Friday, August 7, 2026
spot_imgspot_img
spot_imgspot_img

ಅಫ್ಘಾನ್​ನಲ್ಲಿ ಮತ್ತೆ ಶಾಂತಿ ಸ್ಥಾಪಿಸಲು ಜಂಟಿಯಾಗಿ ಕ್ರಮ ತೆಗೆದುಕೊಳ್ಳಬೇಕು; ಪ್ರಧಾನಿ ಮೋದಿ ಕರೆ

- Advertisement -
- Advertisement -

ನವದೆಹಲಿ: ತಜಿಕಿಸ್ತಾನದ ರಾಜಧಾನಿ ಧುಶಂಬೆಯಲ್ಲಿ ನಡೆದ ಶಾಂಘೈ ಕೋ-ಅಪರೇಷನ್ ಆರ್ಗನೈಷೇನ್ (ಎಸ್​ಸಿಒ)ದ ವಾರ್ಷಿಕ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಮಾತನಾಡಿದರು. ವಿಡಿಯೋ ಕಾನ್ಫರೆನ್ಸ್​ ಮೂಲಕ ಮಾತನಾಡಿದ ಮೋದಿ.. ಅಫ್ಘಾನಿಸ್ತಾನದಲ್ಲಿ ಮತ್ತೆ ಶಾಂತಿ ನೆಲೆಸಲು ನಾವು ಜಂಟಿಯಾಗಿ ಹೆಜ್ಜೆಯನ್ನ ಇಡಬೇಕು ಎಂದು ಕರೆ ನೀಡಿದರು.

ಸಮಾವೇಶದಲ್ಲಿ ಭಾಗಿಯಾದ ರಾಷ್ಟ್ರಗಳಿಗೆ ಹಾಗೂ ಕಾರ್ಯಕ್ರಮವನ್ನ ಆಯೋಜಿಸಿದ ತಜಿಕಿಸ್ತಾನದ ನಾಗರಿಕರಿಗೆ ಸ್ವಾಗತ ಕೋರಿ ಮಾತನಾಡಿದ ಮೋದಿ, ಈ ವರ್ಷ ನಾವು ಎಸ್​ಸಿಒದ 20ನೇ ವಾರ್ಷಿಕೋತ್ಸವವನ್ನ ಆಚರಿಸುತ್ತಿದ್ದೇವೆ. ಇರಾನ್ ದೇಶ ಎಸ್​ಸಿಒ ಜೊತೆ ಹೊಸದಾಗಿ ಸೇರಿಕೊಂಡಿದೆ. ಆ ದೇಶವನ್ನ ಈ ಸಂದರ್ಭದಲ್ಲಿ ನಾನು ಸ್ವಾಗತಿಸುತ್ತೇನೆ. ಜೊತೆಗೆ ನಮ್ಮ ನ್ಯೂ ಡೈಲಾಗ್​ ಪಾರ್ಟರ್ ದೇಶಗಳಾದ ಸೌದಿ ಅರೇಬಿಯಾ, ಈಜಿಪ್ಟ್, ಖತಾರ್​ಗೂ ಸ್ವಾಗತ ಮಾಡುತ್ತೇನೆ ಎಂದರು.

ನಂತರ ಅಫ್ಘಾನಿಸ್ತಾನದಲ್ಲಿ ಉಂಟಾಗಿರುವ ಪ್ರಕ್ಷುಬ್ಧತೆ ಬಗ್ಗೆ ಮಾತನಾಡಿ, ಅಫ್ಘಾನ್​ನಲ್ಲಿ ಮತ್ತೆ ಶಾಂತಿ ನೆಲೆಸಲು ನಾವು ಜಾಗತಿಕವಾಗಿ ಶ್ರಮಿಸಬೇಕಿದೆ ಅನ್ನೋದನ್ನ ಒತ್ತಿ ಹೇಳಿದರು. SCO 20ನೇ ವಾರ್ಷಿಕೋತ್ಸವದಲ್ಲಿ ಶಾಂಘೈ ಕೋ-ಅಪರೇಷನ್ ಆರ್ಗನೈಷೇನ್​ನ ಭವಿಷ್ಯದ ಬಗ್ಗೆ ಯೋಚನೆ ಮಾಡಬೇಕಾದ ಸಮಯ. ನಮ್ಮ ಇರುವ ದೊಡ್ಡ ಸವಾಲು ಅಂದರೆ ಶಾಂತಿ, ಭದ್ರತೆ ಮತ್ತು ವಿಶ್ವಾಸ. ಇದರ ಕೊರತೆ ಇದ್ದು, ಇದಕ್ಕೆ ಸ್ಪಷ್ಟ ಉದಾಹರಣೆ ಅಂದರೆ ಅಫ್ಘಾನಿಸ್ತಾನದಲ್ಲಿ ನಡೆಯುತ್ತಿರುವ ಇತ್ತೀಚೆಗಿನ ಬೆಳವಣಿಗೆಗಳು. ಅಲ್ಲಿ ನಾವು ಶಾಂತಿಯನ್ನ ಮತ್ತೆ ಪುನಃಸ್ಥಾಪಿಸಲು ಜಂಟಿಯಾಗಿ ಹೆಜ್ಜೆಯನ್ನ ಇಡಬೇಕು ಎಂದರು.

driving
- Advertisement -

Related news

error: Content is protected !!