Wednesday, June 17, 2026
spot_imgspot_img
spot_imgspot_img

ಸ್ವಾಮೀಜಿಯ ಮಾತು ಕೇಳಿ ಹೆತ್ತ ಮಗನನ್ನೇ ಹೊಡೆದು ಕೊಂದ ತಾಯಿ..!

- Advertisement -
- Advertisement -

ಚೆನ್ನೈ: ದೆವ್ವ ಬಂದಿದೆಯೆಂದು ಹೆತ್ತ ತಾಯಿಯೇ ಮಗನನ್ನು ಹೊಡೆದು ಸಾಯಿಸಿರುವ ಬೆಚ್ಚಿಬೀಳಿಸುವ ಘಟನೆ ತಮಿಳುನಾಡಿನ ತಿರುವಣ್ಣಾಮಲೈ ಜಿಲ್ಲೆಯಲ್ಲಿ ನಡೆದಿದೆ.

7 ವರ್ಷದ ಬಾಲಕನಿಗೆ ಕೆಲವು ದಿನಗಳಿಂದ ಮಾನಸಿಕ ಆರೋಗ್ಯ ಹದಗೆಟ್ಟಿತ್ತು. ಇದರಿಂದಾಗಿ ಸ್ವಾಮೀಜಿ ಬಳಿ ಬಾಲಕನನ್ನು ಕರೆದುಕೊಂಡು ಹೋಗಿದ್ದರು. ಈ ವೇಳೆ ಬಾಲಕನಿಗೆ ದೆವ್ವ ಹಿಡಿದಿದೆ ಎಂದು ಸ್ವಾಮೀಜಿ ಹೇಳಿದ್ದಾನೆ.

ಸ್ವಾಮೀಜಿ ಮಗನಿಗೆ ದೆವ್ವ ಹಿಡಿದಿದೆ ಎಂದು ಹೇಳಿದ್ದಕ್ಕೆ ಮೂರು ದಿನಗಳಿಂದ ಬಾಲಕನ ತಾಯಿ ಮತ್ತು ಇತರ ಮೂವರು ಮಹಿಳೆಯರು ಬಾಲಕನಿಗೆ ಮನಬಂದಂತೆ ಥಳಿಸಿದ್ದಾರೆ. ಇದರಿಂದಾಗಿ ಗಂಭೀರವಾಗಿ ಗಾಯಗೊಂಡಿದ್ದ ಬಾಲಕ ಕೊನೆಗೆ ಮೃತಪಟ್ಟಿದ್ದಾನೆ.

ಘಟನೆಯ ಬಗ್ಗೆ ತಿಳಿದ ಸ್ಥಳೀಯರು ಪೊಲೀಸರಿಗೆ ದೂರು ನೀಡಿದ್ದಾರೆ. ಪೊಲೀಸರು ಬಾಲಕನ ತಾಯಿ ಸೇರಿ ಮೂವರು ಮಹಿಳೆಯರನ್ನು ಕೂಡ ಬಂಧಿಸಿದ್ದಾರೆ.

- Advertisement -

Related news

error: Content is protected !!