Thursday, March 28, 2024
spot_imgspot_img
spot_imgspot_img

ಅಂಬಾನಿ ಮನೆ ಸೇರಿದ ಆಲಿವ್ ಮರ..! 84 ಲಕ್ಷ ಬೆಲೆ ಕೊಟ್ಟು ಖರೀದಿ..!

- Advertisement -G L Acharya panikkar
- Advertisement -
vtv vitla
vtv vitla

ಹೈದರಾಬಾದ್: ಆಂಧ್ರಪ್ರದೇಶದ ಪೂರ್ವ ಗೋದಾವರಿ ಜಿಲ್ಲೆಯಿಂದ ಎರಡು ಆಲಿವ್ ಮರಗಳನ್ನು ರಿಲಯನ್ಸ್ ಮುಖ್ಯಸ್ಥ ಮುಖೇಶ್ ಅಂಬಾನಿ ತರಿಸಿಕೊಂಡಿದ್ದಾರೆ. ಸ್ಪೇನ್‌ನಿಂದ ಎರಡು ವರ್ಷಗಳ ಹಿಂದೆ ತರಿಸಿಕೊಂಡಿರುವ ಮರ ಇದಾಗಿದ್ದು, ಇಲ್ಲಿಯವರೆಗೆ ಇದನ್ನು ಗೋದಾವರಿ ನದಿಯ ದಡದಲ್ಲಿರುವ ಕದಿಯಂ ಪ್ರದೇಶದಲ್ಲಿನ ಗೌತಮಿ ನರ್ಸರಿಯಲ್ಲಿ ಪೋಷಿಸಲಾಗುತ್ತಿತ್ತು.

ಆಲಿವ್ ಮರದ ವಿಶೇಷತೆ.?
ಈ ಮರ ಸುಮಾರು 185 ವರ್ಷಗಳಷ್ಟು ಹಳೆಯದಾಗಿದ್ದು, ಅಂದಾಜು 1000 ವರ್ಷ ಕಾಲ ಬದುಕುತ್ತವೆ ಎನ್ನಲಾಗಿದೆ. ಪ್ರತಿ ಮರಕ್ಕೂ ತಲಾ 47ಲಕ್ಷ ರೂ.ನಂತೆ 94 ಲಕ್ಷ ರೂ ಕೊಟ್ಟು ಖರೀದಿಸಲಾಗಿದೆ. ಈ ಮರವು ಬಹಳ ಶುಭದಾಯಕ ಎಂಬ ನಂಬಿಕೆಯಿದೆ. ಮನೆಯಲ್ಲಿ ಈ ಮರವಿದ್ದರೆ ಅದರಿಂದ ಅದೃಷ್ಟ ಒಲಿಯುತ್ತದೆ ಎನ್ನುವ ಕಾರಣದಿಂದ ಅಂಬಾನಿ ಇದನ್ನು ತರಿಸಿಕೊಂಡಿದ್ದಾರೆ ಎನ್ನಲಾಗಿದೆ.

ಈ ಎರಡು ಮರಗಳು ವಿಶೇಷ ಟ್ರಕ್ ಮೂಲಕ ತೆಲಂಗಾಣ, ಮಹಾರಾಷ್ಟ್ರದ ಮೂಲಕ ಹಾದು ಹೋಗಿ ಗುಜರಾತ್ ನ ಜಾಮ್ ನಗರದಲ್ಲಿರುವ ಅಂಬಾನಿ ಮನೆಗೆ ಕಳುಹಿಸಿಕೊಡಲಾಗಿದೆ. ಸುಮಾರು 1,800 ಕಿಮೀ ದೂರ ಕ್ರಮಿಸಿ ಅಂಬಾನಿ ಮನೆ ತಲುಪಿದೆ.

vtv vitla
vtv vitla
- Advertisement -

Related news

error: Content is protected !!