Friday, March 29, 2024
spot_imgspot_img
spot_imgspot_img

ಅಮೆರಿಕ ಅಧ್ಯಕ್ಷ ಜೋ ಬೈಡನ್ ಜೊತೆ ಕೊರೊನಾ ಪರಿಸ್ಥಿತಿ ಕುರಿತು ಚರ್ಚಿಸಿದ ಪ್ರಧಾನಿ ಮೋದಿ

- Advertisement -G L Acharya panikkar
- Advertisement -

ನವದೆಹಲಿ: ದೇಶದಲ್ಲಿ ಕೊರೊನಾ ವ್ಯಾಪಕವಾಗಿ ಏರಿಕೆ ಕಾಣುತ್ತಿರುವ ಮಧ್ಯೆ ಇಂದು ದೇಶದಲ್ಲಿ ಕೊರೊನಾ ಪರಿಸ್ಥಿತಿ ಕುರಿತು ಪ್ರಧಾನಿ ನರೇಂದ್ರ ಮೋದಿ ಹಾಗೂ ಅಮೆರಿಕ ಅಧ್ಯಕ್ಷ ಜೋ ಬೈಡನ್ ನಡುವೆ ಫೋನ್ ಸಂಭಾಷಣೆ ನಡೆದಿದೆ. ಈ ಕುರಿತು ಪ್ರಧಾನಿ ನರೇಂದ್ರ ಮೋದಿ ಟ್ವೀಟ್ ಮೂಲಕ ಮಾಹಿತಿ ನೀಡಿದ್ದಾರೆ.

ಟ್ವೀಟ್​ನಲ್ಲಿ ಅಮೆರಿಕ ಅಧ್ಯಕ್ಷ ಜೋ ಬೈಡನ್ ಅವರೊಂದಿಗೆ ಇಂದು ಉತ್ತಮ ಸಂಭಾಷಣೆ ನಡೆಸಿದೆ. ಎರಡೂ ದೇಶಗಳಲ್ಲಿ ಹೆಚ್ಚುತ್ತಿರುವ COVID ಪರಿಸ್ಥಿತಿಯನ್ನು ನಾವು ವಿವರವಾಗಿ ಚರ್ಚಿಸಿದ್ದೇವೆ. ಯುನೈಟೆಡ್ ಸ್ಟೇಟ್ಸ್ ಭಾರತಕ್ಕೆ ನೀಡುತ್ತಿರುವ ಬೆಂಬಲಕ್ಕಾಗಿ ನಾನು ಅಧ್ಯಕ್ಷ ಬೈಡನ್ ಅವರಿಗೆ ಧನ್ಯವಾದ ಅರ್ಪಿಸಿದೆ.

ಅಮೆರಿಕ ಪ್ರೆಸಿಡೆಂಟ್ ಜೊತೆಗಿನ ಮಾತುಕತೆಯಲ್ಲಿ ಲಸಿಕೆಯ ಕಚ್ಚಾವಸ್ತು ಮತ್ತು ಔಷಧಿಗಳ ನಯವಾದ ಮತ್ತು ಪರಿಣಾಮಕಾರಿ ಪೂರೈಕೆಯ ಬಗ್ಗೆಯೂ ಚರ್ಚಿಸಲಾಯ್ತು. ಭಾರತ-ಯುಎಸ್ ಆರೋಗ್ಯ ಸಹಭಾಗಿತ್ವವು COVID-19 ರ ಜಾಗತಿಕ ಸವಾಲನ್ನು ಪರಿಹರಿಸಬಹುದು ಎಂದು ಮೋದಿ ಮಾಹಿತಿ ನೀಡಿದ್ದಾರೆ.

driving
- Advertisement -

Related news

error: Content is protected !!