇ-100’ ಪ್ರಾಯೋಗಿಕ ಯೋಜನೆಗೆ ಮೋದಿ ಚಾಲನೆ ನೀಡಿದ್ದಾರೆ.

- Advertisement -

Related news

error: Content is protected !!