- Advertisement -
- Advertisement -
ಬೆಂಗಳೂರು: ಪುಟ್ಟಮಗುವಿಗೆ ಹೊಡೆಯುತ್ತಿದ್ದ ಎಂಬ ಕಾರಣಕ್ಕೆ ತನ್ನ ಆರು ವರ್ಷದ ಮಗುವನ್ನೇ ತಾಯಿಯೊಬ್ಬಳು ಉಸಿರುಗಟ್ಟಿಸಿ ಹತ್ಯೆ ಮಾಡಿದ್ದಾಳೆ.

ಈ ಘಟನೆ ಬೆಂಗಳೂರಿನ ಆರ್ ಆರ್ ನಗರದ ಪಟ್ಟಣಗೆರೆ ಎಂಬಲ್ಲಿ ಈ ಕೃತ್ಯ ವರದಿಯಾಗಿದೆ.ರಾಜಸ್ತಾನ ಮೂಲದ ದೇವಿ ಎಂಬ ಮಹಿಳೆ ತನ್ನ ಆರು ವರ್ಷದ ಮಗು ಮನೀಷ್ ನನ್ನು ಈ ರೀತಿ ಹತ್ಯೆ ಮಾಡಿದ್ದಾಳೆ ಎಂದು ಆರೋಪಿಸಲಾಗಿದೆ.

ದೇವಿ ಅವರು ಇತ್ತೀಚೆಗೆ ಮಗುವಿಗೆ ಜನ್ಮ ನೀಡಿದ್ದರು. ಆ ಮಗುವಿಗೆ ಮನೀಷ್ ಹೊಡೆಯುತ್ತಿದ್ದ ಎಂದು ಹೇಳಲಾಗುತ್ತಿದೆ. ದೇವಿ ಅವರು ಮಾನಸಿಕ ಅಸ್ವಸ್ಥರಾಗಿದ್ದಾರೆ ಎಂದು ಕೂಡ ಹೇಳಲಾಗುತ್ತಿದೆ. ಆದರೆ ಇದನ್ನು ಖಚಿತಪಡಿಸಲಾಗಿಲ್ಲ. ಆರೋಪಿಯನ್ನು ಬಂಧಿಸಲಾಗಿದೆ. ಆರ್ ಆರ್ ನಗರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.


- Advertisement -








