

ತುಳು ಚಿತ್ರರಂಗ ಹೊಸ ದಾರಿಯತ್ತ ಸಾಗುತ್ತಿದ್ದು ಹೊಸ ರೀತಿಯ ಪ್ರಯತ್ನಗಳು ನಡೆಯುತ್ತಿವೆ ಅದಕ್ಕೆ ಮತ್ತೊಂದು ಸೇರ್ಪಡೆ “ಧರ್ಮ ಚಾವಡಿ “. ಕಳೆದ ವರುಷ ಬಿಡುಗಡೆಯಾಗಿ ಹೊಸ ಸಂಚಲನವನ್ನೇ ಮಾಡಿದ್ದ ಧರ್ಮ ದೈವ ಚಿತ್ರದ ನಿರ್ದೇಶಕರ ಎರಡನೇ ಚಿತ್ರ “ಧರ್ಮ ಚಾವಡಿ”.ಚಿತ್ರದ ಬಹುತೇಕ ಕೆಲಸಗಳು ಮುಗಿದಿದ್ದು ಇದೀಗ ಚಿತ್ರತಂಡ ಬಿಡುಗಡೆ ತಿಂಗಳನ್ನು ಘೋಷಿಸಿದೆ.

ಎಸ್‌ಸಿಡಿಸಿಸಿ ಬ್ಯಾಂಕ್ ನಿರ್ದೇಶಕರಾದ ಶಶಿಕುಮಾರ್ ರೈ ಬಾಲ್ಯೋಟ್ಟು ಹೊಸ ಪೋಸ್ಟರ್ ಬಿಡುಗಡೆಗೊಳಿಸಿ ಚಿತ್ರ ತೆರೆಗೆಬರುವ ತಿಂಗಳನ್ನು ಘೋಷಿಸಿದ್ದಾರೆ. ಧರ್ಮ ದೈವ ಚಿತ್ರ ದೇಶ ವಿದೇಶದಲ್ಲಿ ಮೆಚ್ಚುಗೆ ಪಡೆದಿದ್ದು ಧರ್ಮ ಚಾವಡಿ ಇನ್ನು ಯಶಸ್ಸು ಗಳಿಸಲಿ ಎಂದು ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಪ್ರವೀಣ್ ರೈ ಪಂಜೊಟ್ಟು, ನಿರ್ಮಾಪಕ ಜಗದೀಶ್ ಅಮೀನ್ ನಡುಬೈಲು, ನಾರಾಯಣ ರೈ ಕುಕ್ಕುವಳ್ಳಿ, ಭಾಸ್ಕರ್ ರೈ ಕುಕ್ಕುವಳ್ಳಿ ಹಾಗು ಚಿತ್ರದಲ್ಲಿ ಪ್ರಮುಖ ಪಾತ್ರವಹಿಸಿರುವ ರಮೇಶ್ ರೈ ಕುಕ್ಕುವಳ್ಳಿ ವೇದಿಕೆಯಲ್ಲಿ ಉಪಸ್ಥಿತಿಯಿದ್ದು ಕಾರ್ಯಕ್ರಮವನ್ನು ಶರತ್ ಆಳ್ವ ನೆರವೇರಿಸಿದರು. ಚಿತ್ರ ತಂಡದ ಬಹುತೇಕ ಸದಸ್ಯರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.